
ದಿನಾಂಕ 24/11/2026 ರಂದು ಪ್ರಕರಣದ ಪಿರ್ಯಾದಿ ಬಿ ರಾಜಮೂರ್ತಿ ಭಟ್(68ವ)ವರು ಕುರ್ಕಾಲು ಗ್ರಾಮದ ಕುಂಜಾರುಗಿರಿ ದುರ್ಗಾದೇವಿ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮಕ್ಕೆ ಹೋಗಿದ್ದು,ಅಲ್ಲಿ ಪರಿಚಯದ ಮುರಳಿಕೃಷ್ಣ ಸಹ ಇದ್ದು, ರಾತ್ರಿ 8:30 ಗಂಟೆ ಸುಮಾರಿಗೆ ಪಿರ್ಯಾದುದಾರರ ಬಳಿ ಬಂದು, ನಿಮ್ಮ ಬಳಿ ಸ್ವಲ್ಪ ಮಾತನಾಡಲು ಇದೆ ಎಂದು ಹೇಳಿ, ಅವರನ್ನು ದೇವಸ್ಥಾನದಿಂದ ಹೊರಗೆ ಕರೆದುಕೊಂಡು ಹೋಗಿ,ಆತನ ಕಾರಿನಲ್ಲಿ ಕುಳ್ಳಿರಿಸಿ ಪಿರ್ಯಾದುದಾರರ ಬಳಿ ತಾನು ಸುಮಾರು 60 ಎಕರೆ ಜಾಗದಲ್ಲಿ ಭತ್ತದ ಬೇಸಾಯ ಮಾಡಿಕೊಂಡಿದ್ದು, ಇದನ್ನು ಸುಮಾರು 200 ಎಕರೆಗೆ ವಿಸ್ತರಿಸುವ ಸಲುವಾಗಿ 25 ಲಕ್ಷದಷ್ಠು ಹಣದ ಅವಶ್ಯಕತೆ ಇದೆ, ಸಹಾಯ ಮಾಡುವಂತೆ ತಿಳಿಸಿರುತ್ತಾನೆ. ಇದಕ್ಕೆ ಪಿರ್ಯಾದುದಾರರು ಒಪ್ಪದೇ ಇದ್ದಾಗ, ಪಿರ್ಯಾದುದಾರರ ಕುತ್ತಿಗೆಯಲ್ಲಿದ್ದ ಚಿನ್ನದ ಸರಗಳನ್ನು ದೋಚುವ ಉದ್ದೇಶದಿಂದ ಕಾರಿನಲ್ಲಿ ಸುತ್ತಿಗೆಯಿಂದ ಹಲ್ಲೆ ಮಾಡಿ,ಗಂಬೀರ ಗಾಯಗೊಳಿಸಿದ್ದು, ಪಿರ್ಯಾದುದಾರರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅವರನ್ನು ಬೆನ್ನಟ್ಟಿ ದೂಡಿ ಸುಮಾರು 20 ಗ್ರಾಂ ತೂಕದ ಚಿನ್ನದ ಸರ ಮತ್ತು 28 ಗ್ರಾಂ ತೂಕದ ತುಳಸಿ ಮಣಿಗಳಿರುವ ಚಿನ್ನದ ಸರವನ್ನು ಕಿತ್ತು, (ಅಂದಾಜು ಮೌಲ್ಯ 4,50,000/-) ಕಾರು ಸಮೇತ ಪರಾರಿಯಾಗಿರುತ್ತಾನೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಠಾಣಾ ಅ ಕ್ರ:97/2026,ಕಲಂ: 311, 309(6), 118(2) BNS 2023 ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ಆಪಾದಿತ ಮುರಳಿಕೃಷ್ಣ ಉಪಾಧ್ಯಾಯ, ಪ್ರಾಯ 47 ವರ್ಷ ಅಪ್ರಾಮೇಯ, ಪಡುಬೆಳ್ಳೆ ಸಂಪತ್ ಬಾರ್ ಬಳಿ, ಕುಂಜಾರುಗಿರಿ ಅಂಚೆ, ಪಡುಬೆಳ್ಳೆ ಗ್ರಾಮ, ಕಾಪು ತಾಲೂಕು, ಉಡುಪಿ ಈತನನ್ನು ದಿನಾಂಕ:25.11.2026 ರಂದು ದಸ್ತಗಿರಿ ಮಾಡಿ ತುಳಸಿ ಮಣಿಗಳು ಇರುವ ತುಂಡಾದ ಚಿನ್ನದ ಸರ-1, ಅಂದಾಜು ಮೌಲ್ಯ 1,90,000/- ತುಂಡಾದ ಹವಳದ ಚಿನ್ನದ ಸರ-1, ಅಂದಾಜು ಮೌಲ್ಯ 2,60,000/- ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ಸ್ವಾಧೀನಪಡಿಸಿ ಆಪಾದಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now