ನಾಗರಿಕ ಸಮಿತಿ ಶಂಕರಪುರ : ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಿಗೆ ನಾಗರಿಕ ಸನ್ಮಾನ

ನಾಗರಿಕ ಸಮಿತಿ ಶಂಕರಪುರ : ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಿಗೆ ನಾಗರಿಕ ಸನ್ಮಾನ
0Shares

ಶಂಕರಪುರ : ನಾಗರಿಕ ಸಮಿತಿ ನೇತೃತ್ವದಲ್ಲಿ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಲೆಸ್ಲಿ ಕ್ಲಿಪರ್ಡ್ ಡಿಸೋಜ ಇವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮ ಶಂಕರಪುರದ ಬಿ.ಎಂ.ಜೆ ಸಭಾಭವನದಲ್ಲಿ ನಡೆಯಯಿತು.

ಪ್ರಧಾನ ಧರ್ಮಗುರುಗಳಾಗಿ ಪ್ರಥಮ ಸೇವಾ ಕೈಂಕರ್ಯವನ್ನು ಶಂಕರಪುರ ಸೈಂಟ್ ಜೋನ್ಸ್ ಚರ್ಚಿನಲ್ಲಿ ಪ್ರಾರಂಭಿಸಿ ಸರ್ವಧರ್ಮೀಯರ ಪ್ರೀತಿ ಪಾತ್ರರಾಗಿ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಪರಿಸರ ಸಂರಕ್ಷಣೆಯ ಹಲವಾರು ಕಾರ್ಯಕ್ರಮದ ಮೂಲಕ ಸರ್ವ ಧರ್ಮದ ಜನರ ಪ್ರೀತಿಪಾತ್ರರಾದ ಅತಿ ವಂದನಿಯ ಬಿಷಪ್ ರವರನ್ನು ಸಾರ್ವಜನಿಕರ ಸಮ್ಮುಖದಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಬಿಷಪ್ ಡಾ. ಲೆಸ್ಲಿ ಡಿಸೋಜಾ ರವರು ಮಾತನಾಡಿ, ಸಮಾಜದಲ್ಲಿ ಸಹೋದರತೆ ಮತ್ತು ಪರಸ್ಪರ ಪ್ರೀತಿಯಿಂದ ಬದುಕಿದರೆ ಒಂದು ಸದೃಢ ಮತ್ತು ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಜೀವನದಲ್ಲಿ ಕಠಿಣ ದುಡಿಮೆ ಪರೋಪಕಾರದ ಕೆಲಸಗಳಿಂದ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು ಎಂಬ ಅನುಗ್ರಹ ಸಂದೇಶವನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ಶಂಕರಪುರ ಸೈಂಟ್ ಜೋನ್ಸ್ ಚರ್ಚ್ ಪ್ರಧಾನ ಧರ್ಮ ಗುರುಗಳಾದ ವಂದನೀಯ ಡಾ. ಅನಿಲ್ ಪ್ರಕಾಶ್ ಕಸ್ತಲಿನೋ, ಖ್ಯಾತ ವಾಗ್ಮಿ ಮತ್ತು ಧಾರ್ಮಿಕ ಚಿಂತಕ ದಾಮೋದರ ಶರ್ಮಾ ಬಾರ್ಕೂರು ಹಾಗೂ ಸುಭಾಷ್ ನಗರ ಜಾಮಿಯಾ ಮಸೀದಿಯ ಧರ್ಮಗುರುಗಳಾದ ಯೂಸುಫ್ ಜಾಹಿರ್ ವಿಟ್ಲ ಸೌಹಾರ್ದ ಸಂದೇಶ ನೀಡಿದರು.

ನಾಗರಿಕ ಸಮಿತಿ ಅಧ್ಯಕ್ಷ ಸಂದೀಪ್ ಬಂಗೇರ ಸ್ವಾಗತಿಸಿದರೆ, ಎಡ್ವರ್ಡ್ ಲೋಬೊ ಧನ್ಯವಾದ ಸಮರ್ಪಿಸಿದರು. ಸನ್ಮಾನ ಸಮಿತಿಯ ಗೌರವಾಧ್ಯಕ್ಷರಾದ ಅಂತೋನಿ ಡೆಸಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಭಿನಂದನ ನುಡಿಗಳನ್ನು ನವೀನ್ ಅಮೀನ್, ಬಿಷಪ್ ಪರಿಚಯವನ್ನು ಸೀಮಾ ಮಾರ್ಗರೇಟ್ ಡಿಸೋಜಾ ಸಭೆಗೆ ನೀಡಿದರು. ಸಂತೋಷ್ ಕುಮಾರ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸೈಂಟ್ ಜೋನ್ಸ್ ಶಾಲಾ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ನಡೆಯಿತು.

ಚಿತ್ರಗಳು : ದಿನ್ನು ಸ್ಟುಡಿಯೋ, ಶಂಕರಪುರ

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now