
ಉಡುಪಿ : ಸಾಮಾಜಿಕ ಸೇವೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇಲ್ಲಿಯ ಕ್ರಿಶ್ಚಿಯನ್ ಯುನಿಟಿ (ರಿ) ಪೆರಂಪಳ್ಳಿ ಇದರ 16ನೇ ವಾರ್ಷಿಕೋತ್ಸವದ ಅಂಗವಾಗಿ ಸಂಸ್ಥೆಯ ಅಧ್ಯಕ್ಷ ವಿನ್ಸೆಂಟ್ ಡಿಸೋಜರವರ ಮನೆಯ ಅಂಗಳದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ವಿನ್ಸೆಂಟ್ ಡಿಸೋಜಾ ವಹಿಸಿದ್ದು, ಸಭೆಯನ್ನು ನಡೆಸಿದರು. ಅತಿಥಿಗಳಾಗಿ ಕರಾವಳಿ ಇನ್ಸ್ಟಿಟ್ಯೂಟ್ ಆಫ್ ಫೈಯರ್ ಅಂಡ್ ಸೇಫ್ಟಿ ಇದರ ಮುಖ್ಯಸ್ಥರಾದ ಆಲ್ವಿನ್ ಡಿಲೀಮಾ, ದಾನಿ ಉದ್ಯಮಿ ಅಜಿತ್ ಡಿಸೋಜಾ ಹಾಜರಾಗಿದ್ದರು.

ಸಭೆಯಲ್ಲಿ ಊರಿನ ಪ್ರಮುಖರು, ಮುಖಂಡರು ಹಾಗೂ ಸದಸ್ಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಸಲಹೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಕ್ರಿಸ್ಮಸ್ ಹಬ್ಬದ ಕಾರ್ಯಕ್ರಮದ ಬಗ್ಗೆ ಮತ್ತು ವಾರ್ಷಿಕೋತ್ಸವದ ಕಾರ್ಯಕ್ರಮದ ಬಗ್ಗೆ ಮಾತುಕತೆ ಚರ್ಚೆ ನಡೆಯಿತು.
ಮೊಂತಿ ಹಬ್ಬದ ಪ್ರಯುಕ್ತ ಪರಂಪಳ್ಳಿ ಭಾಗದ ಜನರಿಗೆ ನಡೆಸಿದ ಫೋಟೋ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ವಾರ್ಷಿಕ ವಿವಿಧ ಚಟುವಟಿಕೆಗಳ ಸಹಾಯಕವಾಗಿ ಲಕ್ಕಿ ಡಿಪ್ ವಿತರಣೆ ಕೂಡ ನಡೆಯಿತು. ಮೋತಿ ಹಬ್ಬದ ಫೋಟೋ ಸ್ಪರ್ಧೆಯ ಪ್ರಾಯೋಜಕರಾಗಿ ಸ್ಟ್ಯಾನಿ ಡಿಸೋಜರವರು ಸಹಕರಿಸಿದರು.

ವಿಜೇತರು ಹೀಗಿದ್ದಾರೆ :
ಪ್ರಥಮ ಬಹುಮಾನ : ಡಯಾನ ಡಿಸೋಜ
ದ್ವಿತೀಯ ಬಹುಮಾನ : ಪ್ರವೀಣ್ ಡಿಸೋಜ
ತೃತೀಯ ಬಹುಮಾನ : ಮೈಕಲ್ ಡಿಸೋಜ
ಐದು ಸಮಾಧಾನಕರ ಬಹುಮಾನ :
ಲವೀನ ಡಿಸೋಜಾ
ಲಿಲ್ಲಿ ಡಿಸೋಜಾ
ಪೌಲ್ ಹೇಲನ್ ಡಿಸೋಜ
ಗ್ರೇಸ್ ಸೇಲಿಂನ್ ಡಿಸೋಜಾ
ಕಿಶೋರಿ ಇಸ್ರೇಲ್
ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ ಎಲ್ಲರಿಗೂ ಅಧ್ಯಕ್ಷರು ಕೃತಜ್ಞತೆ ಸಲ್ಲಿಸಿದರು. ಕ್ರಿಶ್ಚಿಯನ್ ಯುನಿಟಿಯ ಸಕ್ರಿಯ ಸದಸ್ಯ ಆಲ್ವಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now