
ಬ್ರಹ್ಮಾವರ: ರೋಟರಿ ಕ್ಲಬ್ ಬ್ರಹ್ಮಾವರ 2026-27 ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸಪ್ತಪದಿ ಕನ್ವೆನ್ನನ್ ಹಾಲ್ ಮೈರ್ಕೊಮೆ ಹೆಗ್ಗುಂಜೆಯಲ್ಲಿ ಶುಕ್ರವಾರ ನಡೆಯಿತು. ಪದಪ್ರಧಾನ ಅಧಿಕಾರಿ ರೋಟರಿ ಅಭಿನಂದನ್ ಶೆಟ್ಟಿಯವರು ನೂತನ ಅಧ್ಯಕ್ಷ ಪ್ರಮೋದ್ ಶೆಟ್ಟಿ, ಕಾರ್ಯದರ್ಶಿ ಅರುಣ್ ಕುಮಾರ್ ರವರಿಗೆ ಪದಪ್ರಧಾನ ನೆರವೇರಿಸಿದರು.
ಅವರು ಬಳಿಕ ಮಾತನಾಡಿ, ಎಷ್ಟೋ ರಾಷ್ಟ್ರಗಳಲ್ಲಿ ಸರ್ಕಾರ ಮಾಡಬೇಕಾದ ಕಾರ್ಯವನ್ನು ರೋಟರಿ ಸಂಸ್ಥೆ ಮಾಡುತ್ತಿದೆ. ಆರೋಗ್ಯ, ಶಿಕ್ಷಣ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಅಕ್ಷರ ಜ್ಞಾನ, ಲೋಕ ಜ್ಞಾನ ಇರುವ ಶಿಕ್ಷಿತರಾದ, ಉನ್ನತ ಸ್ಥಾನಗೌರವ ಹಾಗೂ ಉದ್ಯಮ ಹೊಂದಿದ ರೋಟರಿ ಸದಸ್ಯರು ನಾನಾ ಸಮಾಜ ಸೇವೆಯ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.


ನೂತನ ಅಧ್ಯಕ್ಷ ಪ್ರಮೋದ್ ಶೆಟ್ಟಿ ಮಾತನಾಡಿ, ಹಿರಿಯರ ಮತ್ತು ಕಿರಿಯರ ಮಾರ್ಗದರ್ಶನದಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿ ರೋಟರಿ ಸಂಸ್ಥೆಯ ಉದ್ದೇಶವನ್ನು ಈಡೇರಿಸುವ ಪ್ರಯತ್ನ ಮಾಡುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ಶೈಕ್ಷಣಿಕ ಸಾಧಕರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಗವರ್ನರ್ ಬಿ.ಎಂ.ಭಟ್, ಅಸಿಸ್ಟೆಂಟ್ ಗವರ್ನರ್ ವಿಜಯ ಕುಮಾರ್ ಶೆಟ್ಟಿ, ವಲಯ ಪ್ರತಿನಿಧಿ ಪ್ರಸಾದ್ ಹೆಗ್ಡೆ, ನಿಕಟಪೂರ್ವ ಅಧ್ಯಕ್ಷ ಸತೀಶ್ ಶೆಟ್ಟಿ, ಕಾರ್ಯದರ್ಶಿ ರೆಕ್ಸನ್ ರೋಯಿ ಮೋನಿಸ್ ಉಪಸ್ಥಿತರಿದ್ದರು.


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now