ಶಿರ್ವಾ ಅಪಘಾತ ಪ್ರಕರಣ: ಅಜಾಗರೂಕ ಚಾಲನೆಯಿಂದ ಬೈಕ್‌ಗೆ ಆಟೋ ಢಿಕ್ಕಿ – ಇಬ್ಬರಿಗೆ ಗಾಯ, ಪ್ರಕರಣ ದಾಖಲು

ಶಿರ್ವಾ ಅಪಘಾತ ಪ್ರಕರಣ: ಅಜಾಗರೂಕ ಚಾಲನೆಯಿಂದ ಬೈಕ್‌ಗೆ ಆಟೋ ಢಿಕ್ಕಿ – ಇಬ್ಬರಿಗೆ ಗಾಯ, ಪ್ರಕರಣ ದಾಖಲು
0Shares

ಶಿರ್ವಾ: ದಿನಾಂಕ 18/09/2026 ರಂದು ರಾತ್ರಿ 8:30 ಗಂಟೆಗೆ ಕಟ್ಟಿಂಗೇರಿ ಗ್ರಾಮದ ನಿಟ್ಟೂಲ್‌ ಎಂಬಲ್ಲಿ ಹಾದು ಹೋಗಿರುವ ಮೂಡುಬೆಳ್ಳೆ- ಕಪ್ಪಂದಕರಿಯ ಸಾರ್ವಜನಿಕ ರಸ್ತೆಯಲ್ಲಿ ಅಟೋರಿಕ್ಷಾ ನಂಬ್ರ KA-20-AB-3621 ನೇದರ ಚಾಲಕ ಕಪ್ಪಂದ ಕರಿಯ ಕಡೆಯಿಂದ ಮೂಡುಬೆಳ್ಳೆ ಕಡೆಗೆ ಅಜಾಗರೂಕತೆ ಹಗೂ ನಿರ್ಲಕ್ಷತನದಿಂದ ಆತನ ತೀರಾ ಬಲಬದಿಯಲ್ಲಿ ಚಲಾಯಿಸಿಕೊಂಡು ಹೋಗಿ, ಮೂಡುಬೆಳ್ಳೆ ಕಡೆಯಿಂದ ಕಪ್ಪಂದಕರಿಯ ಕಡೆಗೆ ಜೋಸೆಫ್‌ ಮಾರ್ಟಿಸ್‌ ಎಂಬುವವರು ಪಿರ್ಯಾದಿದಾರರಾದ ನೆವಿಲ್ ವಿಲ್ಸನ್ ಡಿಸೋಜ (36), ಕಟ್ಟಿಂಗೇರಿ ಗ್ರಾಮ, ಕಾಪು ಇವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-HF-5267 ನೊಂದಣೆ ಸಂಖ್ಯೆಯ ಮೋಟಾರು ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್‌ ಸಮೇತ ಡಾಮಾರು ರಸ್ತೆಗೆ ಬಿದ್ದು, ಮೋಟಾರು ಸೈಕಲ್‌ ಸವಾರ ಜೋಸೆಫ್ ಮಾರ್ಟಿಸ್ ಇವರ ಬಲಕೈಗೆ ಒಳ ಜಖಂ ಮತ್ತು ಮುಖಕ್ಕೆ ತರಚಿದ ಗಾಯ, ಮೇಲಿನ ಮೂರು ಹಲ್ಲುಗಳು ಉದುರಿ ಹೋಗಿದ್ದು, ಪಿರ್ಯಾದಿದಾರರ ಹಣೆಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 76/2026 ಕಲಂ:281, 125(a) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now