
ಶಿರ್ವ: ಮೇ 9 ಬೆಳಿಗ್ಗೆ 10:30 ಗಂಟೆಗೆ ಶಿರ್ವ ರಿಕ್ಷಾ ನಿಲ್ದಾಣ ಬಳಿ ಇರುವ ಶಾಮಲಾ ಕಾಂಪ್ಲೆಕ್ಸ್ ನಲ್ಲಿ ಜನ ಸೇವ ಡಿಜಿಟಲ್ ಕೇಂದ್ರ ಉದ್ಘಾಟನೆಗೊಂಡಿತು. ಉಡುಪಿ ಧರ್ಮ ಪ್ರಾಂತ್ಯದ ಚಾನ್ಸೀಲರ್ ಫಾ. ಸ್ಟೀವನ್ ಡಿಸೋಜ ಆಶೀರ್ವಚನ ಮಾಡಿ ಶುಭ ಕೋರಿದರು, ಶಿರ್ವ ಚರ್ಚಿನ ಸಹಾಯಕ ಧರ್ಮ ಗುರುಗಳಾದ ಫಾ. ಅನಿಲ್ ರೊಡ್ರಿಗಸ್ ರವರು ದೇವರ ವಾಕ್ಯದ ಸಂದೇಶವನ್ನು ನೀಡಿದರು. ಮಾಲಕರಾದ ಮೆಲ್ವಿನ್ ಡಿಸೋಜರವರು ಧರ್ಮಗುರುಗಳಿಗೆ, ಮಾತೃಶ್ರೀ ಯವರಿಗೆ, ಕುಟುಂಬಸ್ಥರಿಗೆ ಹಾಗೂ ಈ ಕಾರ್ಯಕ್ರಮಕ್ಕೆ ಬಂದ ಊರ ಹಾಗೂ ಪರವೂರ ಎಲ್ಲ ಮಹನೀಯರಿಗೆ ಧನ್ಯವಾದಗಳು ತಿಳಿಸಿದರು, ಹಾಗೂ ಜನಸೇವಾ ಡಿಜಿಟಲ್ ಕೇಂದ್ರದ ಸದುಪಯೋಗ ಪಡೆಯಬೇಕಾಗಿ ಕೇಳಿಕೊಂಡರು


ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now