ಶಿರ್ವ: ಚಾಲಕನ ನಿಯಂತ್ರಣ ತಪ್ಪಿ ಥಾರ್ ಕಾರು ಚರಂಡಿಗೆ ಪ್ರಯಾಣಿಕರು ಪ್ರಾಣಯಾಪದಿಂದ ಪಾರು

ಶಿರ್ವ: ಚಾಲಕನ ನಿಯಂತ್ರಣ ತಪ್ಪಿ ಥಾರ್ ಕಾರು ಚರಂಡಿಗೆ ಪ್ರಯಾಣಿಕರು ಪ್ರಾಣಯಾಪದಿಂದ ಪಾರು
0Shares

ಶಿರ್ವ: ಜುಲೈ 19 ರಂದು ಸುಮಾರು 3.30 ಗಂಟೆಗೆ ಉಡುಪಿಯಿಂದ ಕಡೆಯಿಂದ ಶಿರ್ವ ಬರುತ್ತಿದ್ದ ಮಹೇಂದ್ರ ಥಾರ್ ಚಾಲಕನ ನಿಯಂತ್ರಣ ತಪ್ಪಿ ಬಂಟಕಲ್ ಬಿ.ಸಿ ರೋಡ್ ಮಧ್ಯೆ ಚರಂಡಿಗೆ ಉರುಳಿದ ರಭಸಕ್ಕೆ ವಾಹನದ ಮುಂಭಾಗವು ನುಚ್ಚುಗುಜ್ಜಾಗಿದೆ. ಶಿರ್ವ ಪರಿಸರದ ಚಾಲಕ ಬಾಲಕೃಷ್ಣ ಪ್ರಾಯ (ಸುಮಾರು 20 ವರ್ಷ) ಇವರೊಂದಿಗೆ ಒಬ್ಬ ಸಹ ಪ್ರಯಾಣಿಕ ಹಾಗೂ ಇಬ್ಬರು ಯುವತಿಯರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಅಪಘಾತ ನಡೆದ ತಕ್ಷಣ ಸ್ಪಂದಿಸಿದ ಬಂಟಕಲ್ ಬಿ ಸಿ ರೋಡ್ ಲೈನ್ಸ್ ಕ್ಲಬ್ಬಿನ ಅಧ್ಯಕ್ಷ ಟೋನಿ ಮೊನಿಸ್ ಆಂಬುಲೆನ್ಸ್ ಹಾಗೂ ಶಿರ್ವ ಪೊಲೀಸರಿಗೆ ಕರೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಘಟನೆಗೆ ಸ್ಪಂದಿಸಿದ ಬಂಟಕಲ್ ನಾಗರಿಕ ಸೇವಾ ಸಮಿತಿ ಅಧ್ಯಕ್ಷರು ಕೆ. ಆರ್ ಪಾಟ್ಕರ್ ಹಾಗೂ ವೀರೇಂದ್ರ ಪಾಡ್ಕರ್ ರವರು ನಾಗರಿಕ ಸೇವಾ ಸಮಿತಿಯ ಅಂಬುಲೆನ್ಸ್ ನಲ್ಲಿ ಗಾಯಾಳುಗಳನ್ನು ಉಡುಪಿ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಇಬ್ಬರಿಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು ಪ್ರಾಣಾಯಾಪಾಯದಿಂದ ಪಾರಾಗಿದ್ದಾರೆ ಎಂದು ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಬಂದು ತನಿಖೆಯನ್ನು ಮುಂದುವರಿಸಿದ್ದಾರೆ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now