
ಉಡುಪಿ: 22ನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕೋಟೆ ಎಸ್. ರಾಮ ಭಟ್ಟ ಅವರು ಆಯ್ಕೆಯಾಗಿದ್ದಾರೆ. ಆ ಭೌಗೋಳಿಕ ನಕ್ಷೆ ಅನ್ವೇಷಿಸಿ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಹಾಗೂ ರಾಜೇಶ್ವರಿ ಎಜುಕೇಶನ್ ಫೌಂಡೇಷನ್ (ರಿ.) ಸಾಣೂರು ಇವರ ಸಹಯೋಗದಲ್ಲಿ ಕಾರ್ಕಳ ತಾಲೂಕು 22 ನೇ ಕನ್ನಡ ಸಾಹಿತ್ಯ ಸಮ್ಮೇಳನ ನವೆಂಬರ್ 7 ರಂದು ರಾಜೇಶ್ವರಿ ನ್ಯಾಷನಲ್ ಕಾಲೇಜ್ ಸಾಣೂರು ಕಾರ್ಕಳ ಇಲ್ಲಿ ನಡೆಯಲಿದೆ.
ಸಾಹಿತಿ ಖ್ಯಾತ ಯಕ್ಷಗಾನ ಅರ್ಥಧಾರಿ,ವೇಷಧಾರಿ ಯಕ್ಷಗಾನ ಸಂಘಟಕ ವಾಗಿ ಉಪನ್ಯಾಸಕ ಕೋಟೆ. ಎಸ್. ರಾಮ ಭಟ್ಟ ಕಾರ್ಕಳ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮುನ್ನಡೆಸಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now