
ಫಿರ್ಯಾದಿ ಗೀತಾರವರು ಗಂಡನೊಂದಿಗೆ ದಿನಾಂಕ 24-11-2026 ರಂದು 10:30 ಗಂಟೆಗೆ ಔಷಧವನ್ನು ತರಲು ಕುಂದಾಪುರಕ್ಕೆ ಹೊರಟಿದ್ದು ಕೋಟೇಶ್ವರದಲ್ಲಿ ಕೊಡಿ ಹಬ್ಬ ಇರುವುದರಿಂದ ಕೋಟೇಶ್ವರ ಬೈಪಾಸ್ ನಲ್ಲಿ ಬಸ್ಸ್ ನಿಂದ ಇಳಿದು ಕೋಟಿಲಿಂಗೇಶ್ವರದ ದೇವಸ್ಥಾನಕ್ಕೆ ಹೋಗಿ ಸುಮಾರು 11:30 ಗಂಟೆಗೆ ದೇವರ ದರ್ಶನ ಮಾಡಿ ಪ್ರದಕ್ಷಿಣೆ ಹಾಕಿ ಸುಮಾರು ಮಧ್ಯಾಹ್ನ 12:30 ಗಂಟೆಯ ಸುಮಾರಿಗೆ ದೇವಸ್ಥಾನದ ಪೌಳಿಯ ಹೊರ ಭಾಗದಲ್ಲಿ ಜನ ಜಂಗುಳಿ ಇರುವ ಊಟದ ಸರತಿ ಸಾಲಿನಲ್ಲಿ ನಿಂತುಕೊಂಡಿರುವಾಗ ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಸುಮಾರು 7 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಯಾರೋ ಅಪರಿಚಿತ ವ್ಯಕ್ತಿಗಳು ಸೆಳೆದುಕೊಂಡು ಹೋಗಿರುತ್ತಾರೆ. ಸದ್ರಿ ಚಿನ್ನದ ಕರಿಮಣಿ ಸರದ ಒಟ್ಟು ಅಂದಾಜು ಮೌಲ್ಯ 6,00,000/- ರೂಪಾಯಿ ಆಗಬಹುದು ಎಂದು ನೀಡಿದ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 05/2026 ಕಲಂ. 305 BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರಿಸಿದ ಕುಂದಾಪುರ ಪೊಲೀಸಸು ಪ್ರಕರಣದ ಆರೋಪಿತರಾದ 1) ಭಾಗ್ಯ(39), ಕುಶಾಲನಗರ ಶೈಲಜ ಬಡಾವಣೆ ಸೋಮವಾರ ಪೇಟೆ ತಾಲೂಕು ಕುಶಾಲನಗರ ಕೊಡಗು ಜಿಲ್ಲೆ, 2)ಅಶ್ವಿನಿ ಎಲ್ @ ಗಾಯತ್ರಿ(25), ಕಟ್ಟುಮಡಗು ಚೆನ್ನಾಗಂ ತಾಲೂಕು ತಿರುವನ್ನಾಮಲ್ಲೈ ಜಿಲ್ಲೆ ತಮಿಳು ನಾಡು, 3) ಕಾಮಾಚಿ(50), ಕಟ್ಟು ಮಡಗು ಚೆನ್ನಾಗಂ ತಾಲೂಕು ತಿರುವನ್ನಾ ಮಲ್ಲೈ ಜಿಲ್ಲೆ ತಮಿಳು ನಾಡು, 4)ಆದಮ್ಮಾಳ್ @ ಆದ್ಯಾಮ್ಮ(49), ಬಾಲನಪಲ್ಲಿ ಗ್ರಾಮ ಮತ್ತು ಅಂಚೆ ಕೃಷ್ಣಗಿರಿ ಜಿಲ್ಲೆ ತಮಿಳುನಾಡು ರಾಜ್ಯ ಮತ್ತು 5) ಎಸ್ ನಾಗರಾಜ(48), ಶೈಲಜಾ ಬಡಾವಣೆ ಸೋಮವಾರ ಪೇಟೆ ತಾಲೂಕು ಕುಶಾಲನಗರ ಕೊಡಗು ಜಿಲ್ಲೆವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಕಳ್ಳತನ ಮಾಡಿದ ಚಿನ್ನದ ಚೈನ್ (ಸುಮಾರು 7 ಪವನ್ ತೂಕದ ಚಿನ್ನದ ಕರಿಮಣಿ ಸರ ಅಂದಾಜು ಮೌಲ್ಯ 6,00,000/- ಮತ್ತು ಕಳ್ಳತನಕ್ಕೆ ಬಳಸಿದ ಸಿಲ್ವರ್ ಬಣ್ಣದ ಕೆ ಎ 01 ಎಂ ಆರ್ 7991 ನಂಬ್ರದ Mahindra TUV 300 ಕಾರ್ -1 (ಅಂದಾಜು ಮೌಲ್ಯ 3 ಲಕ್ಷ ರೂಪಾಯಿ)ನ್ನು ಹಾಗೂ ಆರೋಪಿತರಿಂದ 7 ಮೊಬೈಲ್ ಪೋನ್ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ನಂತರ ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಸದ್ರಿ ಪ್ರಕರಣದ ತನಿಖೆಯ ಸಂಬಂಧ ಮಾನ್ಯ ಹೆಚ್ ಡಿ ಕುಲಕರ್ಣಿ, ಪೋಲೀಸ್ ಉಪಾಧೀಕ್ಷಕರು ಕುಂದಾಪುರ ಉಪವಿಭಾಗ ಇವರ ಮಾರ್ಗದರ್ಶನದಂತೆ ಕುಂದಾಪುರ ಪೊಲೀಸ್ ಠಾಣಾ ನಿರೀಕ್ಷಕರಾದ ಜಯರಾಮ್ ಡಿ ಗೌಡ ಸಾರಥ್ಯದಲ್ಲಿ, ಠಾಣಾ ಪಿ.ಎಸ್.ಐ ರವರಾದ ನಂಜಾನಾಯ್ಕ್ ಎನ್ (ಕಾ&ಸು), ಪಿ.ಎಸ್.ಐ ಶ್ರೀಮತಿ ಪುಷ್ಪ (ತನಿಖೆ) , ಹಾಗೂ ಸಿಬ್ಬಂದಿಗಳಾದ ಮೋಹನ, ಸಂತೋಷಕುಮಾರ್, ಮಹಾಬಲ ಶೆಟ್ಟಿಗಾರ, ಚಂದ್ರ ಶೇಖರ ಅರೆಶಿರೂರು , ಘನಶ್ಯಾಮ್, ಸಂತೋಷ ದೇವಾಡಿಗ, ಗೌತಮ, ಲೋಹಿತ್ , ನಾರಾಯಣ, ಪದ್ಮಾವತಿ, ರೇವತಿ, ಭಾಗೀರಥಿ, ಚಾಲಕ ಎ.ಆರ್.ಎಸ್. ಐ ರಾಜು ಭೋವಿ ಮತ್ತು ಖಾಸಿಮ್ ಜಮಾದಾರ್ ಹಾಗೂ ಆರ್ಡಿಸಿ ವಿಭಾಗದ ದಿನೇಶ ಮತ್ತು ನಿತೀನ್ ರವರು ಕಾರ್ಯಚರಣೆಯಲ್ಲಿ ಭಾಗವಹಿಸಿರುತ್ತಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now