ಶಂಕರಪುರ : ಸಂತ ಜೋನ್ಸ್ ಪ್ರೌಢಶಾಲೆ ಸಿಬ್ಬಂದಿಗೆ ಗೌರವಪೂರ್ಣ ವಿದಾಯ

ಶಂಕರಪುರ : ಸಂತ ಜೋನ್ಸ್ ಪ್ರೌಢಶಾಲೆ ಸಿಬ್ಬಂದಿಗೆ ಗೌರವಪೂರ್ಣ ವಿದಾಯ
0Shares

ಶಂಕರಪುರ : 39 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ, ಇಂದು ತಮ್ಮ ಸೇವೆಯಿಂದ ವಯೋನಿವೃತ್ತಿಗೊಂಡ ಸಂತ ಜೋನ್ಸ್ ಪ್ರೌಢಶಾಲೆಯ ಸಿಬ್ಬಂದಿಗೆ ಚರ್ಚಿನ ಕಮ್ಯೂನಿಟಿ ಸಭಾಭವನದಲ್ಲಿ ಗೌರವ ಪೂರ್ಣ ವಿದಾಯ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಉದ್ಯಾವರ ಸಂಪಿಗೆ ನಗರದ ಮೆಲ್ವಿನ್ ದಾಂತಿ ಇಂದು ವಯೋನಿವೃತ್ತಿ ಗೊಂಡವರು. ಅತ್ಯಂತ ಸರಳ ಸ್ವಭಾವದವರಾಗಿರುವ ಇವರು, ತನ್ನ ಹಸನ್ಮುಖಿ ಸೇವೆಯ ಮೂಲಕ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಪ್ರೀತಿಗೆ ಪಾತ್ರರಾಗಿದ್ದರು. 37 ವರ್ಷಗಳ ಕಾಲ ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಇವರು, ಕಳೆದ ಎರಡು ವರ್ಷಗಳಿಂದ ಶಂಕರಪುರ ಸಂತ ಜೋನ್ಸ್ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ಇಂದು ವಯೋನಿವೃತ್ತಿಗೊಂಡರು. ಮೆಲ್ವಿನ್ ದಾಂತಿಯವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಪತ್ನಿ, ಮಗಳ ಸಮೇತ ಇಂದು ಸನ್ಮಾನಿಸಲಾಯಿತು.

ವಿದಾಯ ಸಮಾರಂಭದ ಅಧ್ಯಕ್ಷತೆಯನ್ನು ಸಂತ ಜೋನ್ಸ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವO. ಫಾ. ಡಾ.ಪ್ರಕಾಶ್ ಅನಿಲ್ ಕಸ್ತಲಿನೊ ವಹಿಸಿ, ಮೆಲ್ವಿನ್ ದಾಂತಿಯವರ ಸೇವೆಯ ಗುಣಗಾನ ಮಾಡಿದರು. ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಜೋನ್ ಮಾರ್ಟಿಸ್, ಕಾರ್ಯದರ್ಶಿಯ ಆನಂದ ಮೆಲ್ವಿನ್ ಡಿಸೋಜ, ಆಯೋಗಗಳ ಸಂಯೋಜಕಿ ಅನಿತಾ ಡಿಸೋಜಾ, ಸOತ ಜೋನ್ಸ್ ಶಾಲೆಗಳ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಫ್ರಾನ್ಸಿಸ್ ಪ್ರಕಾಶ್ ಡಿಸೋಜಾ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಮಂಗಳ, ಶಾಲಾ ವಿದ್ಯಾರ್ಥಿ ನಾಯಕಿ ಕುಮಾರಿ ಸುಮಯ್ಯ ಬಾನು ಇವರೆಲ್ಲರ ಸಮಕ್ಷಮದಲ್ಲಿ ಮೆಲ್ವಿನ್ ದಾಂತಿ ಹಾಗೂ ಅವರ ಧರ್ಮಪತ್ನಿ ನೈನ ದಾಂತಿ ಇವರನ್ನು ಸನ್ಮಾನಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯರಾದ ಅಶ್ವಿನ್ ರೊಡ್ರಿಗಸ್ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಮಹಮ್ಮದ್ ಮುಸ್ತಫಾ ಹಾಗೂ ಪ್ರತಿಕ್ಷ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಕ್ಷಕರ ಪರವಾಗಿ ಸುನಿತಾ ಲೀನಾ ಡಿಸೋಜ ಹಾಗೂ ಅಸುOತಾ ಲೋಬೋ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮೆಲ್ವಿನ್ ದಾOತಿ ಸೇವೆ ಸಲ್ಲಿಸಿದ ಉದ್ಯಾವರ ಸOತ ಫ್ರಾನ್ಸಿಸ್ ಕ್ಸೇವಿಯರ್ ಪ್ರೌಢಶಾಲೆಯ ಶಿಕ್ಷಕ ಶಿಕ್ಷಕಿಯರು ಸನ್ಮಾನಿಸಿದರು.

ಶಿಕ್ಷಕಿ ಅರ್ಚನಾ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಶಶಿಕಲಾ ಸರ್ವರಿಗೂ ಕೃತಜ್ಞತೆಗಳನ್ನು ಸಮರ್ಪಿಸಿದರು. ಕಾರ್ಯಕ್ರಮದ ನಂತರ ಸಹ ಭೋಜನವನ್ನು ಏರ್ಪಡಿಸಲಾಗಿತ್ತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now