ಕರ್ನಾಟಕ ಕೊಂಕಣಿ ಅಕಾಡೆಮಿ – ಬೊಂದೆಲ್‌ ಚರ್ಚ್‌ ಸಭಾಂಗಣ ದಲ್ಲಿ ಶಿಕ್ಷಕರ ದಿನಾಚರಣೆ

ಕರ್ನಾಟಕ ಕೊಂಕಣಿ ಅಕಾಡೆಮಿ – ಬೊಂದೆಲ್‌ ಚರ್ಚ್‌ ಸಭಾಂಗಣ ದಲ್ಲಿ ಶಿಕ್ಷಕರ ದಿನಾಚರಣೆ
0Shares

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಬೊಂದೆಲ್‌ ಚರ್ಚ್‌ ಸಭಾಂಗಣದಲ್ಲಿ ಸಪ್ಟೆಂಬರ್‌ 06, 2026ರಂದು ಅಪರಾಹ್ನ 03:30 ಘಂಟೆಗೆ ಶಿಕ್ಷಕರ ದಿನಾಚರಣೆ ಹಾಗೂ ದಿವಂಗತ ಬಿಷಪ್‌ ಬೇಸಿಲ್‌ ಸಾಲ್ವಾದೊರ್‌ ಡಿಸೋಜರವರ 30ನೇ ಸಂಸ್ಮರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರು ಅ.ವಂ.ಡಾ. ಎಲೋಶಿಯಸ್‌ ಪಾವ್ಲ್‌ ಡಿಸೋಜ, ಗೌರವ ಅತಿಥಿಗಳಾಗಿ ಬೊಂದೆಲ್‌ ಚರ್ಚ್‌ನ ಧರ್ಮಗುರುಗಳಾದ ವಂ.ಸ್ವಾ. ಬೇಸಿಲ್‌ ವಾಸ್‌ ಹಾಗೂ ಕಥೊಲಿಕ್‌ ಸಭಾ ಬೊಂದೆಲ್‌ ಘಟಕದ ಅಧ್ಯಕ್ಷರಾದ ಸುಜಯ್‌ ಡಿಸಿಲ್ವರವರು ಉಪಸ್ಥಿತರಿರುವರು.

ನಿವೃತ್ತ ಶಿಕ್ಷಕಿ ಶ್ರೀಮತಿ ಜೆಸ್ಸಿ ಕುಟಿನ್ಹಾರವರು ಪ್ರಧಾನ ಭಾಷಣಕಾರರಾಗಿ ಭಾಗವಹಿಸಲಿರುವರು. ಕೊಂಕಣಿಯ ಖ್ಯಾತ ಸಾಹಿತಿ ಹಾಗೂ ಕೋಶ ರಚನಕಾರರಾದ ಸ್ಟೀವನ್‌ ಕ್ವಾಡ್ರಸ್‌ ಪೆರ‍್ಮುದೆರವರು ಸಂವಾದವನ್ನು ನಡೆಸಿಕೊಡಲಿರುವರು. ಸರ್ವರಿಗೂ ಈ ಕಾರ್ಯಕ್ರಮಕ್ಕೆ ಆದರದ ಸ್ವಾಗತವನ್ನು ಕೋರಲಾಗಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now