
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಮಲ್ಲಿಕಾ ಶೆಟ್ಟಿಯವರಿಗೆ ಶ್ರೀನಿವಾಸ ವಿಶ್ವವಿದ್ಯಾಲಯವು ‘ಎಂಟನೇ ತರಗತಿಯ ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯದ ಸಾಮರ್ಥ್ಯಗಳು, ಆಯ್ದ ಕನ್ನಡ ಭಾಷಾ ಸಾಮರ್ಥ್ಯಗಳು, ವೈಜ್ಞಾನಿಕ ತಾರ್ಕಿಕ ಚಿಂತನಾ ಸಾಮರ್ಥ್ಯ ಹಾಗೂ ವಿಜ್ಞಾನ ವಿಷಯದ ಶೈಕ್ಷಣಿಕ ಸಾಧನೆಯನ್ನು ಅಭಿವೃದ್ಧಿಪಡಿಸುವಲ್ಲಿ ಅಂತರಶಿಸ್ತೀಯ ಬಹುಮಾಧ್ಯಮ ಬೋಧನಾ ವಿಧಾನವು ಬೀರುವ ಪರಿಣಾಮಕಾರಿತ್ವದ ಅಧ್ಯಯನ’ ಎಂಬ ಪ್ರಬಂಧಕ್ಕಾಗಿ ಪಿಎಚ್‌ಡಿ ಪದವಿಯನ್ನು ನೀಡಿದೆ.
ಅಲೋಶಿಯಸ್ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಪಕಿ ಡಾ. ವಿಜಯಲಕ್ಷ್ಮಿ ನಾಯಕ್‌ರವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧವನ್ನು ಯಶಸ್ವಿ
ಯಾಗಿ ಪೂರೈಸಿದ್ದಾರೆ.
ಇವರು ತಮ್ಮ ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಬಿಎಡ್ ಶಿಕ್ಷಣವನ್ನು ಆಳ್ವಾಸ್‌ನಲ್ಲಿ ಪೂರೈಸಿ
ದ್ದರು.
ಮೂಡುಬಿದಿರೆಯ ಪುಚ್ಚೆಮೊಗರಿನ ದಿವಂಗತ ಭೋಜ ಶೆಟ್ಟಿ ಹಾಗೂ ಸುಲೋಚನ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದು, ಅನಿವಾಸಿ ಉದ್ಯೋಗಿ ರಾಜೇಶ್ ಶೆಟ್ಟಿಯವರ ಪತ್ನಿಯಾಗಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now