ಕಳತ್ತೂರಿನಲ್ಲಿ ದನ ಕಳವು: ಟೆಂಪೋ ಸಮೇತ 4 ಜನರ ಬಂಧನ – ಶಿರ್ವ ಪೊಲೀಸರ ಕಾರ್ಯಾಚರಣೆ

ಕಳತ್ತೂರಿನಲ್ಲಿ ದನ ಕಳವು: ಟೆಂಪೋ ಸಮೇತ 4 ಜನರ ಬಂಧನ – ಶಿರ್ವ ಪೊಲೀಸರ ಕಾರ್ಯಾಚರಣೆ
0Shares

ದಿನಾಂಕ 19/09/2026 ರಂದು ಸಂಜೆ 4.00 ಗಂಟೆಗೆ ಕಾಪು ತಾಲೂಕು ಕಳತ್ತೂರು ಗ್ರಾಮದ ನಡಿಗುತ್ತು ಎಂಬಲ್ಲಿ ವಸಂತಿ ಸುನೀತಾ ಕ್ವಾಡ್ರಸ್‌ ಎಂಬುವರು ಮೇಯಲು ಬಿಟ್ಟಿದ್ದ ತಮ್ಮ 5 ದನಗಳ ಪೈಕಿ 1 ಕಪ್ಪು ಬಣ್ಣದ 2 ವರ್ಷ ಪ್ರಾಯದ ದನ ಕಾಣದೇ ಇದ್ದಾಗ ಅವರು ಹುಡುಕಾಡಿದ್ದು ಎಲ್ಲಿಯೂ ಕಂಡುಬಂದಿರುವುದಿಲ್ಲ. ಆಗ ಅಲ್ಲಿಯೇ ಹತ್ತಿರದಲ್ಲಿ ನಿಂತಿದ್ದ ಟೆಂಪೋ ಒಂದನ್ನು ಕಂಡು ಹೋಗಿ ನೋಡಿದಾಗ ಅದರಲ್ಲಿ ಕಾಣೆಯಾದ ತಮ್ಮ ದನ ಇದ್ದು, ಅದರ ಜೊತೆ ಇನ್ನೊಂದು ದನ ಕೂಡ ಇದ್ದು, ಇವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿದ್ದು ಕಂಡುಬಂದಿರುತ್ತದೆ. ಆಗ ವಾಹನದ ಅದರ ನಂಬ್ರ ನೋಡಲಾಗಿ KA19B5641 ಆಗಿರುತ್ತದೆ. ಸದರಿ ವಾಹನದ ಬಳಿಯಲ್ಲಿ ದೂರುದಾರರ ಪರಿಚಯದ ಉಮ್ಮರಬ್ಬ ಮತ್ತು ಇತರ ಮೂರು ಜನರು ಇರುವುದು ಕಂಡುಬಂದಿದ್ದು, ದೂರುದಾರನ್ನು ನೋಡಿದ ಇವರು ಒಮ್ಮೆಲೇ ಟೆಂಪೋವನ್ನು ಚಲಾಯಿಸಿಕೊಂಡು ಹೋಗಿ ಪರಾರಿಯಾಗಿರುತ್ತಾರೆ. ಈ ಬಗ್ಗೆ ದೂರುದಾರರಾದ ವಸಂತಿ ಸುನೀತಾ ಕ್ವಾಡ್ರಸ್‌ ಎಂಬುವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ.

ಈ ಪ್ರಕರಣದ 1 ನೇ ಆರೋಪಿ ಉಮ್ಮರಬ್ಬ, ಪ್ರಾಯ 64 ವರ್ಷ, ಕಳತ್ತೂರು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಈತನನ್ನು ದಿನಾಂಕ: 19/09/2026 ರಂದು ದಸ್ತಗಿರಿಗೊಳಿಸಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನವಿಧಿಸಿರುತ್ತದೆ.

ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿತರಾದ
ಮೊಹಮ್ಮದ್ ಶರೀಫ್‌, ಪ್ರಾಯ 31 ವರ್ಷ, ಕಳತ್ತೂರು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ.
ಶಂಶುದ್ದೀನ್, ಪ್ರಾಯ 57 ವರ್ಷ, ಕಳತ್ತೂರು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ.
ಮಹಮ್ಮದ್‌ ಆಸೀರ್, ಪ್ರಾಯ 24 ವರ್ಷ, ಕಳತ್ತೂರು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರುಗಳನ್ನು ಈ ದಿನ ದಿನಾಂಕ: 20/09/2026 ರಂದು ಕಾಪುವಿನ ಕೊಪ್ಪಲಂಗಡಿ ಎಂಬಲ್ಲಿ ವಾಹನ ಸಮೇತ ಪತ್ತೆ ಹಚ್ಚಿ, ಆಪಾದಿತರನ್ನು ವಶಕ್ಕೆ ಪಡೆದು ದಸ್ತಗಿರಿಗೊಳಿಸಿಲಾಗಿದೆ. ಕೃತ್ಯಕ್ಕೆ ಬಳಸಿದ್ದ KA19B5641 ನೇ ನಂಬ್ರದ ವಾಹನ ಮತ್ತು ದನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿತರನ್ನು ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ದಸ್ತಗಿರಿಗೊಳಿಸಲಾಗಿದೆ.

ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಇಶಿತಾ ಗುಪ್ತ ಹಾಗೂ ಕಾಪು ಪೊಲೀಸ್‌ ವೃತ್ತ ನಿರೀಕ್ಷಕರಾದ ಅಝಮತ್‌ ಆಲಿ ರವರ ನೇತೃತ್ವದಲ್ಲಿ ಪತ್ತೆ ಕಾರ್ಯಾಚರಣೆ ನಡೆಸಲಾಗಿರುತ್ತದೆ. ಈ ಕಾರ್ಯಾಚರಣೆಯಲ್ಲಿ ಶಿರ್ವ ಠಾಣಾ ಉಪ ನಿರೀಕ್ಷಕರಾದ ಮಂಜುನಾಥ ಮರಬದ, ಪಡುಬಿದ್ರಿ ಠಾಣಾ ಉಪ ನಿರೀಕ್ಷಕರಾದ ಸಕ್ತಿವೇಲು. ಇ, ಅನಿಲ್‌ ಕುಮಾರ್‌ ಟಿ ನಾಯ್ಕ್‌, ಹೆಬ್ರಿ ಠಾಣಾ ಉಪ ನಿರೀಕ್ಷಕರಾದ ಲೊಹಿತ್‌ ಕುಮಾರ್‌ ಹಾಗೂ ಶಿರ್ವ, ಕಾಪು ಮತ್ತು ಪಡುಬಿದ್ರಿ ಪೊಲೀಸ್‌ ಠಾಣಾ ಸಿಬ್ಬಂದಿಯವರು ಮತ್ತು ಉಡುಪಿ ಜಿಲ್ಲಾ ಪೊಲೀಸ್‌ ಕಛೇರಿಯ ಸಿ.ಡಿ.ಆರ್‌ ವಿಭಾಗದ ಸಿಬ್ಬಂದಿಯವರು ಭಾಗವಹಿಸಿರುತ್ತಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now