ಉಡುಪಿ: 1.54 ಎಕರೆ ಸರ್ಕಾರಿ ಜಾಗದಲ್ಲಿ ಅಕ್ರಮ ಕಲ್ಲು ಸ್ಫೋಟ – ಕಾರ್ಕಳದ ಗೋವಿಂದರಾಜ್, ವಿಜಯಪುರದ ಚಂದ್ರು ಅರೆಸ್ಟ್

ಉಡುಪಿ: 1.54 ಎಕರೆ ಸರ್ಕಾರಿ ಜಾಗದಲ್ಲಿ ಅಕ್ರಮ ಕಲ್ಲು ಸ್ಫೋಟ – ಕಾರ್ಕಳದ ಗೋವಿಂದರಾಜ್, ವಿಜಯಪುರದ ಚಂದ್ರು ಅರೆಸ್ಟ್
0Shares

ದಿನಾಂಕ: 05.09.2026 ರಂದು ಬೆಳಿಗ್ಗೆ 11:00 ಗಂಟೆ ಸಮಯಕ್ಕೆ ಮಣಿಪಾಲ ಪೊಲೀಸ್ ಠಾಣಾ ಸರಹದ್ದಿನ ಉಡುಪಿ ತಾಲೂಕು ಮರ್ಣೆ ಗ್ರಾಮದ ಕುಕ್ಕಿಪಲ್ಕೆ ಸರ್ವೆ ನಂ 112/2 ವಿಸ್ತೀರ್ಣ 1.54 ಎಕರೆ ಸರಕಾರಿ ಸ್ಥಿರಾಸ್ತಿ ಜಮೀನಿನಲ್ಲಿ ಸಂಬಂದಪಟ್ಟ ಇಲಾಖೆಯಿಂದ ಯಾವುದೇ ಪರವಾನಗಿ ಪಡೆದುಕೊಳ್ಳದೇ ಸದ್ರಿ ಜಾಗದಲ್ಲಿನ ಬಂಡೆ ಕಲ್ಲನ್ನು ಸ್ಪೋಟಕ ವಸ್ತುವನ್ನು ಅನಧೀಕೃತವಾಗಿ ಉಪಯೋಗಿಸಿ ಸ್ಪೋಟ ಮಾಡಿದ್ದು ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ:150/2026 ಕಲಂ: 288 ಜೊತೆಗೆ 3(5) BNS ಹಾಗೂ ಕಲಂ 9(b) ಸ್ಪೋಟಕ ಕಾಯ್ದೆ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

ಮಣಿಪಾಲ ಠಾಣಾ ಪಿ.ಎಸ್.ಐ ತಿಮ್ಮೇಶ್ ಬಿ.ಎನ್ ರವರು ಪ್ರಕರಣದ ತನಿಖೆಯನ್ನು ಕೈಗೊಂಡು ಆರೋಪಿತರುಗಳಾದ ಕೆ ಗೋವಿಂದ ರಾಜ್ ಪ್ರಾಯ: 40 ವರ್ಷ ರಘು ನಿವಾಸ, ತೋಡಿಕರ್ಮಾರ್, ಇನ್ನಾ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಹಾಗೂ ಶೇಖಪ್ಪ ಚಲವಾದಿ @ ಚಂದ್ರು ಪ್ರಾಯ: 28 ವರ್ಷ ಗುಣಕರ್ಚಿ ಅಂಚೆ ಗುಡದಿನ್ನಿ ಗ್ರಾಮ ಮುದ್ದೇಬಿಹಾಳ ತಾಲೂಕು ಮತ್ತು ವಿಜಯಪುರ ಜಿಲ್ಲೆ ಪ್ರಸ್ಥುತ ವಾಸ: ಹಾಳೆಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ, ಹಾಳೆಕಟ್ಟೆ, ಕಲ್ಯಾ ಅಂಚೆ ಮತ್ತು ಕಾರ್ಕಳ ತಾಲೂಕು ಮತ್ತು ಉಡುಪಿ ಜಿಲ್ಲೆ ಎಂಬವರುಗಳನ್ನು ದಸ್ತಗಿರಿ ಮಾಡಿ ಆರೋಪಿತರಿಂದ ತಕ್ಷೀರಿನಲ್ಲಿ ಒಳಗೊಂಡ KA28-TA-6421ನೇ ನಂಬ್ರದ Drilling Compressor machine attached Mahindra Tractor ಹಾಗೂ KA19-ME-7707ನೇ ನಂಬ್ರದ ಗ್ರೇ ಬಣ್ಣದ ನಿಶಾನ್ ಟೆರೋನಾ ಕಾರನ್ನು ಸ್ವಾಧೀನಪಡಿಸಿಕೊಂಡು ಆರೋಪಿತರುಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now