ಮರಬಿದ್ದು ಮನೆ ಹಾನಿಗೊಳಗಾದ ಕುಟುಂಬಕ್ಕೆ ಸೀನಿಯರ್ ಚೇಂಬರ್ ಕೋಣಂದೂರು ನೆರವು

ಮರಬಿದ್ದು ಮನೆ ಹಾನಿಗೊಳಗಾದ ಕುಟುಂಬಕ್ಕೆ ಸೀನಿಯರ್ ಚೇಂಬರ್ ಕೋಣಂದೂರು ನೆರವು
0Shares

ತೀರ್ಥಹಳ್ಳಿ: ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಕೋಣಂದೂರು ಸಮೀಪದ ಗೇರುಕಟ್ಟೆಯ ಮಹೇಶ್ ಎಂಬ ಕೂಲಿಕಾರ್ಮಿಕರ ಮನೆಯ ಮೇಲೆ ಮರವೊಂದು ಬಿದ್ದು, ಮನೆಯ ಮೇಲ್ಛಾವಣಿ ಸಂಪೂರ್ಣ ಹಾನಿಗೊಳಗಾಗಿದ್ದು, ಗೋಡೆಗಳಿಗೂ ಹಾನಿಯಾಗಿದೆ.

ಮಹೇಶ್ ಅವರ ಕುಟುಂಬಕ್ಕೆ ಯಾವುದೇ ಜಮೀನು ಅಥವಾ ಸ್ವಂತ ಆದಾಯದ ಮೂಲವಿಲ್ಲ. ಕೂಲಿ ಕೆಲಸ ಮಾಡಿಕೊಂಡು ಸ್ವಾವಲಂಬಿಯಾಗಿ ಜೀವನ ನಡೆಸುತ್ತಿರುವ ಕುಟುಂಬದ ಸಂಕಷ್ಟದ ವಿಚಾರ ತಿಳಿದ ಕೋಣಂದೂರು ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಘಟಕದ ಸದಸ್ಯರು ತಕ್ಷಣ ಸ್ಪಂದಿಸಿ ನೆರವಿನ ಹಸ್ತ ಚಾಚಿದ್ದಾರೆ.

ಕುಟುಂಬಕ್ಕೆ ಮುಂದಿನ ಮೂರು ತಿಂಗಳ ಅವಧಿಗೆ ಅಗತ್ಯವಾಗುವಷ್ಟು ಅಡುಗೆ ದಿನಸಿ ಸಾಮಗ್ರಿಗಳು ಹಾಗೂ ನಿತ್ಯ ಬಳಕೆಯ ವಸ್ತುಗಳನ್ನು ವಿತರಿಸಲಾಯಿತು. ಅಲ್ಲದೆ, ಮುಂದಿನ ದಿನಗಳಲ್ಲಿಯೂ ಕುಟುಂಬದೊಂದಿಗೆ ನಿಂತು ಸಾಧ್ಯವಾದಷ್ಟು ನೆರವು ನೀಡುವುದರ ಜೊತೆಗೆ, ಇತರರಿಂದಲೂ ಸಹಾಯ ದೊರಕಿಸಿಕೊಡುವ ಭರವಸೆಯನ್ನು ಚೇಂಬರ್ ಸದಸ್ಯರು ನೀಡಿದ್ದಾರೆ.

ಈ ಸಂದರ್ಭದಲ್ಲಿ ಚೇಂಬರ್ ಅಧ್ಯಕ್ಷ ಹಾಗೂ ಪತ್ರಕರ್ತ ಮುರುಗರಾಜ್, ಕಾರ್ಯದರ್ಶಿ ಮಲ್ಲೇಸರ ಪೃಥ್ವಿರಾಜ್, ಘಟಕದ ಮಾಜಿ ಅಧ್ಯಕ್ಷ ದೇಮ್ಲಾಪುರ ವಿಶ್ವನಾಥ್, ಹಾಲೇಸರ ಅನಿಲ್, ಮುಳಕೇವಿ ಮುರಿಗೆಪ್ಪ, ಪೂಜಾ ಮಂಜುನಾಥ್, ಶಶಿಧರ್ ಮೇಲಿನಕೊಪ್ಪ, ಫೋಕಸ್ ಪ್ರಶಾಂತ್, ಮಂಗಳ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಹೃದಯ ಜನತೆ ಈ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿ, ತಮ್ಮ ಕೈಲಾದಷ್ಟು ನೆರವು ನೀಡಬೇಕು ಎಂದು ಚೇಂಬರ್ ಅಧ್ಯಕ್ಷ ಮುರುಗರಾಜ್ ಮನವಿ ಮಾಡಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now