ರಾಜ್ಯದಲ್ಲಿ ಭಾರಿ ಮಳೆ: ಕರಾವಳಿಯಲ್ಲಿ ರೆಡ್ ಅಲರ್ಟ್

ರಾಜ್ಯದಲ್ಲಿ ಭಾರಿ ಮಳೆ: ಕರಾವಳಿಯಲ್ಲಿ ರೆಡ್ ಅಲರ್ಟ್
0Shares

ರಾಜ್ಯದಲ್ಲಿ ಮುಂಗಾರು ಮಾರುತಗಳು ತೀವ್ರಗೊಂಡಿದ್ದು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ. ಹವಾಮಾನದ ತೀವ್ರತೆಯನ್ನು ಆಧರಿಸಿ ಭಾರತೀಯ ಹವಾಮಾನ ಇಲಾಖೆ (weather) ಜಿಲ್ಲಾವಾರು ಯೆಲ್ಲೋ ಮತ್ತು ರೆಡ್ ಅಲರ್ಟ್​ಗಳನ್ನು ಘೋಷಿಸಿದೆ. ಪ್ರವಾಹ ಮತ್ತು ಭೂಕುಸಿತದ ಭೀತಿ ಇರುವುದರಿಂದ ಸಾರ್ವಜನಿಕರ ಸುರಕ್ಷತೆಗಾಗಿ ಈ ಅಲರ್ಟ್‌ಗಳನ್ನು ನೀಡಲಾಗಿದೆ.

ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಜುಲೈ ಮೊದಲ ವಾರದಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಈ ಭಾಗಗಳಲ್ಲಿ ಸಾಧಾರಣದಿಂದ (64.5 mm 2 115.4 mm 8) ಸಾಧ್ಯತೆಯಿದೆ. ಸಿಡಿಲು ಮತ್ತು ಗಂಟೆಗೆ 30-40 ಕಿ.ಮೀ ವೇಗದ ಬಲವಾದ ಗಾಳಿ ಬೀಸಬಹುದು. ಸದ್ಯಕ್ಕೆ ತಕ್ಷಣದ ಅಪಾಯವಿಲ್ಲದಿದ್ದರೂ, ಹವಾಮಾನದ ಬದಲಾವಣೆಗಳ ಮೇಲೆ ಕಣ್ಣಿಡಬೇಕು. ಪ್ರಯಾಣದ ಯೋಜನೆಗಳಿದ್ದರೆ ರಸ್ತೆಗಳಲ್ಲಿ ನೀರು ನಿಲ್ಲುವ ಅಥವಾ ಮರಗಳು ಬೀಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now