
ವಿಶ್ವ ಬ್ರಾಹ್ಮಣ ಸಮಾಜೋದ್ದಾರಕ ಸಂಘ (ರಿ) ಉಪ್ಪೂರು ಹಾಗೂ ಸಮಾನ ಮನಸ್ಕ ತಂಡ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಸಮಾನ ಮನಸ್ಕರ ತಂಡ ಕೊಡಮಾಡಿದ ಉಚಿತ ಪುಸ್ತಕ ಹಾಗೂ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿ ಬಂತು.
“ಕಲಿಕೆ ಎನ್ನುವುದು ಮಾನವನ ಸಾಧನೆಯ ದಾರಿಯ ಪೂರಕ ವ್ಯವಸ್ಥೆ. ಸಹಕಾರ ನೀಡುವುದು ಸಾಮಾಜಿಕ ಧರ್ಮ” ಎಂದು ಪುಸ್ತಕ ವಿತರಣೆ ಮಾಡಿ ಸಮಾನ ಮನಸ್ಕ ತಂಡ ಕಟ್ಟಿ ಹಲವಾರು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ನಿಸ್ವಾರ್ಥ ಸೇವಕ ಶಶಿಧರ್ oಪುರೋಹಿತ್ ಮಾತನಾಡಿದರು.

ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಒಂದರಿಂದ ಹತ್ತನೇ ತರಗತಿಯ ಸುಮಾರು 40 ವಿದ್ಯಾರ್ಥಿಗಳು ಉಚಿತ ಪುಸ್ತಕ ಮತ್ತು ಕಲಿಕಾ ಸಾಮಗ್ರಿಗಳನ್ನು ಪಡೆದುಕೊಂಡರು
ಅತಿಥಿಗಳಾಗಿ ಸಮಾನ ಮನಸ್ಕ ತಂಡದ ಸದಸ್ಯರಾದ ಶ್ರೀ ದಿವಾಕರ್ ಆಚಾರ್ಯ ಉಡುಪಿ, ಸಂಘದ ಗೌರವ ಸಲಹೆಗಾರರಾದ ಶ್ರೀ ಧನಂಜಯ ಆಚಾರ್ಯ, ವಿಶ್ವಕರ್ಮ ಯುವ ಸಂಘಟನೆಯ ಕಾರ್ಯದರ್ಶಿ ಶ್ರೀ ಪಾಂಡುರಂಗ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣ ಆಚಾರ್ಯ ವಹಿಸಿದ್ದರು. ಸರ್ವರಿಗೂ ಉಪಹಾರದ ವ್ಯವಸ್ಥೆ ಸ್ಥಳೀಯ ಸಂಘದ ಸದಸ್ಯರಾದ ನಾಗೇಶ್ ಆಚಾರ್ಯ ಮಾಡಿದ್ದರು. ಸಂಘದ ಉಪಾಧ್ಯಕ್ಷರಾದ ಶ್ರೀ ಹರೀಶ್ ಆಚಾರ್ಯ ಸರ್ವರಿಗೂ ಸ್ವಾಗತಿಸಿ, ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಆಚಾರ್ಯ ಧನ್ಯವಾದವಿತ್ತು ಕಾರ್ಯಕ್ರಮ ನಿರೂಪಿಸಿದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now