ಕರ್ನಾಟಕದ ಏಷ್ಯನ್ ಗೇಮ್ಸ್ ಕ್ರೀಡಾಪಟುಗಳಿಗೆ ವಿಧಾನಸೌಧದಲ್ಲಿ ಸನ್ಮಾನ

ಕರ್ನಾಟಕದ ಏಷ್ಯನ್ ಗೇಮ್ಸ್ ಕ್ರೀಡಾಪಟುಗಳಿಗೆ ವಿಧಾನಸೌಧದಲ್ಲಿ ಸನ್ಮಾನ
0Shares

ಬೆಂಗಳೂರು: 2026ರ ಏಷ್ಯನ್ ಗೇಮ್ಸ್‌ನಲ್ಲಿ ಅದ್ಭುತ ಸಾಧನೆಗೈದು ಕರ್ನಾಟಕ ಹಾಗೂ ದೇಶಕ್ಕೆ ಕೀರ್ತಿ ತಂದ ಕ್ರೀಡಾಪಟುಗಳಾದ ಎಂ.ಆರ್. ಪೂವಮ್ಮ, ಶ್ರೇಯಾಂಕ ಪಾಟೀಲ್, ಮೋಹಿತ್ ಎಚ್.ಎಸ್., ಅದಿತಿ ಅಶೋಕ್, ತಿಲೋತ್ತಮಾ ಸೇನ್, ಸ್ನೇಹ ಎಸ್.ಎಸ್. ಗೌಡ ಹಾಗೂ ಆಯುಷ್ ಶೆಟ್ಟಿ ಅವರನ್ನು ಇಂದು ವಿಧಾನಸೌಧದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಡಿ.ಕೆ. ಶಿವಕುಮಾರ್, ಕ್ರೀಡಾಪಟುಗಳ ಪರಿಶ್ರಮ, ಶಿಸ್ತು, ತ್ಯಾಗ ಮತ್ತು ಛಲವನ್ನು ಶ್ಲಾಘಿಸಿದರು. ಇವರ ಸಾಧನೆ ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ಸಂಗತಿಯಾಗಿದ್ದು, ರಾಜ್ಯದ ಯುವಜನತೆಗೆ ಸ್ಫೂರ್ತಿಯಾಗಿದೆ ಎಂದರು.

ಕ್ರೀಡಾಪಟುಗಳ ಗೆಲುವು ಕರ್ನಾಟಕದ ಹೆಮ್ಮೆಯಾಗಿದ್ದು, ಮುಂದಿನ ಪೀಳಿಗೆಯ ಯುವಕರು ಕ್ರೀಡೆಯಲ್ಲಿ ದೊಡ್ಡ ಕನಸು ಕಾಣಲು ಇವರ ಸಾಧನೆ ಪ್ರೇರಣೆಯಾಗಲಿದೆ. ರಾಜ್ಯದಲ್ಲಿ ಕ್ರೀಡಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ, ಪ್ರತಿಭಾವಂತ ಕ್ರೀಡಾಪಟುಗಳಿಗೆ ಅಗತ್ಯ ಬೆಂಬಲ ಹಾಗೂ ಅವಕಾಶಗಳನ್ನು ಒದಗಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಜಿ. ಪರಮೇಶ್ವರ, ಕರ್ನಾಟಕ ಒಲಿಂಪಿಕ್‌ ಒಕ್ಕೂಟದ ಅಧ್ಯಕ್ಷ ಡಾ. ಕೆ. ಗೋವಿಂದರಾಜ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಎಂ.ಎನ್. ಅನುಚೇತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now