ಲಯನ್ಸ್ ಎಂದರೆ ಸೇವೆ ಮಾತ್ರವಲ್ಲ, ಅದು ವ್ಯಕ್ತಿತ್ವ ಬೆಳವಣಿಗೆ : ಲ. ಹರಿಪ್ರಸಾದ್ ರೈ

ಲಯನ್ಸ್ ಎಂದರೆ ಸೇವೆ ಮಾತ್ರವಲ್ಲ, ಅದು ವ್ಯಕ್ತಿತ್ವ ಬೆಳವಣಿಗೆ : ಲ. ಹರಿಪ್ರಸಾದ್ ರೈ
0Shares

ಉಡುಪಿ : ಲಯನ್ಸ್ ನಮ್ಮ ದೇಶಕ್ಕೆ ಬಂದು 70 ವರ್ಷಗಳಾದರೂ, ಅದು ವರ್ಷಗಳಲ್ಲ, ಬದಲಾಗಿ ಅದು ಇತಿಹಾಸದ ಪುಟಗಳಾಗಿದೆ. ಲಯನ್ಸ್ ನ ಮೂಲಭೂತ ತತ್ವಗಳು ಬಲಿಷ್ಠವಾಗಿರುವುದರಿಂದ, ಈ ಸಂಘಟನೆಯು ದೇಶದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯದಲ್ಲಿಯೂ ಬಲಿಷ್ಠವಾಗಿದೆ. ಲಯನ್ ಎಂದರೆ ಕೇವಲ ಸೇವೆಯಲ್ಲ, ಬದಲಾಗಿ ಅದು ವ್ಯಕ್ತಿತ್ವ ಬೆಳವಣಿಗೆ ಎಂದು ಜಿಲ್ಲೆ 317C ಇದರ ಪ್ರಥಮ ಜಿಲ್ಲಾ ಉಪ ಗವರ್ನರ್ ಲಯನ್ ಹರಿಪ್ರಸಾದ್ ರೈ ತಿಳಿಸಿದರು.

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಇದರ ಎಂಟನೇ ವರ್ಷದ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮದ ಪದಪ್ರಧಾನ ಅಧಿಕಾರಿಯಾಗಿ ಭಾಗವಹಿಸಿ, ಅವರು ಮಾತನಾಡಿದರು.

ಫೆರ್ನಾಂಡಿಸ್ ಗ್ರೂಪ್ ನ ಪ್ರವರ್ತಕ ವಿಲ್ಸನ್ ಫೆರ್ನಾಂಡಿಸ್ ಮಾತನಾಡಿ, ಯುದ್ಧಭೀತಿಯಿಂದಾಗಿ ಅರಬ್ ರಾಷ್ಟ್ರಗಳಲ್ಲಿ ಉದ್ಯೋಗಗಳು ಕಡಿಮೆಯಾಗುತ್ತಿದೆ, ಯೂರೋಪ್ ರಾಷ್ಟ್ರಗಳಲ್ಲಿ ಉದ್ಯೋಗಕ್ಕೆ ಬಹಳಷ್ಟು ಅವಕಾಶ ಇದೆ. ಯುವಕರು ಅವಕಾಶಗಳನ್ನು ಉಪಯೋಗಿಸಿಕೊಳ್ಳಿ. ಅಂತವರಿಗೆ ನನ್ನ ಸಹಕಾರ ಇದೆ ಎಂದು ತಿಳಿಸಿದರು.

ಪ್ರಾಂತೀಯ ಅಧ್ಯಕ್ಷ ಲ. ದಿವಾಕರ್ ಸನಿಲ್, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದರು.

2026-27 ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾದ ಲ. ರೋಯ್ಸ್ ಫೆರ್ನಾಂಡಿಸ್ ಮತ್ತು ಅವರ ಕಾರ್ಯಕಾರಿ ಸಮಿತಿ ಪ್ರಮಾಣವಚನ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಕಳೆದ ವರ್ಷದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಲಯನ್ ಎಡ್ವಿನ್ ಲುವಿಸ್ ವಾಚಿಸಿದರು. ನೂತನ ಕಾರ್ಯಕಾರಿ ಸಮಿತಿಯು ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಇದೇ ಸಂದರ್ಭದಲ್ಲಿ ಸಂಬಂಧಿತರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸ್ಥಾಪಕ ಅಧ್ಯಕ್ಷ ಲ. ಹೆನ್ರಿ ಡಿಸೋಜಾ, ನಿಕಟಪೂರ್ವ ಅಧ್ಯಕ್ಷ ಲ. ರೊನಾಲ್ಡ್ ರೆಬೆಲ್ಲೊ, ನಿಕಟಪೂರ್ವ ಕೋಶಾಧಿಕಾರಿ ಲ. ಆಲ್ವಿನ್ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಳೆದ ಸಾಲಿನ ಅಧ್ಯಕ್ಷ ಲಯನ್ ಜೆರಾಲ್ಡ್ ಪಿರೇರಾ ರವರ ಅನುಪಸ್ಥಿತಿಯಲ್ಲಿ, ಅವರ ಸಂದೇಶವನ್ನು, ಉಪಾಧ್ಯಕ್ಷರು ಸಭೆಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ನಾಲ್ಕು ಹೊಸ ಸದಸ್ಯರ ಸೇರ್ಪಡೆಯು ನಡೆಯಿತು.

ಉಪಾಧ್ಯಕ್ಷ ಲ. ವಿಲ್ಫ್ರೆಡ್ ಡಿಸೋಜಾ ಸ್ವಾಗತಸಿದರೆ, ಕಾರ್ಯದರ್ಶಿ ಲ. ಜೋನ್ ಪ್ರಶಾಂತ್ ಗೋಮ್ಸ್ ಧನ್ಯವಾದ ಸಮರ್ಪಿಸಿದರು. ಲ. ಅನಿಲ್ ಮಿನೇಜಸ್ ಮತ್ತು ಲ. ರಿತೇಶ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now