
ಉಡುಪಿ: ಬ್ರಹ್ಮಾವರದ ಗಾಂಧಿನಗರದಲ್ಲಿ ಪುತ್ರನೊರ್ವ ಹೆತ್ತವರನ್ನು ಸುತ್ತಿಗೆಯಲ್ಲಿ ಹೊಡೆದು ಹತ್ಯೆಗೈದ ಘಟನೆ ಕಳೆದ ರಾತ್ರಿ ನಡೆದಿದೆ.
ಶಾಹಿದ್ ಆಲಿ(25) ಹತ್ಯೆಗೈದ ಆರೋಪಿ, ಇತ ಕಳೆದ ರಾತ್ರಿ ಯಾವುದೋ ವಿಚಾರಕ್ಕೆ ಹೆತ್ತವರನ್ನು ಸುತ್ತಿಗೆಯಲ್ಲಿ ಹೊಡೆದು ಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.
: ಬ್ರಹ್ಮಾವರ ಬೈಕಾಡಿ ಗಾಂಧಿನಗರದಲ್ಲಿ ಜೋಡಿ ಕೊಲೆ ನಡೆದಿದೆ. ಶಾಯಿದ್ ಅಲಿ(25) ಎಂಬವನು ತನ್ನ ತಂದೆ ಮಹಮ್ಮದ್ ಅಲಿ ಹಾಗೂ ತಾಯಿ ಸಂಶದ್ ಬೇಗಂ ಎಂಬವರನ್ನು ಸುತ್ತಿಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಂದೆ ಮಲ್ಪೆಯಲ್ಲಿ ಮೀನು ಸಾಗಾಟ ವಾಹನದ ಡ್ರೈವರ್ ಆಗಿದ್ದಾರೆ.
ಶಾಯಿದ್ ಅಲಿ ಝೂಮೊಟೋ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದು ಆ ಕೆಲಸವನ್ನು ಸರಿಯಾಗಿ ಮಾಡದೆ ಮನೆಯಲ್ಲೇ ಇರುತ್ತಿದ್ದ ಎನ್ನಲಾಗಿದೆ. ಸ್ಥಳಿಯರು ನಿನ್ನೆ ರಾತ್ರಿ ಕೊಲೆ ನಡೆಸಿರಬಹುದು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ.
ಸುತ್ತಿಗೆಯಲ್ಲಿ ಹೊಡೆದು ಕೊಂದಿದ್ದ ಎನ್ನಲಾಗುತ್ತಿದ್ದು ಈತನೇ ಪೋಲೀಸರಿಗೆ ಫೋನ್ ಮಾಡಿ ತಿಳಿಸಿದ್ದ ಎನ್ನಲಾಗಿದ್ದು ಪೋಲೀಸರು ಸ್ಥಳಕ್ಕೆ ಆಗಮಿಸಿ ಅವನನ್ನು ವಶಕ್ಕೆ ಪಡೆದಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now