
ದಿನಾಂಕ 06.06.2026 ರಂದು ಸಂಜೆ ಹೆಬ್ರಿ ತಾಲೂಕು, ಹೆಬ್ರಿ ಗ್ರಾಮದ ಹೊಸೂರು ಎಂಬಲ್ಲಿ ಇಸೀಟು ಜುಗಾರಿ ಆಟ ನಡೆಸುತ್ತಿದ್ದ ಬಗ್ಗೆ ಪೊಲೀಸ್ ಉಪಾಧಿಕ್ಷಕರು ಕಾರ್ಕಳ ಉಪ ವಿಭಾಗ ರವರಿಗೆ ಬಂದ ಮಾಹಿತಿಯಂತೆ ಕಾರ್ಕಳ ವೃತ್ತದ ವೃತ್ತ ನಿರೀಕ್ಷಕರಾದ ಸಂದೀಪ್ ಜಿ.ಎಸ್ ಮತ್ತು ಸಿಬ್ಬಂದಿಯವರು ಹೆಬ್ರಿ ತಾಲೂಕು ಹೊಸೂರು ಎಂಬಲ್ಲಿ ಚಪ್ಪರ ಹಾಕಿ ಮೇಲ್ಗಡೆ ಟರ್ಪಾಲ್ ಹಾಸಿ ಮದ್ಯದಲ್ಲಿ ಒಂದು ವಿದ್ಯುತ್ ಬಲ್ಟ್ ಅವಡಿಸಿ ಟೇಬಲ್ ಮೇಲೆ ಬಟ್ಟೆಯನ್ನು ಹಾಸಿ ಸುತ್ತಲೂ ಕುಳಿತು ಅದರ ಮೇಲೆ ಹಣವನ್ನು ಪಣವಾಗಿ ಇಟ್ಟು ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಎಂದು ಹೇಳುತ್ತಾ ಹಣವನ್ನು ಪಣವಾಗಿ ಒಡ್ಡುತ್ತಾ ಜೂಜಾಟವನ್ನು ಆಟವಾಡುತ್ತಿದ್ದವರನ್ನು ದಾಳಿ ನಡೆಸಿ, ಆರೋಪಿಗಳಾದ 1) ವಿಜೇಶ್ ಕುಮಾರ (40), ತಂದೆ: ದಿ. ಸುಧಾಕರ, ವಾಸ: ಮನೆ ನಂಬ್ರ: 3-71/3 ಕಡೆಕಾರು ರಸ್ತೆ, ಜಪ್ಪಿ ಮೋಗರು ಅಂಚೆ ಮತ್ತು ಗ್ರಾಮ ಮಂಗಳೂರು ತಾಲೂಕು, 2) ದಸ್ತಗೀರ್ (33), ತಂದೆ: ಬಂದೆ ನವಾಜ್, ಮನೆ ನಂಬ್ರ: 19/151 , ಕೆ.ಎಸ್. ರಾವ್ ನಗರ, ಕಾರ್ನಾಡ್, ಮೂಲ್ಕಿ ತಾಲೂಕು, ಮಂಗಳೂರು. 3) ರೋಹಿತ್ (34), ತಂದೆ: ಮಾದವ, ವಾಸ: ಮನೆ ನಂಬ್ರ: 2-82/4 ನೀರು ಮಾರ್ಗ ನೆಕ್ಕರೆ ಪದವು ಕುಡುಪು ಗ್ರಾಮ ಮಂಗಳೂರು ತಾಲೂಕು ಎಂಬುವವರನ್ನು ದಸ್ತಗಿರಿ ಮಾಡಿದ್ದು, ಜೂಜಾಟಕ್ಕೆ ಬಳಸಿದ ನಗದು ರೂಪಾಯಿ 23,970/- ಹಣ ಹಾಗೂ ರೂಪಾಯಿ 35,000/- ಮೌಲ್ಯದ 5 ಮೊಬೈಲ್ಗಳನ್ನು, ಇಸ್ಟೀಟು ಕಾರ್ಡ್ಗಳು, ಟೇಬಲ್, ಕುರ್ಚಿಗಳನ್ನು ಹಾಗೂ ವಿದ್ಯುತ್ ಬೆಳಕಿಗಾಗಿ ಮಾಡಿಕೊಂಡ ಬ್ಯಾಟರಿ ಹಾಗೂ ಅದರ ಪರಿಕರಗಳನ್ನು ಮತ್ತು ಇಸ್ಪೀಟು ಜೂಜಾಟಕ್ಕೆ ಬರಲು ಬಳಸಿದ 3 ಕಾರುಗಳು, 2 ಮೋಟಾರ್ ಸೈಕಲ್ ಹಾಗೂ 1 ಸ್ಕೂಟರ್ ನ್ನು ಸ್ವಾಧಿನಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಎಲ್ಲಾ ಸ್ವತ್ತುಗಳ ಒಟ್ಟು ಕ್ರೋಡಿಕೃತ ಅಂದಾಜು ಮೌಲ್ಯ 13,07,370/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 27/26 ಕಲಂ. 80 ಕರ್ನಾಟಕ ಪೊಲೀಸ್ ಕಾಯಿದೆ ಮತ್ತು 112 ಬಿಎನ್ಎಸ್ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನಂತರ ಪ್ರಕರಣದಲ್ಲಿ ತನಿಖೆ ಮುಂದುವರಿಸಿ ದಾಳಿಯ ಸಮಯ ಓಡಿ ಹೋಗಿ ತಲೆಮರೆಯಿಸಿ ಕೊಂಡಿದ್ದ ಆರೋಪಿಗಳಾದ 4) ವಿಜಯ (39), ತಂದೆ: ರಾಮ ಸ್ವಾಮಿ, ವಾಸ; ದುರ್ಗಾ ನಗರ 5 ಸೆಂಟ್ಸ್ ಕುಕ್ಕುಂದೂರು ಗ್ರಾಮ ಕಾರ್ಕಳ ತಾಲೂಕು, 5) ಮಹೇಶ್ (26), ತಂದೆ: ಮುತ್ತು ಬಿ, ವಾಸ; ನೆತ್ತಿ ಕಂಪಾಂಡ್ ಜಾರ್ಕಳ , ಕುಕ್ಕುಂದೂರು ಗ್ರಾಮ ಕಾರ್ಕಳ ತಾಲೂಕು 6) ಕಿಶೋರ್ ಕುಮಾರ್ (46), ತಂದೆ: ಜಗ್ನನಾಥ ಕೋಟ್ಯಾನ್, ವಾಸ; ಗಣೇಶ ನಗರ, ಬೋಲಾರಗುಡ್ಡೆ , ಉದ್ಯಾವರ ಅಂಚೆ ಮತ್ತು ಗ್ರಾಮ ಉಡುಪಿ ತಾಲೂಕು. 7) ಸಂತೋಷ್ ಆಚಾರ್ಯ (35), ತಂದೆ; ದಿ ಲಕ್ಷ್ಮಣ ಆಚಾರ್ಯ, ವಾಸ; ದುರ್ಗಾ ನರ್ಸಿಂಗ್ ಹೋಮ್ ಬಳಿ ಕುಕ್ಕುಂದೂರು ಗ್ರಾಮ ಕಾರ್ಕಳ ಎಂಬುವವರನ್ನು ದಸ್ತಗಿರಿ ಮಾಡಲಾಗಿದೆ. ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now