
ಕ್ಯಾಥೋಲಿಕ್ ಚರ್ಚ್‌ನಲ್ಲಿ ಒಂದು ಪ್ರಮುಖ ಚಲಿಸಬಲ್ಲ ಹಬ್ಬವಾಗಿದೆ. ಇದನ್ನು ಅಧಿಕೃತವಾಗಿ ಪೆಂಟೆಕೋಸ್ಟ್ ನಂತರದ ಎರಡನೇ ಭಾನುವಾರದ ನಂತರದ ಶುಕ್ರವಾರ ಅಥವಾ ಈಸ್ಟರ್ ನಂತರ 68 ದಿನಗಳ ನಂತರ ಆಚರಿಸಲಾಗುತ್ತದೆ.ಈ ಹಬ್ಬವು ಜಾಗತಿಕ ಕ್ಯಾಥೋಲಿಕ್ ಸಮುದಾಯಕ್ಕೆ ಅಪಾರ ಮಹತ್ವವನ್ನು ಹೊಂದಿದೆ, ಮಾನವೀಯತೆಯ ಮೇಲಿನ ಯೇಸುವಿನ ಅಪರಿಮಿತ ದೈವಿಕ ಪ್ರೀತಿ ಮತ್ತು ಸಹಾನುಭೂತಿಯ ಪ್ರತಿನಿಧಿಯಾಗಿ ಅವರ ಭೌತಿಕ ಹೃದಯವನ್ನು ಗೌರವಿಸುತ್ತದೆ..
ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿಯಲ್ಲಿ ಇಂದು 12.06.2026ರಂದು ಈ ಹಬ್ಬದ ಅಚರಣೆಯನ್ನು ಬಲಿಪೂಜೆಯ ಮೂಲಕ ಆರಂಬಿಸಲಾಯಿತು.
ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ರೆವರೆಂಡ್ ಫಾದರ್ ಫ್ರಾನ್ಸಿಸ್ ಕ್ಸೇವಿಯರ್ ಲೂಯಿಸ್ ಹಾಗೂ ಚರ್ಚಿನ ಧರ್ಮ ಗುರುಗಳಾದ ವಂದನಿಯ ಜೋಸೆಫ್ ಮಾಚಾದೋ ಅವರು ನೆರವೇರಿಸಿದರು. ದೇವರ ವಾಕ್ಯದ ಪ್ರಸಂಗವನ್ನು ವಂದನಿಯ ಧರ್ಮ ಗುರುಗಳಾದ ರಿಕ್ಸನ್ ಮೊಂತೇರೊ ಅವರು ನೀಡಿದರು. ಕಲ್ಯಾನ್ಪುರ ವಾರಾಡೋದ ಚರ್ಚಿನ ಧರ್ಮಗುರುಗಳು ಹಾಗೂ ಅತಿಥಿ ಗುರುಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಚರ್ಚಿನ ವಾರ್ಷಿಕ ಅಂಕಣ “ಕಾಳ್ಜಾಚಿಂ ಕೀರ್ಣಾo ” ಇದರ ಉಧ್ಘಾಟನೆಯನ್ನು ರೆವೆರೆಂಡ್ ಫಾದರ್ ಪ್ರಾನ್ಸಿಸ್ ಕ್ಸೆವಿಯರ್ ಲೂವಿಸ್ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಪಾದಕಿ ಮಂಡಳಿ ಉಪಸ್ಥಿತರಿದ್ದರು.
ಹಬ್ಬದ ಪ್ರಾಯೋಜಕರಾಗಿ ತೆರೆಜಾ ಡಿಸೋಜಾ ಹಾಗೂ ಕುಟುಂಬ ಕಿಳಂಜೆ ಫರಾರಿ ಇವರು ವಹಿಸಿದ್ದರು. ಸಹಸ್ರಾರು ಭಕ್ತಾದಿಗಳು ಉಪಸ್ಥಿತರಿದ್ದು ಪೂಜೆಯ ಬಳಿಕ ಚರ್ಚ್ ಸಮುದಾಯ ಭವನದಲ್ಲಿ ಧನ್ಯವಾದದ ಕಾರ್ಯಕ್ರಮವಿತ್ತು ನೆರೆದಿದ್ದ ಭಕ್ತಾದಿಗಳಿಗೆ ಭೋಜನವನ್ನು ನೀಡಿದ್ದರು..





ನೇರ ಪ್ರಸಾರ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now