ಕುಮಾರಧಾರ ನದಿ ಬಳಿ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರಿಂದ ಸ್ಥಳ ಪರಿಶೀಲನೆ.

ಕುಮಾರಧಾರ ನದಿ ಬಳಿ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರಿಂದ ಸ್ಥಳ ಪರಿಶೀಲನೆ.
0Shares

ಕುಮಾರಧಾರ ನದಿ ಬಳಿ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರಿಂದ ಸ್ಥಳ ಪರಿಶೀಲನೆ.

ಪುತ್ತೂರು:ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ವೀರಮಂಗಲಕ್ಕೆ ಅವನೃತ ಸ್ನಾನಕ್ಕೆ ಬರುವ ರಸ್ತೆಯನ್ನು 30 ಅಡಿಯಷ್ಟು ಅಗಲೀಕರಣಗೊಳಿಸಬೇಕು ಎಂಬುದು ಭಕ್ತರ ಬೇಡಿಕೆಯಾಗಿದೆ.ಇದಕ್ಕಾಗಿ ರಸ್ತೆಗೆ ಸಂಬಂಧಪಟ್ಟ ಕೃಷಿಕರಲ್ಲಿ ಮಾತನಾಡಿ ಮನವೊಲಿಸಲಾಗುವುದು.ಕಾನೂನು ಪ್ರಕಾರ ಹೋದರೆ ಅವರಲ್ಲಿ ಹೆಚ್ಚುವರಿ ಜಾಗಗಳಿವೆ.ಅವರೂ ದೇವರಿಗಾಗಿ ಬಿಟ್ಟುಕೊಡಲು ತಯಾರಿರಬಹುದು ಎಂಬ ಭಾವನೆ ನಮ್ಮಲ್ಲಿದೆ.ಜಾಗ ಅವರು ಬಿಟ್ಟುಕೊಟ್ಟರೆ ಅಭಿವೃದ್ಧಿ ನಾವು ಮಾಡುತ್ತೇವೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ಅವಭ್ರತ ಸ್ನಾನಕ್ಕೆ ತೆರಳುವ ವೀರಮಂಗಲದ ಕುಮಾರಧಾರ ನದಿ ಬಳಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ಸ್ಥಳ ಪರಿಶೀಲನೆ ನಡೆಸಿ ಪತ್ರಕರ್ತರೊಂದಿಗೆ ಮಾತನಾಡಿದರು. ದೇವರು ಹಲವು ಕಿ.ಮೀ. ದೂರದಿಂದ ಈ ಗ್ರಾಮಕ್ಕೆ ಬಂದು ನದಿಯಲ್ಲಿ ಸ್ನಾನ ಮಾಡಿದ ಬಳಿಕ ಇಡೀ ಭಕ್ತ ಜನ ಸಂಕುಲವೇ ನೀರಿನಲ್ಲಿ ಸ್ನಾನ ಮಾಡುವಂಥ ವಿಶಿಷ್ಠ ಆಚರಣೆ ಪುತ್ತೂರಿನಲ್ಲಿದೆ. ಇಂತಹ ಆಚರಣೆ ಬೇರೆ ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಇದನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಮಾಡುವ ಯೋಚನೆಯಿದೆ.ಇದಕ್ಕಾಗಿ ಸ್ಥಳ ವೀಕ್ಷಣೆ ಮಾಡಿದ್ದು ಇಲ್ಲಿ ಸುಮಾರು 18 ಎಕರೆ ಸರಕಾರಿ ಜಾಗವಿದೆ. ಇಲ್ಲಿಗೆ ಬರುವ ಭಕ್ತಾದಿಗಳಿಗೆ ವಾಹನ ನಿಲುಗಡೆ, ಶೌಚಾಲಯ, ಮಹಿಳೆಯರಿಗೆ ಉಡುಪು ಬದಲಾಯಿಸುವ ಕೊಠಡಿಗಳ ಕೊರತೆಯಿದ್ದು ನದಿ ನೀರು ಮಲಿನವಾಗುವ ಸಾಧ್ಯತೆಗಳಿವೆ. ಇದಕ್ಕಾಗಿ ನದಿಯಲ್ಲಿ ಸುಮಾರು 4 ಅಡಿಯಷ್ಟು ನೀರು ನಿಂತು, ವಿಸ್ತಾರವಾಗಿರಬೇಕು.

ಕಠಾರದಲ್ಲಿ ರೂ.100 ಕೋಟಿಯ ಅಣೆಕಟ್ಟಿನ ಪ್ರಸ್ತಾವನೆಯಿದ್ದು ಅದು ಆದಾಗ ಇಲ್ಲಿಯೂ ನೀರು ಸಂಗ್ರಹವಾಗಲಿದೆ.ಇಲ್ಲಿ ತಡೆಗೋಡೆ,ಶೌಚಾಲಯ ನಿರ್ಮಾಣ ಹಾಗೂ ರಸ್ತೆ ಅಗಲೀಕರಣಗೊಳ್ಳಬೇಕಿದೆ ಎಂದು ಶಾಸಕರು ತಿಳಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now