ಸಂತ ಫ್ರಾನ್ಸಿಸ್ ಸಾವೇರರ ದೇವಾಲಯ ಮುದರಂಗಡಿ: ಕಥೊಲಿಕ್ ಸಭಾ ಘಟಕದಿಂದ ಕೆಸರು ಗದ್ದೆ ಕ್ರೀಡಾಕೂಟ ಯಶಸ್ವಿ

ಸಂತ ಫ್ರಾನ್ಸಿಸ್ ಸಾವೇರರ ದೇವಾಲಯ ಮುದರಂಗಡಿ: ಕಥೊಲಿಕ್ ಸಭಾ ಘಟಕದಿಂದ ಕೆಸರು ಗದ್ದೆ ಕ್ರೀಡಾಕೂಟ ಯಶಸ್ವಿ
0Shares

ಸಂತ ಫ್ರಾನ್ಸಿಸ್ ಸಾವೇರರ ದೇವಾಲಯ ಮುದರಂಗಡಿ ಇಲ್ಲಿಯ ಕಥೊಲಿಕ್ ಸಭಾ ಘಟಕದ ವತಿಯಿಂದ ಚರ್ಚ್ ಪರಿಮಿತಿಯ ಎಲ್ಲಾ ಸದಸ್ಯರಿಗೆ ಕೆದಾ ಗದ್ಯಾ ಸ್ಪರ್ಧೆ – 2026 ಎಂಬ ಕೆಸರಿನ ಗದ್ದೆಯಲ್ಲಿ ವಿವಿಧ ರೀತಿಯ ಮನೋರಂಜನಾತ್ಮಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಸಣ್ಣ ಮಕ್ಕಳಿಂದ ಪ್ರಾರಂಭಗೊಂಡು ಹಿರಿಯರವರೆಗೆ ಸ್ಪರ್ಧೆಗಳು ನಡೆದವು.

ಉದ್ಘಾಟನಾ ಕಾರ್ಯಕ್ರಮಕ್ಕೆ ಫೀನಿಕ್ಸ್ ಇವೆಂಟ್ಸ್ ಇದರ ಮಾಲಕರು ಶ್ರೀ ವಿಲ್ಸನ್ ಡಿಸೋಜಾ ಹಾಜರಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು. ವೇದಿಕೆಯಲ್ಲಿ ಕಥೊಲಿಕ್ ಸಭಾ ಅಧ್ಯಕ್ಷ ಶ್ರೀ ಸುನಿಲ್ ಡಿಸೋಜಾ ಇವರೊಂದಿಗೆ ಶ್ರೀ ಜೆರಾಲ್ಡ್ ಫೆರ್ನಾಂಡಿಸ್ ಮೂಡುಬೆಳ್ಳೆ ಇವರು ಮತ್ತು ಘಟಕದ ಸಮಿತಿ ಸದಸ್ಯರು ಹಾಜರಿದ್ದರು.

ಸಂಜೆ ಬಹುಮಾನ ವಿತರಣ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಉಡುಪಿ ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಶ್ರೀ ಮೆಲ್ವಿನ್ ಆರಾನ್ಹ ಮತ್ತು ಶಿರ್ವಾ ವಾರಾಡೊ ಅಧ್ಯಕ್ಷ ಶ್ರೀ ಜೆರಾಲ್ಡ್ ರೋಡ್ರಿಗಸ್ ಹಾಜರಿದ್ದು ಉತ್ತಮ ಸಂದೇಶ ನೀಡಿದರು. ಇವರಿಗೆ ತೀರ್ಪುದಾರರಾದ ಶ್ರೀ ವಿಜಯ್ ಧೀರಾಜ್ ಮತ್ತು ಆಲ್ಬನ್ ರವರು ಸಾಥ್ ನೀಡಿದರು.


ಘಟಕದ ಆತ್ಮಿಕ ನಿರ್ದೇಶಕರಾದ ಫಾದರ್ ವಿನ್ಸೆoಟ್ ಕುವೆಲ್ಲೊ ಅವರು ಎಲ್ಲರಿಗೂ ಶುಭ ಹಾರೖಸಿ ಆಕರ್ಷಕ ಬಹುಮಾನ ವಿತರಣೆ ಮಾಡಿದರು.
ಅಧಿಕ ಅಂಕ ಗಳಿಸಿದ ಸಂತ ಸೆಬಾಸ್ಟಿಯನ್ ವಾರ್ಡ್ ಗೆ ಶಾಶ್ವತ ಫಲಕ ನೀಡಿ ಗೌರವಿಸಲಾಯಿತು.

ಆಗಮಿಸಿದ ಎಲ್ಲರಿಗೂ ಬೆಳಗ್ಗಿನ ಚಾ ಉಪಹಾರ, ಮಧ್ಯಾನ್ಹದ ಊಟ, ಸಂಜೆಯ ಚಾ ವ್ಯವಸ್ಥೆ ಮಾಡಲಾಗಿತ್ತು. ರಸ್ತೆ ಉದ್ದಕ್ಕೂ ಮತ್ತು ಕಾರ್ಯಕ್ರಮದ ಸ್ಥಳವನ್ನು ತಳಿರು ತೋರಣಗಳಿಂದ, ಬಂಟಿಂಗ್ಸ್ ಗಳಿಂದ ಕಂಗೊಳಿಸಲಾಗಿತ್ತು.

ಕಾರ್ಯಕ್ರಮ ನಡೆಸಲು ಸಹಕರಿಸದ ಎಲ್ಲಾ ಪ್ರಯೋಜಕರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಕಥೊಲಿಕ್ ಸಭಾ ಮುದರಂಗಡಿ ಘಟಕದ ಎಲ್ಲಾ ಸದಸ್ಯರು ಉತ್ತಮ ಸಹಕಾರ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now