
ಉಡುಪಿ: ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ರಾಜ್ಯ ಶಾಖೆಯ ಕನ್ನಡ ವೈದ್ಯ ಬರಹಗಾರರ ಸಮಿತಿಯು ನೀಡುವ ಪ್ರತಿಷ್ಠಿತ ’ಡಾ. ಶ್ಯಾಮ್ ಪ್ರಸಾದ್ ವಾರ್ಷಿಕ ಶ್ರೇಷ್ಠ ವೈದ್ಯಕೀಯ ಕೃತಿ ಪ್ರಶಸ್ತಿ 2025-26’ ಕ್ಕೆ ಉಡುಪಿಯ ವೈದ್ಯಕೀಯ ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ವಾತ್ಸಲ್ಯ ಕ್ಲಿನಿಕ್ ಡಾ. ರಾಜಲಕ್ಷ್ಮಿ ಅವರ “ವಾತ್ಸಲ್ಯದ ಒಸಗೆ — ಮಹಿಳಾ ಆರೋಗ್ಯ ಸಂಗಾತಿ ಕೃತಿ ಆಯ್ಕೆಯಾಗಿದೆ.
ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿಯ ಪೂರ್ವಾಧ್ಯಕ್ಷರಾದ ವಾತ್ಸಲ್ಯ ಕ್ಲಿನಿಕ್ ನ ಡಾ. ರಾಜಲಕ್ಷ್ಮಿ ಅವರು ರೋಗಿಗಳ ಬದುಕು, ಭಾವನೆ ಮತ್ತು ಮಾನವೀಯ ಸಂಬಂಧಗಳನ್ನು ಕುರಿತಂತೆ ಬರೆದಿರುವ ಈ ಕೃತಿಯು ಓದುಗರ ಮನಮುಟ್ಟುವಂತಿದೆ .
ಆಗಸ್ಟ್ 23 ಮತ್ತು 24 ರಂದು ದೊಡ್ಡಬಳ್ಳಾಪುರದ ನವೋದಯ ಶಾಲೆಯಲ್ಲಿ ನಡೆಯಲಿರುವ ಕನ್ನಡ ವೈದ್ಯ ಬರಹಗಾರರ 6ನೇ ರಾಜ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. .
ಪ್ರಶಸ್ತಿಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಸುರೇಶ್ ಹನಗವಾಡಿ ಅವರು ಪ್ರದಾನ ಮಾಡಲಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now