ಬಾಲಿವುಡ್ ಚಿತ್ರರಂಗದ ಖ್ಯಾತ ಪೋಷಕ ನಟ ಭರತ್ ಕಪೂರ್ ನಿಧನ

ಬಾಲಿವುಡ್ ಚಿತ್ರರಂಗದ ಖ್ಯಾತ ಪೋಷಕ ನಟ ಭರತ್ ಕಪೂರ್ ನಿಧನ

0Shares

ಮುಂಬಯಿ: ಹಿಂದಿ ಚಿತ್ರರಂಗದ ಖ್ಯಾತ ಪೋಷಕ ನಟ

ಭರತ್ ಕಪೂರ್ (80) ಅವರು ವಯೋಸಹಜ ಕಾಯಿಲೆಗಳಿಂದಾಗಿ ಸೋಮವಾರ (ಏಪ್ರಿಲ್ 27) ಮುಂಬೈನಲ್ಲಿ ನಿಧನ ಹೊಂದಿದರು.

ಮುಂಬೈನ ಸಿಯಾನ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದು, ಬಹು ಅಂಗಾಂಗ ವೈಫಲ್ಯದಿಂದ ಚಿಕಿತ್ಸೆ ಫಲಿಸದೆ ಅವರು ಲೋಕ ತ್ಯಜಿಸಿದ್ದಾರೆ.

ನಟ ಅವತಾ‌ರ್ ಗಿಲ್ ಅವರು ಈ ಸುದ್ದಿಯನ್ನು ಖಚಿತಪಡಿಸಿದ್ದು, “ಭರತ್ ಕಳೆದ ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅಂತ್ಯಕ್ರಿಯೆಯಲ್ಲಿ ರಾಕೇಶ್ ಬೇಡಿ, ನಿರ್ದೇಶಕ ರಮೇಶ್ ಕುಮಾರ್ ಸೇರಿದಂತೆ ಇಪ್ಪಾ (IPTA) ರಂಗತಂಡದ ಆಪ್ತರು ಭಾಗವಹಿಸಿದ್ದರು,” ಎಂದು ತಿಳಿಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now