
ಉಡುಪಿ: ಕರ್ನಾಟಕ ಸರ್ಕಾರದ ನಗರ ಕೇಂದ್ರ ಗ್ರಂಥಾಲಯ, ಗ್ರಂಥಾಲಯ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ನಡೆಯುವ ’ಗ್ರಂಥಾಲಯದಲ್ಲಿ ನಮ್ಮ ಸಾಹಿತಿ’ ಕಾರ್ಯಕ್ರಮದಲ್ಲಿ ಈ ವಾರ ಉದಯವಾಣಿಯ ನಿವೃತ್ತ ಉಪಸಂಪಾದಕರಾದ *ಶ್ರೀ ಎಸ್. ನಿತ್ಯಾನಂದ ಪಡ್ರೆ ಅವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾವ್ಯ ಸಾಹಿತ್ಯವು ನಮ್ಮ ಜೀವನಕ್ಕೆ ಎಷ್ಟು ಮುಖ್ಯ ಎಂಬುದರ ಕುರಿತು ಸೂಕ್ಷ್ಮ ಒಳನೋಟಗಳನ್ನು ನೀಡಿದರು. ಜೊತೆಗೆ ಇಂದಿನ ಆಡುಭಾಷೆಯಲ್ಲಿ ಆಗುತ್ತಿರುವ ದೋಷಗಳನ್ನು ಉದಾಹರಣೆಗಳ ಮೂಲಕ ವಿವರಿಸಿ, ಭಾಷಾ ಬಳಕೆಯ ಬಗ್ಗೆ ಜಾಗೃತಿ ಮೂಡಿಸಿದರು.
ಇದು ಜಿಲ್ಲಾಧಿಕಾರಿಗಳಾದ ಟಿ.ಕೆ. ಸ್ವರೂಪ ಅವರ ಕನಸಿನ ಕಾರ್ಯಕ್ರಮವಾಗಿದ್ದು ನಿರಂತರವಾಗಿ ನಡೆಯಲಿದೆ ಎಂದು ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ. ಅವರು ತಿಳಿಸಿದರು.
ಸಮಾರಂಭದಲ್ಲಿ ಉಡುಪಿ ನಗರ ಕೇಂದ್ರ ಗ್ರಂಥಾಲಯಾಧಿಕಾರಿ ರಂಜಿತಾ ಸಿ, (ಪ್ರಭಾರ ) ಕಸಾಪ ಉಡುಪಿ ತಾಲೂಕು ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು, ರಂಜಿನಿ ವಸಂತ್, ಸಾಂಸ್ಕೃತಿಕ ಕಾರ್ಯದರ್ಶಿ ವಸಂತ್ ಮತ್ತಿತರರು ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now