
ಆರೋಪಿತೆ ಸುಗಂಧಿ ರವರು ಪದ್ಮಕಮಲ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದಲ್ಲಿ ಮುಖ್ಯ ಪುಸ್ತಕ ಬರಹಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಮಯ 2023 ನೇ ಇಸವಿಯಿಂದ 2025 ನೇ ಇಸವಿಯವರೆಗೆ ಸಾಲದ ಮರು ಪಾವತಿ ಹಣವನ್ನು ಮರು ಪಾವತಿ ರಿಜಿಸ್ಟರ್ ನಲ್ಲಿ ನಮೂದಿಸಿ ಸದ್ರಿ ಒಕ್ಕೂಟದ ಬ್ಯಾಂಕ್ ಖಾತೆಗೆ ಜಮೆ ಮಾಡದೇ, ವಿವಿಧ ಸಂಘಗಳ ಹೆಸರಿನಲ್ಲಿ ಒಕ್ಕೂಟದ ಚೆಕ್ ಗೆ ಅಧ್ಯಕ್ಷರು ಮತ್ತು ಕಾರ್ಯದರ್ಶಿ ರವರ ನಕಲಿ ಸಹಿ ಮಾಡಿ ಬ್ಯಾಂಕ್ ನಿಂದ ಹಣವನ್ನು ದುರ್ಬಳಕೆ ಮಾಡಿ, ಲೆಕ್ಕಪರಿಶೋಧನೆಗೆ ಬೇರೆ ಸದಸ್ಯರಿಗೆ ತೋರಿಸಲು ಬೇರೆ ಸಾಲದ ಖಾತೆ ಪುಸ್ತಕಗಳನ್ನು ನಿರ್ವಹಣೆ ಮಾಡಿ ಒಕ್ಕೂಟದ ಕಾರ್ಯಕಾರಿ ಸಮಿತಿಗೂ ಅನುಮಾನ ಬಾರದ ರೀತಿಯಲ್ಲಿ ಬೇರೆ ಬೇರೆ ಪಸ್ತಕ ನಿರ್ವಹಣೆ ಮಾಡಿ ಪದ್ಮಕಮಲ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟಕ್ಕೆ ನಂಬಿಕೆ ದ್ರೋಹ ಮಾಡಿ ಒಟ್ಟು 23,00,000/- ರೂಪಾಯಿ ಹಣವನ್ನು ಆರೋಪಿತರು ತಮ್ಮ ಸ್ವಂತಕ್ಕೆ ಬಳಸಿಕೊಂಡು ವಂಚನೆ ಮಾಡಿರುತ್ತಾರೆ.
ಸದ್ರಿಯವರ ವಿರುದ್ದ ಹಿರಿಯಡಕ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 39/2026 ಕಲಂ: 316(4), 318,336(3),340(2) BNS ರಂತೆ ಪ್ರಕರಣ ದಾಖಲಾಗಿ ತನಿಖೆಯನ್ನು ಕೈಗೊಳ್ಳಲಾಗಿರುತ್ತದೆ.
ತನಿಖೆಯನ್ನು ಬೆಳ್ಳಿಯಪ್ಪ ಕೆ.ಯು, ಪೊಲೀಸ್ ಉಪಾಧೀಕ್ಷಕರು ಉಡುಪಿ ಉಪ ವಿಭಾಗ ರವರ ನಿರ್ದೆಶನದಂತೆ, ಗೋಪೀಕೃಷ್ಣ ರವರ ಮಾರ್ಗದರ್ಶನದಲ್ಲಿ ಪುನೀತ್ ಕುಮಾರ್ ಬಿ.ಇ ಪಿ.ಎಸ್.ಐ (ಕಾ&ಸು) ಮತ್ತು ವಿಠ್ಠಲ ಮಲವಡಕರ-ಪಿಎಸ್ ಐ(ತನಿಖೆ) ಹಿರಿಯಡಕ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಕಾರ್ತಿಕ್ ಪಿಸಿ ರವರು ಆರೋಪಿತುಗಳಾದ 1) ಸುಗಂಧಿ 2) ಸಂತೋಷ ರವರನ್ನು ದಿನಾಂಕ 06/07/2026 ರಂದು ವಶಕ್ಕೆ ಪಡೆದು ಠಾಣೆಯಲ್ಲಿ ದಸ್ತಗಿರಿ ಮಾಡಿ ವಿಚಾರಣೆ ಕೈಗೊಂಡಿರುತ್ತಾರೆ.
ಮೇಲ್ನೋಟಕ್ಕೆ ಆರೋಪಿತೆ ಸುಗಂಧಿ ಹಾಗೂ ಆಕೆಯ ಗಂಡ ಸಂತೋಷ ರವರು ಸೇರಿಕೊಂಡು ಸಂಘದಲ್ಲಿ ವಿವಿಧ ಸದಸ್ಯರ ಹೆಸರಲ್ಲಿ ನಕಲಿ ಸಹಿ ಹಾಗೂ ದಾಖಲೆ ಸೃಷ್ಟಿಸಿರುವುದು ಕಂಡು ಬಂದಿದ್ದು, ತನಿಖೆಯನ್ನು ಮುಂದುವರಸಿರುತ್ತಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now