6 ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಕೊಲೆ ಯತ್ನ ಆರೋಪಿ ಕುಂದಾಪುರದಲ್ಲಿ ವಶಕ್ಕೆ

6 ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಕೊಲೆ ಯತ್ನ ಆರೋಪಿ ಕುಂದಾಪುರದಲ್ಲಿ ವಶಕ್ಕೆ
0Shares

ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ವಾರೆಂಟ್‌ ಆಸಾಮಿಯಾದ ಪ್ರಸಾದ್‌ @ ರಬಡ(22) , ಹಟ್ಟಿಯಂಗಡಿ ಗ್ರಾಮ, ಕುಂದಾಪುರ ತಾಲೂಕು ಜಿಲ್ಲೆ ಎಂಬಾತನ ಮೇಲೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ- 4, ಕುಂದಾಪುರ ನಗರ ಠಾಣೆಯಲ್ಲಿ- 2 ಪ್ರಕರಣ ಮತ್ತು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ- 1 ರಂತೆ ಕೊಲೆಯತ್ನ, ಕಳ್ಳತನ ಹಾಗೂ NDPS ನಂತಹ ಒಟ್ಟು 7 ಪ್ರಕರಣಗಳು ದಾಖಲಾಗಿರುತ್ತದೆ. ಈತನ ಮೇಲೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕುಂದಾಪುರದ SC No: 504/2025, SC No:527/2025ರಲ್ಲಿ NBW ವಾರೆಂಟ್‌ ಹೊರಡಿಸಿರುತ್ತದೆ.

ಈತನ ವಿರುದ್ದ 2026ನೇ ಫೆಬ್ರವರಿ ತಿಂಗಳಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ : 07/2026 ಕಲಂ: 109, 352, 351(2), 118(2) R/w 3(5) BNS ರಂತೆ ಪ್ರಕರಣ ದಾಖಲಾಗಿದ್ದು ಸುಮಾರು 6 ತಿಂಗಲಿಂದ ತಲೆಮರೆಸಿಕೊಂಡಿರುವುದಾಗಿದೆ. ದಿನಾಂಕ: 16.07.2026ರಂದು ಬೆಳಗ್ಗಿನ ಜಾವ ಭಟ್ಕಳದಲ್ಲಿ ಇರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸ್ ವೃತ್ತ ನಿರೀಕ್ಷಕರು ಸಂತೋಷ ಎ ಕಾಯ್ಕಿಣಿ ರವರ ಮಾರ್ಗದರ್ಶನದಲ್ಲಿ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸ್‌ ಉಪನಿರೀಕ್ಷಕರು (ಕಾ.ಸು) ನಿರಂಜನ್‌ ಗೌಡ ಮತ್ತು ಪೊಲೀಸ್‌ ಉಪನಿರೀಕ್ಷಕರು (ತನಿಖೆ) ಚಂದ್ರಕಲಾ ಮ ಪತ್ತಾರ ರವರ ನೇತ್ರತ್ವದಲ್ಲಿ ಠಾಣಾ ಸಿಬ್ಬಂದಿಯವರಾದ ಪಿಸಿ ಶ್ರೀಧರ್‌ ಪಾಟೀಲ್‌ ಮತ್ತು ಪಿಸಿ ಕಿರಣ್‌ ಬಿ ಪಾಟೀಲ್ ರವರು ಸದ್ರಿ ಸ್ಥಳಕ್ಕೆ ತೆರಳಿ ವಾರೆಂಟ್‌ ಆಸಾಮಿ ಪ್ರಸಾದ್‌@ರಬಡನನ್ನು ವಶಕ್ಕೆ ಪಡೆದುಕೊಂಡಿದ್ದು, ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕುಂದಾಪುರಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now