
ದಿನಾಂಕ 17.10.2026 ರಂದು ಸಂಜೆ ಉಡುಪಿ ನಗರ ಪೊಲೀಸ್ ಠಾಣಾ ಪಿಎಸ್ಐ ಕಾ&ಸು ಭರತೇಶ್ ಕಂಕಣವಾಡಿ ರವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ದಿನಾಂಕ : 17/10/2026 ರಂದು 22:30 ಗಂಟೆಗೆ ಅಜ್ಜರಕಾಡು ಭುಜಂಗ ಪಾರ್ಕ್ ನ ಹತ್ತಿರ ಓರ್ವ ವ್ಯಕ್ತಿಯು ಅನುಮಾನಾಸ್ಪದವಾಗಿ ವರ್ತನೆ ಮಾಡುತ್ತಿರುವುದು ಕಂಡು ಬಂದಿದ್ದು, ಆತನು KA 20 EG 7918 ಸ್ಕೂಟರ್ ನಲ್ಲಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಕೂಡಲೇ ದಾಳಿ ನಡೆಸಿದ್ದು, ಸ್ಥಳದಲ್ಲಿದ್ದ ಆರೋಪಿಯನ್ನು ಪೊಲೀಸ್ ಸಿಬ್ಬಂದಿಗಳ ಸಹಾಯದಿಂದ ಹಿಡಿದು ವಿಚಾರಣೆ ನಡೆಸಿದಾಗ ತನ್ನ ಹೆಸರು ವಿಜಯ್ @ ವಿಜಯ್ ಪೂಜಾರಿ (36) ಅಂಕುದ್ರು ಉದ್ಯಾವರ ಕಾಪು ತಾಲೂಕು ಉಡುಪಿ ಜಿಲ್ಲೆ ಎಂಬಾತನು ಸ್ಕೂಟರ್ ನ ಡಿಕ್ಕಿಯಲ್ಲಿ ನಿಷೇಧಿತ ಮಾದಕ ವಸ್ತು MDMA ನ್ನು ಹೊಂದಿದ್ದು, ಅದನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಸ್ಥಳದಲ್ಲಿ ನಿಂತಿರುವುದಾಗಿ ತಿಳಿಸಿರುತ್ತಾನೆ. ನಂತರ ಅರೋಪಿಯು ಕಾನೂನುಬಾಹಿರವಾಗಿ ಮಾರಾಟ ಮಾಡುವ ಉದ್ದೇಶದಿಂದ ತನ್ನ ಸ್ಕೂಟರ್ ನ ಡಿಕ್ಕಿಯಲ್ಲಿಟ್ಟಿಕೊಂಡಿದ್ದ (1). 17.66 ಗ್ರಾಂ ತೂಕದ 09 ಜಿಪ್ ಕವರ್ ಗಳಲ್ಲಿರುವ Amphetamine/Methamphetamine ಅಂದಾಜು ಮೌಲ್ಯ ರೂ. 35,000/-, (2).ಮಾದಕವಸ್ತುವನ್ನು ತೂಕ ಮಾಡಲು ಬಳಸುತ್ತಿದ್ದ ತೂಕದ ಯಂತ್ರ-1 ಅಂದಾಜು ಮೌಲ್ಯ ರೂ. 2,000/-, (3). ಬೆಲೆಬಾಳದ ಸಣ್ಣ ಖಾಲಿ ಜಿಪ್ ಕವರ್ ಗಳು-07, (4).ನಿಖರವಾದ ಬೆಲೆ ತಿಳಿದುಬಾರದ ಪೇಪರ್ ನಲ್ಲಿ ಕಟ್ಟಿದ್ದ ಬಳಿ ಬಣ್ಣದ ಮಾತ್ರೆ ಮತ್ತು ಪೌಡರ್ ತೂಕ 2.18 ಗ್ರಾಂ, ನಂತರ ಆರೋಪಿಯನ್ನು ದಸ್ತಗಿರಿ ಮಾಡಲಾಗಿ ಆತನ ಕಿಸೆಯಲ್ಲಿದ್ದ (5). ವಿವೋ ವೈ16 ಮೊಬೈಲ್-1 ಅಂದಾಜು ಮೌಲ್ಯ ರೂ. 8000/-, (6). ಕೃತ್ಯಕ್ಕೆ ಬಳಸಿದ KA20EG7918 ನೇ ನಂಬ್ರದ ಸುಜುಕಿ ಆಕ್ಸಸ್ 125 ಸ್ಕೂಟರ್ ನ ಅಂದಾಜು ಮೌಲ್ಯ ರೂ. 40,000/-, ಸೊತ್ತುಗಳನ್ನು ವಶಪಡಿಸಿಕೊಂಡಿರುವುದಾಗಿದೆ ಹಾಗೂ ಆರೋಪಿತನನ್ನು ದಸ್ತಗಿರಿ ಮಾಡಲಾಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 141/2026, ಕಲಂ: (U/s-8(c),22(b)) ಎನ್ ಡಿ ಪಿಎಸ್ ಕಾಯಿದೆಯಂತೆ ಪ್ರಕರಣವನ್ನು ದಾಖಲಿಸಿಕೊಂಡು, ಉಡುಪಿ ನಗರ ಠಾಣ ಪಿಎಸ್ಐ ರತ್ನಾಕರ್ ಕೆ.ರವರು ತನಿಖೆಯನ್ನು ಕೈಗೊಂಡಿರುತ್ತಾರೆ.
ಆರೋಪಿತನ ವಿರುದ್ದ ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಈ ಕೆಳಗಿನಂತೆ ಪ್ರಕರಣಗಳು ದಾಖಲಾಗಿರುತ್ತವೆ.
1) ಉಡುಪಿ ನಗರ ಠಾಣಾ ಅಕ್ರ 95/2026 ಕಲಂ 8(c),22(b) ಎನ್ ಡಿಪಿಎಸ್ ಕಾಯಿದೆ.
2) ಉಡುಪಿ ನಗರ ಠಾಣಾ ಅಕ್ರ 92/2025 ಕಲಂ 8(c),22(b) ಎನ್ ಡಿಪಿಎಸ್ ಕಾಯಿದೆ.
3)ಉಡುಪಿ ನಗರ ಠಾಣಾ ಅಕ್ರ 192/2025 ಕಲಂ 3(1)(ಆರ್) 3(1) (ಎಸ್) 3(2) ಎಸ್ ಸಿ /ಎಸ್ ಟಿ ಕಾಯಿದೆ ಮತ್ತು 115(2) 352 304 (2) 3(5) ಬಿಎನ್ ಎಸ್
4) ಕಾಪು ಠಾಣಾ ಅಕ್ರ 147/2026 ಕಲಂ 27 ಬಿ ಎನ್ ಡಿಪಿಎಸ್ ಕಾಯಿದೆ.
ಈತನು ಸೆಪ್ಟಂಬರ್ 24 ರಂದು ಹಿರಿಯಡ್ಕ ಜೈಲ್ ನಿಂದ ದಬಿಡುಗಡೆ ಆಗಿರುತ್ತಾನೆ, ಅಲ್ಲದೇ ರೂಡಿಗತ ಆರೋಪಿಯಾಗಿರುತ್ತಾನೆ.
ಈ ಪ್ರಕರಣದಲ್ಲಿ ಮಾದಕ ವಸ್ತುಗಳ ಪತ್ತೆ ಮಾಡಿ ಸ್ವಾಧೀನಪಡಿಸಿಕೊಳ್ಳಲು ಮತ್ತು ಆರೋಪಿತರ ದಸ್ತಗಿರಿ ಬಗ್ಗೆ ಬೆಳ್ಳಿಯಪ್ಪ, ಡಿವೈಎಸ್ಪಿ ಉಡುಪಿ ಉಪವಿಭಾಗರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಮಹೇಶ ಪ್ರಸಾದ್.ಪಿ ರವರ ನೇತೃತ್ವದಲ್ಲಿ ಪತ್ತೆ ಕಾರ್ಯ ಕೈಗೊಂಡಿದ್ದು, ಉಡುಪಿ ನಗರ ಪೊಲೀಸ್ ಠಾಣಾ ಪಿಎಸ್ಐ ಭರತೇಶ್ ಕಂಕಣವಾಡಿ, ಪಿಎಸ್ಐ ರತ್ನಾಕರ್,ಕೆ ಠಾಣಾ ಸಿಬ್ಬಂದಿಯವರಾದ ಜೀವನ್ ಕುಮಾರ್ ಆನಂದ ಗಾಣಿಗ, ಪ್ರಸನ್ನ.ಸಿ , ಹೇಮಂತ್ , ಓಬಳೇಶ ಆನಂದಯ್ಯ ಇತರ ಸಿಬ್ಬಂದಿಯವರು ತನಿಖೆಗೆ ಸಹಕರಿಸಿರುತ್ತಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now