
ಉಡುಪಿ: ಧ್ವನಿ ಬೆಳಕು ಸಂಯೋಜಕರ ಸಂಘಟನೆ ಉಡುಪಿ ಜಿಲ್ಲೆ ಇದರ ಉಡುಪಿ ವಲಯದ 15ನೇ ವಾರ್ಷಿಕ ಮಹಾಸಭೆಯು ಕುಮಾರ್ ಎಸ್ ಬಂಗೇರ ಇವರ ಅಧ್ಯಕ್ಷತೆಯಲ್ಲಿ ಉಡುಪಿಯ ಯುಬಿಎಂಸಿ ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಉಡುಪಿ ವಲಯದ 4 ಹಿರಿಯ ಸದಸ್ಯರಾದ ಪ್ರಕಾಶ್ ಕುಲಾಲ್, ಅಬ್ದುಲ್ ಸಮದ್, ಪೀಟರ್ ಡಿಸೋಜಾ ಹಾಗೂ ಸದಾಶಿವ ಆಚಾರ್ಯರನ್ನು ಗೌರವಿಸಲಾಯಿತು. ಸಂಘಟನೆಯ ಮಹಾಲಕ್ಷ್ಮೀ ವಿದ್ಯಾನಿಧಿಯಿಂದ 16 ಮಕ್ಕಳಿಗೆ ಧನಸಹಾಯ ನೀಡಿ ಪ್ರೋತ್ಸಾಹಿಸಲಾಯಿತು.
ಸಮಾಜಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ಮುಡಿಪಾಗಿಟ್ಟ ನಿತ್ಯಾನಂದ ಒಳಕಾಡು ಅವರಿಗೆ ಸಂಘಟನೆಯ ವತಿಯಿಂದ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ನಿತ್ಯಾನಂದ ಒಳಕಾಡು, ಸಮಾಜ ಸೇವೆಯನ್ನು ಗುರುತಿಸಿ ತನ್ನನ್ನು ಸನ್ಮಾನಿಸಿದ್ದಕ್ಕೆ ಸಂಘಟನೆಗೆ ಅವರು ಧನ್ಯವಾದ ಸಲ್ಲಿಸಿ, ಜನಸೇವೆಗೆ 24 ಗಂಟೆಯೂ ಸದಾ ಮುಡಿಪಾಗಿಡುವೆ ಎಂದು ತಿಳಿಸಿದರು.

ಸಂಘಟನೆಯು ನಿರ್ವಹಿಸಿದ ಕ್ರಿಕೆಟ್ ಪಂದ್ಯಾಕೂಟದ ಟ್ರೋಫಿಯನ್ನು ಸಮಾಜಸೇವಕ ಹಾಗೂ ಪ್ರಾಯೋಜಕರಾದ ಕೃಷ್ಣಮೂರ್ತಿ ಆಚಾರ್ಯ ವಿತರಿಸಿದರು. ಈ ವೇಳೆ ಮಾತನಾಡಿದ ಕೃಷ್ಣ ಮೂರ್ತಿ ಆಚಾರ್ಯ, ಧ್ವನಿ ಬೆಳಕು ಸಂಘಟನೆ ಇತರ ಸಂಘಟನೆಗಳಿಗಿಂತ ವಿಭಿನ್ನವಾಗಿದ್ದು, ಸಮಾಜಮುಖಿ ಕಾರ್ಯಗಳಿಗೂ ಪ್ರಾತಿನಿಧ್ಯತೆ ನೀಡುತ್ತಿದ್ದು ನಿಮ್ಮೊಂದಿಗೆ ಸದಾ ಇರುವುದಾಗಿ ಶುಭ ಹಾರೈಸಿದರು.
ವಲಯದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಡೊನ್ ಡಿಸೋಜಾ ಹಾಗೂ ಲೆಕ್ಕಪತ್ರವನ್ನು ಕೋಶಾಧಿಕಾರಿ ಪ್ರಕಾಶ್ ಮಂಡಿಸಿದರು. ಜಿಲ್ಲಾಧ್ಯಕ್ಷ ಸತೀಶ್ ಶುಭ ಹಾರೈಸಿದರು. ಪ್ರಕಾಶ್ ನಾಯ್ಕ ಸ್ವಾಗತಿಸಿ, ಸಂತೋಷ್ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡೋನ್ ಡಿಸೋಜಾ ವಂದಿಸಿ, ಶಾಂತರಾಮ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now