ಪಿಂಚಣಿ ಆದಾಯ ಮಿತಿ ರೂ 1.20 ಲಕ್ಷಕ್ಕೆ ಹೆಚ್ಚಳ : ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಹರೀಶ್ ಗಿಣಿ ಅಭಿನಂದನೆ

ಪಿಂಚಣಿ ಆದಾಯ ಮಿತಿ ರೂ 1.20 ಲಕ್ಷಕ್ಕೆ ಹೆಚ್ಚಳ : ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಹರೀಶ್ ಗಿಣಿ ಅಭಿನಂದನೆ
0Shares

ಪಿಂಚಣಿ ಆದಾಯ ಮಿತಿ ರೂ.1.20 ಲಕ್ಷಕ್ಕೆ ಹೆಚ್ಚಳ
ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಹರೀಶ್ ಕಿಣಿ ಅಭಿನಂದನೆ.
ಅಸಹಾಯಕ,ಅಶಕ್ತ ವ್ಯಕ್ತಿಗಳಿಗಾಗಿ ಹಾಗೂ ವಿಧವೆಯರಿಗಾಗಿ ಮತ್ತು ಅಂಗವಿಕಲರಿಗೆ ಅನೇಕ ಸಾಮಾಜಿಕ ಭದ್ರತಾ ಯೋಜನೆಗಳು ಕಂದಾಯ ಇಲಾಖೆಯ ಮೂಲಕ ರಾಜ್ಯ ಸರಕಾರ ಕಾರ್ಯಗತಗೊಳಿಸುತ್ತಿತ್ತು.
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ,ವಿಧವಾ ವೇತನ ಪಿಂಚಣಿ ಯೋಜನೆ,ವಿಕಲಾಂಗ ಯೋಜನೆ,ಸಂಧ್ಯಾ ಸುರಕ್ಷಾ ಯೋಜನೆ,ಮನಸ್ವಿನಿ ಯೋಜನೆ, ಮೈತ್ರಿ ಯೋಜನೆ ಒಂದು ಬಾರಿ ಸೌಲಭ್ಯ ಸಿಗುವ ಯೋಜನೆಗಳಾದ ರಾಷ್ಟ್ರೀಯ ಕುಟುಂಬ ನೆರವು ಯೋಜನೆ,ಅಂತ್ಯ ಸಂಸ್ಕಾರ ಸಹಾಯ ಯೋಜನೆಗಳ ಆದಾಯ ಮಿತಿಯನ್ನು ರೂ.32000 ದಿಂದ ರೂ.1 ಲಕ್ಷಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿರುವುದಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಕಳೆದ ಹಲವಾರು ತಿಂಗಳಿನಿಂದ ಫಲಾನುಭವಿಗಳ ಪರಿಶೀಲನೆ ಇಲಾಖೆ ನಡೆಸುತ್ತಿದ್ದು ಇದರಿಂದ ಫಲಾನುಭವಿಗಳು ತೊಂದರೆಗೀಡಾಗಿದ್ದರು.ಪರಿಶೀಲನೆ ಶೀಘ್ರವಾಗಿ ನಡೆಸಿ ರು.1.20 ಲಕ್ಷದ ಒಳಗಿನ ವಾರ್ಷಿಕ ಮಿತಿಯ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ಕೂಡಲೇ ದೊರೆಯುವಂತೆ ಮಾಡಬೇಕು ಎಂದು ಕಂದಾಯ ಸಚಿವ ಜಿ ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಲ್ಲಿ ಮನವಿ ಮಾಡಿದ್ದಾರೆ
ಕೇಂದ್ರ ಸರಕಾರದ ಸೂಚನೆಯಂತೆ ಬಿಪಿಎಲ್ ಕಾರ್ಡ್ ಗಳ ಕುರಿತು ಪರಿಶೀಲನೆ ನಡೆಯುತ್ತಿದ್ದು ಈಗಾಗಲೇ ಹಲವಾರು ಕಾರ್ಡ್ ಗಳು ರದ್ದಾಗಿವೆ.ಈ ಕುರಿತಾದ ಮಾನದಂಡಗಳನ್ನು ಮರು ಪರಿಶೀಲನೆ ನಡೆಸಿ ಈಗಿರುವ ಆದಾಯ ಮಿತಿಯನ್ನು ಹೆಚ್ಚಿಸಬೇಕೆಂದು ಅವರು ಇದೇ ಸಂದರ್ಭ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವನ್ನು ಒತ್ತಾಯಿಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now