
ದಿನಾಂಕ: 12.07.2026 ರಂದು ಪಿರ್ಯಾದು ನಿರಂಜನ್ ಗೌಡ B S ಪಿ.ಎಸ್.ಐ (ಕಾ&ಸು), ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಕುಂದಾಪುರ ತಾಲೂಕು ಕೊರ್ಗಿ ಗ್ರಾಮದ ಮಣೂರುಮನೆ ಎಂಬಲ್ಲಿರುವ ಸರ್ಕಾರಿ ಹಾಡಿಯಲ್ಲಿ ಕೆಲವು ವ್ಯಕ್ತಿಗಳು ಸೇರಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿದ್ದಾರೆಂದು ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿದ್ದ 5 ಜನರನ್ನು ಹಿಡಿದುಕೊಂಡು ವಿಚಾರಿಸಲಾಗಿ 1) ಮಂಜುನಾಥ, 2) ಸುಕ್ಷಯ್, 3) ಶರಣ, 4) ರಮೇಶ 5) ರಜತ ಎಂಬವರನ್ನು ವಶಕ್ಕೆ ಪಡೆದು 1) ಕೋಳಿ ಅಂಕ ಜುಗಾರಿ ಆಟ ಆಡುತ್ತಿದ್ದವರ ಬಳಿಯಿದ್ದ ಒಟ್ಟು 1,600/- ರೂಪಾಯಿ, 2) ಜೀವಂತ ಕೋಳಿ ಹುಂಜ-2, 3) ಕೋಳಿ ಬಾಳು-01 4) ಕೋಳಿ ಕಾಲಿಗೆ ಬಾಳು ಕಟ್ಟಲು ಬಳಸಿದ ಹಗ್ಗ-01, 5) ಬೀಣಿ ಕೈ ಚೀಲ-02, 6) KA 20 HG 2569 ನೇ ಹೊಂಡಾ ಶೈನ್ ಮೋಟಾರು ಸೈಕಲ್ ಅಂದಾಜು ಮೌಲ್ಯ 20,000/-, 7) KA 20 ED 5131 ನೇ CBZ ಕೆಂಪು ಬಣ್ಣದ ಸ್ಕೂಟಿ ಅಂದಾಜು ಮೌಲ್ಯ 15,000/- 8) KA 20 ED 3003 ನೇ Yamaha RX ಮೋಟಾರು ಸೈಕಲ್ ಅಂದಾಜು ಮೌಲ್ಯ 20,000/- ನೇದನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಸ್ವಾದೀನಪಡಿಸಿಕೊಂಡಿದ್ದು ಆರೋಪಿತರುಗಳು ತಮ್ಮ – ತಮ್ಮ ಸ್ವಂತ ಲಾಭಕ್ಕೋಸ್ಕರ ಕೋಳಿಗಳಿಗೆ ಆಹಾರ, ನೀರು ಕೊಡದೇ ಕಾಲಿಗೆ ಕತ್ತಿಕಟ್ಟಿ ಹಿಂಸೆ ನೀಡಿ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಟ ನಡೆಸಿದ ಬಗ್ಗೆ ಆಪಾದಿತರ ವಿರುದ್ದ ಮೇಲೆ ಕಲಂ: 87, 93 ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಕಲಂ: 11(1)(D) ಪ್ರಾಣಿ ಹಿಂಸೆ ತಡೆ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now