ಲೈಸೆನ್ಸ್ ಇಲ್ಲದೆ ಬಸ್ ಚಲಾಯಿಸಿ ಅಪಘಾತ: 20 ವರ್ಷದ ಕಂಡಕ್ಟರ್ ಮಹಮ್ಮದ್ ರಾಹಿಜ್ ಅರೆಸ್ಟ್

ಲೈಸೆನ್ಸ್ ಇಲ್ಲದೆ ಬಸ್ ಚಲಾಯಿಸಿ ಅಪಘಾತ: 20 ವರ್ಷದ ಕಂಡಕ್ಟರ್ ಮಹಮ್ಮದ್ ರಾಹಿಜ್ ಅರೆಸ್ಟ್
0Shares

ದಿನಾಂಕ: 25.06.2026 ರಂದು ಬೆಳಿಗ್ಗೆ 8:05 ಗಂಟೆಗೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ರಾ.ಹೆ 169(A) ಸಿಂಡಿಕೇಟ್ ಸರ್ಕಲ್ ಡೌನ್ ಬಳಿ ಸೆಂಟ್ರಲ್ ಪಾರ್ಕ್ ಹೊಟೇಲ್ ಎದುರು ಅಲ್ ಇಬಾದ್ ಇಂಡಿಯನ್ ಶಾಲೆ ಪೆರಂಪಳ್ಳಿಗೆ ಸೇರಿದ KA19AB5977 ಶಾಲಾ ಬಸ್ಸನ್ನು ಚಾಲಕನಾದ ರಿಜ್ವಾನ್ ಈತನು ಚಾಲನೆ ಮಾಡಿಕೊಂಡು ಬಂದು ಡಿವೈಡರ್ ಮೇಲೆ ಹತ್ತಿಸಿ ಅಪಘಾತಪಡಿಸಿ ಇದರಿಂದ ಶಾಲಾ ಮಕ್ಕಳಿಗೆ ಗಾಯಗಳಾಗಿರುವುದಾಗಿ ತಿಳಿಸಿ ಫಿರ್ಯಾದಿದಾರನಾದ ಶಾಲಾ ಬಸ್ ಕಂಡಕ್ಟರ್ ಮಹಮ್ಮದ ರಾಹಿಜ್ ತಂದೆ: ರಿಜ್ವಾನ್ ಪ್ರಾಯ 20 ವರ್ಷ ವಾಸ ಕಟಪಾಡಿ ಈತನು ಶಾಲಾ ಬಸ್ಸನ್ನು ತನ್ನ ತಂದೆ ರಿಜ್ವಾನ್ ರವರು ಚಾಲನೆ ಮಾಡಿ ಅಪಘಾತಪಡಿಸಿದ್ದಾಗಿ ದೂರು ದಾಖಲಿಸಿದ್ದು, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 101/2026 ಕಲಂ: 281,125(a) ದಾಖಲಾಗಿ ತನಿಖೆಯಲ್ಲಿರುತ್ತದೆ.

ನಂತರ ಪ್ರಕರಣದಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿ ಪ್ರಕರಣದಲ್ಲಿ ಫಿರ್ಯಾದಿದಾರನಾದ ಮಹಮ್ಮದ ರಾಹಿಜ್ ತಂದೆ: ರಿಜ್ವಾನ್ ಪ್ರಾಯ 20 ವರ್ಷ ವಾಸ ಕಟಪಾಡಿ ಈತನೇ ಸದ್ರಿ ಶಾಲಾ ಬಸ್ಸನ್ನು ಚಾಲನೆ ಮಾಡಿಕೊಂಡು ಬಂದು ಬಸ್ ಅನ್ನು ಡಿವೈಡರ್ ಗುದ್ದಿಸಿ ಅಫಘಾತ ಪಡಿಸಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ಪ್ರಕರಣದಲ್ಲಿ ಕಲಂ:110,229 BNS ಅಳವಡಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದು ಆರೋಪಿತನಿಗೆ ಅಧಿಕೃತ ಚಾಲನಾ ಪರವಾನಗೆ ಇಲ್ಲದೇ ಇರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ. ಅಧಿಕೃತ ವಾಹನ ಚಾಲನಾ ಪರವಾನಗೆ ಇಲ್ಲದ ವ್ಯಕ್ತಿಗೆ ವಾಹನ ಚಾಲನೆ ಮಾಡಲು ಅವಕಾಶ ಮಾಡಿಕೊಟ್ಟರೆ ಶಾಲಾ ಮಕ್ಕಳ ಜೀವಕ್ಕೆ ಅಪಾಯವುಂಟಾಗಬಹುದೆಂದು ತಿಳಿದೂ ಸಹಾ ಸದ್ರಿ ಶಾಲಾ ವಾಹನದ ಮಾಲಿಕರು ಆರೋಪಿತನಿಗೆ ವಾಹನ ಚಾಲನೆಗೆ ಅವಕಾಶ ಮಾಡಿಕೊಟ್ಟಿದ್ದು, ಮಾಲೀಕರು ಮತ್ತು ಸುಳ್ಳು ದೂರು ನೀಡಿದ ಆರೋಪಿ ಚಾಲಕನ ವಿರುದ್ದ ಮೇಲ್ಕಂಡ ಕಲಂಗಳನ್ನು ಅಳವಡಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

ದಿನಾಂಕ: 03/07/2026 ರಂದು ಆರೋಪಿತನಾದ ಮಹಮ್ಮದ ರಾಹಿಜ್ ತಂದೆ: ರಿಜ್ವಾನ್ ಪ್ರಾಯ 20 ವರ್ಷ ವಾಸ ಕಟಪಾಡಿ ಈತನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now