
ದಿನಾಂಕ:10.09.2026 ರಂದು ಸಂಜೆ 7.30 ಗಂಟೆಯ ಸುಮಾರಿಗೆ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಟಪಾಡಿ ಅಂಡರ್ ಪಾಸ್ ಬಳಿ ಎನ್ ಹೆಚ್ 66 ಮಂಗಳೂರು ಉಡುಪಿ ರಸ್ತೆಯ ಮೂಲಕ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ KL 33 B 7463 ನೊಂದಣಿಯ pick up ವಾಹನದಲ್ಲಿ ಅದರ ಚಾಲಕನು ವಾಹನದ ಪರವಾನಗಿ ನಿಯಮಗಳನ್ನು ಉಲ್ಲಂಘನೆ ಮಾಡಿ ಸುಮಾರು 8 ರಿಂದ 10 ಜನ ಮಕ್ಕಳನ್ನು ವಾಹನದ ಹಿಂಬದಿಯ ಬಾಡಿಯಲ್ಲಿ ನಿಲ್ಲಿಸಿಕೊಂಡು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ದೃಶ್ಯಾವಳಿಗಳು ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆ ಬಗ್ಗೆ ಈ ದಿನ ದಿನಾಂಕ 11.09.2026 ರಂದು ಕಾಪು ಪೋಲಿಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 109/2026 ಕಲಂ 281, 125 BNS ಮತ್ತು ಕಲಂ 66 r/w 192(A), 100 r/w 177 IMV ACT ರಂತೆ ಪ್ರಕರಣ ದಾಖಲಿಸಿಕೊಂಡು ಸದ್ರಿ ವಾಹನವನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now