ಉಡುಪಿ ಶ್ರೀಕೃಷ್ಣ ಮಠದ ಬಳಿ ಕಾರು ಪಾರ್ಕಿಂಗ್ ವಿವಾದ: ಕೇಸ್-ಕೌಂಟರ್ ಕೇಸ್ ದಾಖಲು, ಓರ್ವನ ಬಂಧನ

ಉಡುಪಿ ಶ್ರೀಕೃಷ್ಣ ಮಠದ ಬಳಿ ಕಾರು ಪಾರ್ಕಿಂಗ್ ವಿವಾದ: ಕೇಸ್-ಕೌಂಟರ್ ಕೇಸ್ ದಾಖಲು, ಓರ್ವನ ಬಂಧನ
0Shares

ದಿನಾಂಕ :09/06/2026 ರಂದು ಸಂಜೆ 7:50 ಗಂಟೆಗೆ ಪಿರ್ಯಾದಿ ರಂಗ ರಾವ್, ರವಿಂದ್ರನಗರ್, ಸೀತಾಫಲ್ ಮಂಡಿ, ಹೈದರಾಬಾದ್, ತೆಲಾಂಗಣ ರಾಜ್ಯ ಇವರು ಶಿವಳ್ಳಿ ಗ್ರಾಮದ ಉಡುಪಿ ಶ್ರೀ ಕೃಷ್ಣ ದೇವರ ಸನ್ನಿಧಾನಕ್ಕೆ ಬಂದು ಕಾರ್‌ ಪಾರ್ಕಿಂಗ್‌ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ ದೇವಾಸ್ಥಾನಕ್ಕೆ ದರ್ಶನ ಮಾಡಲು ರಸ್ತೆ ದಾಟುತ್ತಿರುವಾಗ ಒಮ್ಮಲೇ ಸುಪ್ರಿತ್‌ ಎಂಬಾತನು KA20MD7543ನೇ ಕಾರನ್ನು ಜೋರಾಗಿ ಓಡಿಸಿಕೊಂಡು ಫಿರ್ಯಾದುದಾರರ ಹಾಗೂ ಅವರ ಕುಟುಂಬದವರ ಮೇಲೆ ಆಯಿಸಲು ಬಂದಿದ್ದು, ಆಗ ಫಿರ್ಯಾದುದಾರರು ನಿಧಾನವಾಗಿ ಬರುವಂತೆ ಹೇಳಿದಾಗ ಆತನು “ನಾನು ಇಲ್ಲಿಯ ಸ್ಥಳಿಯ ವ್ಯಕ್ತಿ, ನನ್ನ ಕಾರಿಗೆ ಯಾವುದೇ ಹಾರ್ನ್‌ ಮತ್ತು ಬ್ರೇಕ್‌ ಇಲ್ಲ, ನಾನು ಇದೇ ರೀತಿ ಕಾರು ಚಾಲನೆ ಮಾಡುವುದಾಗಿ ಹೇಳಿ ಫಿರ್ಯಾದುದಾರರು ಹಾಗೂ ಅವರ ಕುಟುಂಬದವರನ್ನು ಉದ್ದೇಶಿಸಿ ಅವರಿಗೆ ತಿಳಿಯದ ಕನ್ನಡ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಕಾರಿನಿಂದ ಲಾಠಿಯಂತಹ ಕೋಲನ್ನು ತಂದು ಫಿರ್ಯಾದುದಾರರ ಹಾಗೂ ಅವರ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದು, ಆರೋಪಿಯು ಅ ಸಮಯ ಫಿರ್ಯಾದುದಾರರ ತಲೆಗೆ ಹೊಡೆದ ಪರಿಣಾಮ ತಲೆಯಲ್ಲಿ ರಕ್ತಗಾಯವಾಗಿ ರಕ್ತ ಸುರಿಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 71/2026 ಕಲಂ: 74, 118(1), 352, 351(2) BNS, & 75 JJ act ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ದಿನಾಂಕ 09/06/2026 ರಂದು ಸಂಜೆ 7:30 ಗಂಟೆಗೆ ಫಿರ್ಯಾದು ಸುಪ್ರೀತ್ ಕುಮಾರ್(40), ತಂದೆ :ಶೇಖರ ಪೂಜಾರಿ, ವಾಸ : ಸಾಯಿ ಸದನ, ಹೆಗ್ಡೆ ಕಾಂಪೌಂಡ್, ಕೊರಂಗ್ರಪಾಡಿ ಗ್ರಾಮ, ಉಡುಪಿ ಇವರು ತನ್ನ ಹೆಂಡತಿ ಮತ್ತು ಮಗುವಿನೊಂದಿಗೆ ಕಾರ್‌ ನಂಬ್ರ KA20MD7543 ಕಲ್ಸಂಕ-ರಾಜಾಂಗಣ ಮಾರ್ಗವಾಗಿ ರಾಜಾಂಗಣ ಪಾರ್ಕಿಂಗ್‌ ಬದಿಯ ರಸ್ತೆಯಲ್ಲಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ TS12EB9043ನೇ ನಂಬ್ರ ಕಾರಿನ ಚಾಲಕನು ಅಜಾಗುರುಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ಕಾರಿಗೆ ಡಿಕ್ಕಿ ಹೊಡೆಯಲು ಬಂದಾಗ ಫಿರ್ಯಾದುದಾರರು ತಮ್ಮ ಕಾರನ್ನು ನಿಲ್ಲಿಸಿ, ಎದ್ರಿಯವರಿಗೆ ನಿಧಾನವಾಗಿ ಬರಬಾರದೇ ಎಂದು ಕೇಳಿದಾಗ ಕಾರಿನಲ್ಲಿದ್ದ ಚಾಲಕ ಹಾಗೂ ಎಲ್ಲಾ ಪ್ರಯಾಣಿಕರು ಕಾರಿನಿಂದ ಕೆಳಗಿಳಿದು ಅವರ ಹತ್ತಿರವಿದ್ದ ಫೋಟೋ ಸ್ಟಾಂಡ್‌ ಮತ್ತು ಕುರ್ಚಿಗಳಿಂದ ಹಲ್ಲೆ ನಡೆಯಲು ಪ್ರಾರಂಭಿಸಿದ್ದು, ಕಾರಿನಲ್ಲಿ ಕುಳಿತಿದ್ದ ಫಿರ್ಯಾದುದಾರರ ಹೆಂಡತಿಯ ಮೇಲೂ ಸಹಾ ಹಲ್ಲೆ ನಡೆಸಿ ಕಾರಿನ ಕನ್ನಡಿಯನ್ನು ಹೊಡೆದಿರುತ್ತಾರೆ. ಹಲ್ಲೆಯ ಸಂದರ್ಭದಲ್ಲಿ ಫಿರ್ಯಾದುದಾರರಿಗೆ ತಿಳಿಯದ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ನಂತರ ಆರೋಪಿಗಳು ಫಿರ್ಯಾದುದಾರರ ಮೇಲೆ ಕಬ್ಬಿಣದ ವಸ್ತು ಮತ್ತು ಬ್ಯಾಗಿನಲ್ಲಿದ್ದ ವಸ್ತುಗಳಿಂದ ಹಲ್ಲೆ ನಡೆಸಿರುತ್ತಾರೆ. ಈ ಸಮಯ ಫಿರ್ಯಾದುದಾರರ ನಾಲಿಗೆಯಿಂದ ರಕ್ತಸ್ರಾವ ಉಂಟಾಗಿರುತ್ತದೆ. ಇಷ್ಟಕ್ಕೆ ಸುಮ್ಮನಾಗದ ಅರೋಪಿತರು ಫಿರ್ಯಾದುದಾರರ ಕಾರಿನ ಮುಂದಿನ ಗ್ಲಾಸ್‌ ನ್ನು ಹೊಡೆದು ಹಾಕಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 72/2026, ಕಲಂ: 74,118(1), 324 BNSರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ಮೇಲಿನ ಎರಡು ಪ್ರಕರಣಗಳು ಕೇಸ್‌ ಮತ್ತು ಕೌಂಟರ್‌ ಕೇಸ್‌ ಆಗಿದ್ದು, ಒಂದು ಪ್ರಕರಣದಲ್ಲಿನ ಆರೋಪಿ ಸುಪ್ರೀತ್ ಕುಮಾರ್(40), ತಂದೆ :ಶೇಖರ ಪೂಜಾರಿ, ವಾಸ : ಸಾಯಿ ಸದನ, ಹೆಗ್ಡೆ ಕಾಂಪೌಂಡ್, ಕೊರಂಗ್ರಪಾಡಿ ಗ್ರಾಮ, ಉಡುಪಿ ಎಂಬಾತನನ್ನು ದಸ್ತಗಿರಿ ಮಾಡಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now