ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾವುದ್ ಅಮ್ಮನವರ ಸಭಾಭವನದ ಎದುರಿನ ರಸ್ತೆ ಕಾಂಕ್ರೀಟ್ ಕರಣಕ್ಕೆ ಶಂಕುಸ್ಥಾಪನೆ

ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾವುದ್ ಅಮ್ಮನವರ ಸಭಾಭವನದ ಎದುರಿನ ರಸ್ತೆ ಕಾಂಕ್ರೀಟ್ ಕರಣಕ್ಕೆ ಶಂಕುಸ್ಥಾಪನೆ
0Shares

ಶಿರ್ವ ಅ. 5 ರಂದು ಸಾಯಂಕಾಲ 4.30 ಗಂಟೆಗೆ ಕಾಪು ರಸ್ತೆಯಲ್ಲಿರುವ ಸಾವುದ್ ಅಮ್ಮನವರ ಸಭಾಭವನದ ಮುಂದಿನ ರಸ್ತೆಯನ್ನು ಕಾಂಕ್ರೀಟ್ ಕರಣ ಮಾಡಲು 10 ಲಕ್ಷ ಅನುದಾನದೊಂದಿಗೆ ಸನ್ಮಾನ್ಯ ಐವನ್ ಡಿಸೋಜಾ (MLC) ರವರು ಶಂಕುಸ್ಥಾಪನೆಗೆ ಚಾಲನೆ ನೀಡಿದರು. ಕ್ಯಾಥೋಲಿಕ್ ಸಭಾ ಶಿರ್ವ ಘಟಕದ ಅಧ್ಯಕ್ಷರು ಅಗ್ನೆಸ್ ಬರ್ಬೋಜ ಗುದ್ದಲಿ ಪೂಜೆ ನೆರವೇರಿಸಿದರು.


ಸಭಾಭವನದಲ್ಲಿ ಸಭೆಯನ್ನು ಉದ್ದೇಶಿಸಿ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಸನ್ಮಾನ್ಯ ಐವನ್ ಡಿಸೋಜರವರು ನೆರವೇರಿಸಿದರು. ಮುಂಬರುವ ಗ್ರಾಮ ಪಂಚಾಯತ್, ತಾಲೂಕ್ ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ಬಗ್ಗೆ ಜನರಿಗೆ ಮಾರ್ಗದರ್ಶನ ನೀಡಿದರು. ಎಸ್ಐಆರ್ ಬಗ್ಗೆ ಇರುವ ಗೊಂದಲಗಳ ಬಗ್ಗೆ ಉತ್ತಮವಾದ ಅರಿವನ್ನು ಮೂಡಿಸಲಾಯಿತು.

ಕ್ರೈಸ್ತರಿಗೆ ಕ್ರಿಶ್ಚನ್ ಡೆವಲಪ್ಮೆಂಟ್ ಕಾರ್ಪೊರೇಷನ್ ಸ್ಥಾಪಿಸಲಾಗಿದೆ ಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕು, ಶಿರ್ವ ಒಂದು ಬೆಳೆಯುತ್ತಿರುವ ಗ್ರಾಮ ಇದನ್ನು ಪಟ್ಟಣ ಪಂಚಾಯತ್ ಮಾಡಲು ಮುಖಂಡರು ಶ್ರಮಿಸಬೇಕು ಇದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ನೀಡಲು ಸಿದ್ದ, ಖಾಸಗಿ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಸಂಪೂರ್ಣ ಉಚಿತ ವೈದ್ಯಕೀಯ ಸೇವೆಯನ್ನು ಚಿಕಿತ್ಸೆಯನ್ನು ನೀಡಲಾಗುವುದು. ಆಸ್ಪತ್ರೆಯಲ್ಲಿ ಆರೋಗ್ಯ ಮಿತ್ರ ಸೇವಕರನ್ನು ಸಂಪರ್ಕಿಸಿ ಅದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೇಳಿಕೊಂಡರು. ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಗೆ ಎಲೆಕ್ಟ್ರಿಕ್ ಬಸ್ಸುಗಳು ಸಂಚಾರ ಪ್ರಾರಂಭಿಸುತ್ತಿವೆ, ಉಡುಪಿಯಿಂದ ಶಿರ್ವ- ಬೆಳ್ಮನ್ ಗೆ ಕನಿಷ್ಠ ಮೂರು ಬಸ್ಸುಗಳನ್ನು ಬರುವಂತೆ ಮಾಡಲು ನಾನು ಶ್ರಮಿಸುತ್ತೇನೆ ಎಂದರು.

ಶಿರ್ವ ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಜೂಲಿಯನ್ ರೋಡ್ರಿಗಸ್ ಸ್ವಾಗತಿಸಿ, ಕತೋಲಿಕ್ ಸಭಾ ಉಡುಪಿ ಪ್ರಾಂತ್ಯದ ಅಧ್ಯಕ್ಷರಾದ ಮೆಲ್ವಿನ್ ಅರನ್ನ ಕಾರ್ಯಕ್ರಮವನ್ನು ನಿರೂಪಿಸಿದರು. ಚರ್ಚಿನ ಸಹಾಯಕ ಧರ್ಮ ಗುರುಗಳು ವಂದನೀಯ ಅನಿಲ್ ರೋಡ್ರಿಗಸ್,ಪ್ರಮುಖರಾದಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿಲ್ಸನ್ ರೋಡ್ರಿಗಸ್ ,ಮಾಜಿ ತಾಲೂಕ್ ಪಂಚಾಯತ್ ಸದಸ್ಯ ಮೈಕಲ್ ಡಿಸೋಜಾ, ನಾರ್ಬೋಟ್ ಮಚಾದೋ, 20 ಆಯೋಗದ ಸಂಚಾಲಕಿ ಶಾಲನಿ ಕೋರ್ಡ , ಮಹಿಳಾ ಮಂಡಳಿ ಶಿರ್ವ ಇದರ ಕಾರ್ಯದರ್ಶಿ ಐರಿನ್ ಪಿಂಟೋ, ಚರ್ಚಿನ ಪಾಲನ ಮಂಡಳಿಯ ಸದಸ್ಯರು ಹಾಜರಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now