ಕ್ರೈಸ್ಟಕಿಂಗ್ : ರಾಷ್ಟ್ರೀಯ ಸೇವಾ ಯೋಜನೆ ವನಮಹೋತ್ಸವ

ಕ್ರೈಸ್ಟಕಿಂಗ್ : ರಾಷ್ಟ್ರೀಯ ಸೇವಾ ಯೋಜನೆ ವನಮಹೋತ್ಸವ
0Shares

ಕಾರ್ಕಳ : ಕ್ರೈಸ್ಟ್‌ಕಿಂಗ್‌ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಥೆಯ
ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಕ್ರೈಸ್ಟಕಿಂಗ್ ಎಜ್ಯುಕೇಶನ್ ಟ್ರಸ್ಟ್‌ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಆವರಣದಲ್ಲಿ ಸೇವಾ ಯೋಜನೆಯ ಸದಸ್ಯರು ವಿವಿಧ ಬಗೆಯ ಗಿಡಗಳನ್ನು ನೆಟ್ಟರು.

ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ವಾಣಿಜ್ಯಶಾಸ್ತ್ರ ಉಪನ್ಯಾಸಕ ದೀಪಕ್ ಮಾತನಾಡಿ, ಪ್ರಕೃತಿಯೇ ನಮ್ಮ ಜೀವನ, ಪ್ರಕೃತಿಯ ವಿನಾಶ ಎಂದರೆ ಅದು ನಮ್ಮದೇ ವಿನಾಶ. ವಿದ್ಯಾರ್ಥಿಗಳು ಪ್ರಕೃತಿಯ ಬಗ್ಗೆ ಪ್ರೀತಿ ಕಾಳಜಿ ಬೆಳೆಸಿಕೊಂಡು ಪರಿಸರವನ್ನು ಕಾಪಾಡಬೇಕು, ಪ್ರತಿಯೊಬ್ಬರೂ ಪ್ರತೀ ವರ್ಷ ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಪೋಷಿಸಬೇಕು. ಆ ಮೂಲಕ ಈ ಭೂಮಿಯ ಹಸಿರೀಕರಣ ಮಾಡಬೇಕು ಎಂದು ಹೇಳಿದರು. ಸಂಸ್ಥೆಯ ಸಂಸ್ಕೃತ ಉಪನ್ಯಾಸಕ ಕಿರಣ್ ಪೂಜಾರಿ, ಆಂಗ್ಲಭಾಷಾ ಉಪನ್ಯಾಸಕರಾದ ಶಿಜಿ. ಸಿ.ಕೆ, ಅಲೆನ್ ರೋಷನ್ ಡಿಮೆಲ್ಲೊ, ಸಂಖ್ಯಾಶಾಸ್ತ್ರ ಉಪನ್ಯಾಸಕಿ ಮಧುಶ್ರೀ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಘಟಿಸಲಾಗಿತ್ತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now