ಕಾರ್ಕಳದಲ್ಲಿ ಅಕ್ರಮ ಕಲ್ಲು ಸಾಗಾಟದ ಅಡ್ಡೆ ಮೇಲೆ ಪೊಲೀಸ್ ದಾಳಿ: 3 ಲಾರಿ, ಹಿಟಾಚಿ ವಶಕ್ಕೆ

ಕಾರ್ಕಳದಲ್ಲಿ ಅಕ್ರಮ ಕಲ್ಲು ಸಾಗಾಟದ ಅಡ್ಡೆ ಮೇಲೆ ಪೊಲೀಸ್ ದಾಳಿ: 3 ಲಾರಿ, ಹಿಟಾಚಿ ವಶಕ್ಕೆ
0Shares

ಕಾರ್ಕಳ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಸಾಗಟದ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು,

ದಿನಾಂಕ 10/09/2026 ರಂದು ಪಿರ್ಯಾದು ದಾರರಾದ ಪ್ರಸನ್ನ ಎಂ.ಎಸ್.‌ ಪಿಎಸ್‌ಐ ಇವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ರಾತ್ರಿ 20:00 ಸಮಯಕ್ಕೆ ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಕುಂಟಾಡಿ ಮಣ್ಣು ರಸ್ತೆಯಲ್ಲಿ KL10 BJ 7942 ಟಿಪ್ಪರ್‌ ಲಾರಿಯೊಂದನ್ನು ಹಿಂಬಾಲಿಸಿ ಹೋಗಿ ಕೋರೆ ಬಳಿ ನಿಲ್ಲಿಸಿದಾಗ ಅದನ್ನು ನೋಡಲಾಗಿ ಅದು ಖಾಲಿ ಇದ್ದು ಸದ್ರಿ ಸ್ಥಳದಲ್ಲಿ KL65V0865 ಮತ್ತು KL85C2992 ನಂಬರ್‌ ನ ಲಾರಿಗಳು ಕಲ್ಲುಗಳನ್ನು ಲೋಡ್‌ ಮಾಡಿ ನಿಲ್ಲಿಸಿದ್ದು ಕೋರೆಯ ಪಕ್ಕದಲ್ಲಿ ಇಟಾಚಿ ವಾಹನ ಇದ್ದು ಅದರ ಬಳಿ ಇರುವ ವ್ಯಕ್ತಿಗಳನ್ನು ವಿಚಾರಿಸಲಾಸಲಾಗಿ ನಮೂದಿಸಿದ ಆರೋಪಿತರಾದ 1)ಹರೀಶ್‌ ಶೆಟ್ಟಿ, 2)ಸಂತೋಷ್‌ ಶೆಟ್ಟಿ ಮತ್ತು ಇತರರು ಸದ್ರಿ ಸ್ಥಳದಲ್ಲಿ ಯಾವುದೇ ಪರವಾನಿಗೆ ಪಡೆಯದೆ ಸ್ಪೋಟಕವನ್ನು ಬಳಸಿ ಕಲ್ಲು ಪುಡಿಮಾಡಿ ಸಾಗಾಟ ಮಾಡುತ್ತಿರುವ ಬಗ್ಗೆ ಕಂಡುಬಂದಿದ್ದರಿಂದ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 71/2026 ಕಲಂ. 288 ಜೊತೆಗೆ 3(5) ಬಿಎನ್‌ಎಸ್‌ ಮತ್ತು 9(ಬಿ) ಸ್ಪೋಟಕ ಕಾಯ್ದೆ 1984 ರಂತೆ ಪ್ರಕರಣದಾಗಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ 1)KL10 BJ 7942, 2)KL65V0865 ಮತ್ತು 3) KL85C2992 ನಂಬರ್‌ ನ ಲಾರಿಗಳನ್ನು ಹಾಗೂ ಒಂದು ಹಿಟಾಚಿ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.

ದಿನಾಂಕ 11-09-2026 ರಂದು ಸಂಜೆ 16:45 ಗಂಟೆಗೆ ಎಎಸ್‌ಪಿ ಕಾರ್ಕಳರವರ ಮಾಹಿತಿ ಮೇರೆಗೆ ಪಿರ್ಯಾದು ಪ್ರಸನ್ನ M.S. ಪೊಲೀಸ್ ಉಪನಿರೀಕ್ಷಕ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಇವರು ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಸಿಎಮ್‌ಎಸ್‌ ಸ್ಟೋನ್‌ ಕ್ರಶರ್‌ ಗೆ ದಾಳಿ ನಡೆಸಿದ್ದು, ಸದ್ರಿ ಸ್ಥಳದಲ್ಲಿ ಕಲ್ಲುಗಳನ್ನು ತುಂಡು ಮಾಡುವ ಒಂದು SANY ಎಂದು ಬರೆದಿರುವ ಹಳದಿ ಬಣ್ಣದ Excavator, ಒಂದು ಕೇಸರಿ ಬಣ್ಣದ ಟಾಟಾ ಇಟಾಚಿ Excavator, ಪುಡಿ ಮಾಡಿದ ಕಲ್ಲುಗಳನ್ನು ಲೋಡ್‌ ಮಾಡಲು ಮತ್ತೊಂದು Excavator ಮತ್ತು KA20C8791 ಡಂಪರ್‌ ಲಾರಿ, KA20B7282, KA19D9955ನೇ ನಂಬರಿನ ಖಾಲಿ ಟಿಪ್ಪರ್‌ಗಳು ಮತ್ತು ಸುಮಾರು 20 ಲೋಡ್‌ ನಷ್ಟು ಜಲ್ಲಿ ಹಾಗೂ ಬಂಡೆ ಕಲ್ಲುಗಳನ್ನು ಪುಡಿ ಮಾಡುವ ಮತ್ತು ಜಲ್ಲಿಗಳಾಗಿ ಪರಿವರ್ತಿಸುವ ಶಾಶ್ವತವಾಗಿ ಜೋಡಿಸಿರುವ ದೊಡ್ಡ ಯಂತ್ರಗಳಿದ್ದು ಅಲ್ಲಿ ಎಮ್‌ ಸ್ಯಾಂಡ್‌ ಲೋಡ್‌ ಮಾಡಿಕೊಂಡಿದ್ದು KA18B0611ನೇ ಲಾರಿ ಚಾಲಕ ಜಗದೀಶ್‌ ಎಂಬವರ ಬಳಿ ವಿಚಾರಿಸಲಾಗಿ ಮಾಳಾ ಗ್ರಾಮದ ರಂಜಿತ್‌ ಎಂಬವರು ಈ ಕ್ರಶರ್‌ನ್ನು ನಡೆಸುತ್ತಿದ್ದು ಅವರು ನಮ್ಮಲ್ಲಿ ಪರವಾನಿಗೆ ಇದೆ ಜಲ್ಲಿ ಮತ್ತು ಎಮ್‌ ಸ್ಯಾಂಡ್‌ನ್ನು ತೆಗೆದುಕೊಂಡು ಹೋಗಬಹುದು ಎಂದು ತಿಳಿಸಿರುತ್ತಾರೆ ಎಂದು ಹೇಳಿದ್ದು ಈ ಬಗ್ಗೆ ಠಾಣೆಯ ಕಡತದಲ್ಲಿ ಪರಿಶೀಲಿಸಿದಾಗ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸಿಎಮ್‌ಎಸ್‌ ಸ್ಟೋನ್‌ ಕ್ರಶರ್‌ನ ಪರವಾನಿಗೆಯ ಅವಧಿಯು ಮುಕ್ತಾಯವಾಗಿ ತುಂಬಾ ವರ್ಷಗಳೇ ಕಳೆದಿದೆ ಎಂದು ತಿಳಿಸಿದ್ದು ಆರೋಪಿ ಮೊಹಮ್ಮದ್‌ ಶಫಿ ಮತ್ತು ರಂಜಿತ್‌ರವರು ಸಂಘಟಿತರಾಗಿ ಪರವಾನಿಗೆ ಇಲ್ಲದೇ ಕ್ವಾರೆಯಿಂದ ಕಲ್ಲುಗಳನ್ನು ತುಂಡರಿಸಿ ಕ್ರಶರ್‌ಗೆ ಸಾಗಾಟ ಮಾಡಿ ಪುಡಿ ಮಾಡಿ ಯಾವುದೇ ಪರವಾನಿಗೆಯನ್ನು ಹೊಂದದೇ ಕಳ್ಳತನದಿಂದ ಸರ್ಕಾರದ ರಾಜಸ್ವಕ್ಕೆ ನಷ್ಟ ಉಂಟು ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಕಂಡುಬಂದಿದ್ದರಿಂದ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 73/2026 ಕಲಂ 303(2), 112(1) R/w 3(5) ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ನಾಲ್ಕು ಟಿಪ್ಪರ್ಗಳು, ಮೂರು ಹಿಟಾಚಿ, ಒಂದು ಕ್ರಷರ್ ಯೂನಿಟ್ ಹಾಗೂ 20 ಲೋಡ್ ಜೆಲ್ಲಿ ಕಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳಾದ ಪ್ರಭಾಕರ ಶೆಟ್ಟಿ ಹಾಗೂ ಇತರರು ಸಂಘಟಿತರಾಗಿ ಅಕ್ರಮವಾಗಿ ಲಾಭ ಮಾಡುವ ಉದ್ದೇಶದಿಂದ ಸರಕಾರಕ್ಕೆ ರಾಜಸ್ವವನ್ನು ಭರಿಸದೇ ಎಲ್ಲಿಂದಲೋ ಸರಕಾರಿ ಜಾಗದಿಂದ ಪಾದೆ ಕಲ್ಲನ್ನು ಕಳವು ಮಾಡಿ ಕ್ರಷರಿಗೆ ತಂದು ಕ್ರಷರ್ ಮುಖಾಂತರ ಜೆಲ್ಲಿ ಮಾಡಿ ಮಾರಾಟ ಮಾಡಲು ಕಾಪು ತಾಲೂಕು ಸಾಂತೂರು ಗ್ರಾಮದ ಕಾಂಜಾರಕಟ್ಟೆಯಿಂದ ಬೆಳ್ಮಣ್ ಕಡೆಗೆ ಹೋಗುವ ರಾಜ್ಯ ಹೆದ್ದಾರಿ 01 ರ ರಸ್ತೆಯ 500 ಮೀಟರ್ ಉತ್ತರಕ್ಕೆ ಸಾಂತೂರು ಸುಬ್ರಮಣ್ಯ ದೇವಸ್ಥಾನದ ಕಡೆಗೆ ಹೋಗುವ ಕಚ್ಚಾ ರಸ್ತೆಯ ಬಲ ಬದಿಯಲ್ಲಿರುವ ಕ್ರಷರ್‌ನಲ್ಲಿ ಇರಿಸಿದ್ದ ಬಗ್ಗೆ ಸಕ್ತಿವೇಲು ಇ, ಪೊಲೀಸ್‌ ಉಪನಿರೀಕ್ಷಕರು (ಕಾ & ಸು), ಪಡುಬಿದ್ರಿ ಪೊಲೀಸ್ ಠಾಣೆ ಇವರು ದಿನಾಂಕ 11/09/2026 ರಂದು 21:15 ಗಂಟೆಗೆ ದಾಳಿ ಮಾಡಿ ಸ್ಥಳದಲ್ಲಿ ಇದ್ದ 40 ಯುನಿಟ್ನಷ್ಟು ಜೆಲ್ಲಿ, ಎರಡು ಲಾರಿ ಹಾಗೂ ಒಂದು ಜೆಸಿಬಿ ವಾಹನವನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 103/2026 ಕಲಂ: 112, 303(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now