
ಕಿರಿಮಂಜೇಶ್ವರ :ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ, ಬೈಂದೂರು ಇವರ ಆಶ್ರಯದಲ್ಲಿ ಕಿರಿಮಂಜೇಶ್ವರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯು ನವೆಂಬರ್ 23ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಉಳ್ಳೂರು-11 ಇಲ್ಲಿ ನಡೆಯಿತು.
ಈ ಸ್ಪರ್ಧೆಯಲ್ಲಿ ಜನತಾ ನ್ಯೂ ಆಂಗ್ಲ ಮಾಧ್ಯಮ ಶಾಲೆ, ಕಿರಿಮಂಜೇಶ್ವರದ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರತಿಭೆಯನ್ನು ಪ್ರದರ್ಶಿಸಿ ಒಟ್ಟು 40 ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಅಭೂತಪೂರ್ವ ಸಾಧನೆ ಮೆರೆದಿದ್ದಾರೆ.
ಕಿರಿಯರ ವಿಭಾಗದ ಸಂಸ್ಕೃತ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಆರಾಧ್ಯ ಪ್ರಥಮ ಸ್ಥಾನ, ಅರೇಬಿಕ್ ಧಾರ್ಮಿಕ ಪಠಣದಲ್ಲಿ ಫರಾಜ್ ದ್ವಿತೀಯ ಸ್ಥಾನ ಹಾಗೂ ಛದ್ಮವೇಷದಲ್ಲಿ ಶಿವನ್ಯ ತೃತೀಯ ಸ್ಥಾನ ಪಡೆದುಕೊಂಡರು.
ಹಿರಿಯರ ವಿಭಾಗದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ನಿರೂಪಾ ಪ್ರಥಮ ಸ್ಥಾನ, ಪ್ರಬಂಧ ರಚನೆಯಲ್ಲಿ ಖುಷಿ ಎಂ. ಪ್ರಥಮ ಸ್ಥಾನ ,ಅರೇಬಿಕ್ ಧಾರ್ಮಿಕ ಪಠಣದಲ್ಲಿ ಎಂ. ಮಹಾರೂಫ್ ಪ್ರಥಮ ಸ್ಥಾನ , ಮಿಮಿಕ್ರಿ ಸ್ಪರ್ಧೆಯಲ್ಲಿ ಅದ್ವಿಕ್ ಪ್ರಥಮ ಸ್ಥಾನ, ಅಭಿನಯ ಗೀತೆಯಲ್ಲಿ ಸಾನಿಧ್ಯ ತೃತೀಯ ಸ್ಥಾನ, ಚಿತ್ರಕಲೆ ಸ್ಪರ್ಧೆಯಲ್ಲಿ ಖುಷಿ ದ್ವಿತೀಯ ಸ್ಥಾನ, ಹಿಂದಿ ಕಂಠಪಾಠದಲ್ಲಿ ನಿರೂಪ ದ್ವಿತೀಯ ಸ್ಥಾನ ಹಾಗೂ ಇಂಗ್ಲಿಷ್ ಕಂಠಪಾಠದಲ್ಲಿ ರಿಯೋನಾ ಪ್ರಥಮ ಸ್ಥಾನ ಪಡೆದರು.
ಪ್ರೌಢ ವಿಭಾಗದ ಹಿಂದಿ ಭಾಷಣ ಸ್ಪರ್ಧೆಯಲ್ಲಿ ಮಿನಲ್ ಪ್ರಥಮ ಸ್ಥಾನ, ಪ್ರಬಂಧ ರಚನೆಯಲ್ಲಿ ಶಾರಿಕಾ ಡಿ. ಪ್ರಥಮ ಸ್ಥಾನ, ರಸಪ್ರಶ್ನೆಯಲ್ಲಿ ಇಶಾನ್ವಿ ಮತ್ತು ಜಾಸ್ಮಿನ್ ತೃತೀಯ ಸ್ಥಾನ, ಚಿತ್ರಕಲೆಯಲ್ಲಿ ನವ್ಯ ಆಚಾರ್ಯ ಪ್ರಥಮ ಸ್ಥಾನ, ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಶ್ರೀಯಾ ಪ್ರಥಮ ಸ್ಥಾನ, ಗಜಲ್ ನಲ್ಲಿ – ರಿಫಾಜ್ ಪ್ರಥಮ ಸ್ಥಾನ, ಮಿಮಿಕ್ರಿಯಲ್ಲಿ ಶ್ರೀಶಾಂತ ಪ್ರಥಮ ಸ್ಥಾನ,ಭಾವಗೀತೆ ಸ್ಪರ್ಧೆಯಲ್ಲಿ ಖುಷಿ ದ್ವಿತೀಯ ಸ್ಥಾನ, ಆಶುಭಾಷಣದಲ್ಲಿ ನಮ್ಯ ಪ್ರಥಮ ಸ್ಥಾನ, ಅರೇಬಿಕ್ ಧಾರ್ಮಿಕ ಪಠಣದಲ್ಲಿ ಫಾಸಿಲ್ ಪ್ರಥಮ ಸ್ಥಾನ, ಚರ್ಚಾ ಸ್ಪರ್ಧೆಯಲ್ಲಿ ಸಾನಿಕಾ ಪ್ರಥಮ ಸ್ಥಾನ,ಕವನವಾಚನದಲ್ಲಿ ಮಾನ್ಯ ದ್ವಿತೀಯ ಸ್ಥಾನ, ಕನ್ನಡ ಭಾಷಣದಲ್ಲಿ ಸಂಜನಾ ಪ್ರಥಮ ಸ್ಥಾನ, ಭರತನಾಟ್ಯದಲ್ಲಿ ಶ್ರೀಯಾ ಪ್ರಥಮ ಸ್ಥಾನ, ಇಂಗ್ಲಿಷ್ ಭಾಷಣದಲ್ಲಿ ಕೃತಿ ಪ್ರಥಮ ಸ್ಥಾನ, ಜನಪದ ಗೀತೆಯಲ್ಲಿ ರಾಘವಿ ದ್ವಿತೀಯ ಸ್ಥಾನ, ಕವ್ವಾಲಿಯಲ್ಲಿ ಅಶ್ರಫ್ ಮತ್ತು ತಂಡಕ್ಕೆ ಪ್ರಥಮ ಸ್ಥಾನ ಮತ್ತು ಜನಪದ ನೃತ್ಯದಲ್ಲಿ ನವ್ಯ ಮತ್ತು ತಂಡದವರು ಪ್ರಥಮ ಸ್ಥಾನ ಪಡೆದುಕೊಂಡರು. ಕ್ಲಸ್ಟರ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ದಾಖಲೆಯ 30 ವಿದ್ಯಾರ್ಥಿಗಳು ವಲಯಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಗಮನಾರ್ಹ ಸಾಧನೆಗೆ ಜನತಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು,ಶಾಲೆಯ ಮುಖ್ಯ ಶಿಕ್ಷಕಿ, ಶಿಕ್ಷಕ- ಶಿಕ್ಷಕೇತರ ವೃಂದದವರು ಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿ, ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ಪೋಷಕರ ಪ್ರೋತ್ಸಾಹದ ಫಲವಾಗಿ ಜನತಾ ಶಾಲೆಯು ಪ್ರತಿಭಾ ಕಾರಂಜಿಯಲ್ಲಿ ತನ್ನ ಪ್ರತಿಭೆಯ ಛಾಪು ಮೂಡಿಸಿದೆ. ಈ ಸಾಧನೆಯು ಶಾಲೆಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತಷ್ಟು ಪ್ರೇರಣೆಯಾಗಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now