
ದಿನಾಂಕ 17 ಜುಲೈ 2026ರಂದು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಕಸ್ತೂರ್ಬಾ ಮಣಿಪಾಲ್ ಆಸ್ಪತ್ರೆ ಸಮೂಹದ ವತಿಯಿಂದ 45 ಹೆಲ್ತ್ ಕಿಟ್ ಗಳನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಮ್ ಶಂಕರ್, ಐಪಿಎಸ್ ಹಾಗೂ ಇತರ ಅಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಮಣಿಪಾಲ ಸಮೂಹದ ಇವರು ಹೆಲ್ತ್ ಕಿಟ್ಗಳನ್ನು ಹಸ್ತಾಂತರಿಸಿದರು.
ಅದರಂತೆ ಜಿಲ್ಲೆಯ ಪ್ರತಿಯೊಂದು ಪೊಲೀಸ್ ಠಾಣೆ, ಪೊಲೀಸ್ ವೃತ್ತ ಕಚೇರಿ, ಉಪ ವಿಭಾಗಧಿಕಾರಿ ರವರ ಕಚೇರಿ, ಜಿಲ್ಲಾ ಪೊಲೀಸ್ ಕಚೇರಿ DAR ಹಾಗೂ ವಿಶೇಷ ಘಟಕಗಳಿಗೆ (Special Units) ಈ ಹೆಲ್ತ್ ಕಿಟ್ಗಳನ್ನು ವಿತರಿಸಲಾಯಿತು.
ಈ ಹೆಲ್ತ್ ಕಿಟ್ಟ್ ನಲ್ಲಿ ಒಂದು ಡಿಜಿಟಲ್ BP ಚೆಕ್ಕಿಂಗ್ ಮೆಷಿನ್, ಒಂದು ಡಿಜಿಟಲ್ ಶುಗರ್ ಚೆಕ್ಕಿಂಗ್ ಮೆಷಿನ್(ಸ್ಟ್ರಿಪ್ಸ್ ಸೇರಿ), ಒಂದು ಥರ್ಮೊ ಮೀಟರ್ಗಳನ್ನು ಒಳಗೊಂಡಿರುತ್ತದೆ.
ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಪಡಲು ಈ ಹೆಲ್ತ್ ಕಿಟ್ಗಳನ್ನು ಬಳಸಲಾಗುವುದು.


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now