
ಪುತ್ತೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಸುಳ್ಯ ಘಟಕದ ಅಧ್ಯಕ್ಷರಾಗಿ ನೂತನ ಪ್ರವೀಣ್ ನೆಟ್ಟಾರ್ ಆಯ್ಕೆಯಾಗಿದ್ದಾರೆ.
ಲೋಹಿತ್ ರೆಂಜಾಳ ಅವರ ನಿವಾಸದಲ್ಲಿ ಮಹೇಶ್ ಕಲ್ಪಣೆ ಅವರ ಅಧ್ಯಕ್ಷತೆಯಲ್ಲಿ ನಡೆದ ಯುವವಾಹಿನಿ ಸುಳ್ಯ ಘಟಕದ ಮಹಾಸಭೆಯಲ್ಲಿ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಚುನಾವಣಾ ಸಮಿತಿಯ ಶಿವಪ್ರಸಾದ್ ಕೆ.ವಿ. ಅವರ ನೇತೃತ್ವದಲ್ಲಿ ನಡೆಯಿತು.
ಅಧ್ಯಕ್ಷರಾಗಿ ನೂತನ ಪ್ರವೀಣ್ ನೆಟ್ಟಾರು, ಕಾರ್ಯದರ್ಶಿಯಾಗಿ ಹರೀಶ್ ದೋಳ, ಕೋಶಾಧಿಕಾರಿಯಾಗಿ ರಂಜಿತ್ ದರ್ಕಾಸ್, ಉಪಾಧ್ಯಕ್ಷರಾಗಿ ನವೀನ್ ರಾಮಕುಮೇರಿ, ಜೊತೆ ಕಾರ್ಯದರ್ಶಿಯಾಗಿ ಅಶ್ವಿನಿ ಲೋಕೇಶ್ ಮತ್ತು ವಿವಿಧ ವಿಭಾಗಕ್ಕೆ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನೂತನ ಅವರು ಈಶ್ವರಮಂಗಲದವರಾಗಿದ್ದು ಬೆಳ್ಳಾರೆಯ ದಿ. ಪ್ರವೀಣ್ ನೆಟ್ಟಾರ್ ಅವರ ಪತ್ನಿ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now