ಕಾರ್ಕಳ : ಯುವಕ ಮಂಡಲ ನೇತೃತ್ವದಲ್ಲಿ ಶ್ರಮದಾನ ಕಾರ್ಯಕ್ರಮ

ಕಾರ್ಕಳ : ಯುವಕ ಮಂಡಲ ನೇತೃತ್ವದಲ್ಲಿ ಶ್ರಮದಾನ ಕಾರ್ಯಕ್ರಮ
0Shares

ಕಾರ್ಕಳ : ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಇದರ ನೇತೃತ್ವದಲ್ಲಿ ಹಾಗೂ ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪನಿ ನಿಯಮಿತ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಾರ್ಯ ಮತ್ತು ಪಾಲನ ಉಪ ವಿಭಾಗ ನಿಟ್ಟೆ ಇವರ ಸಹಕಾರದಲ್ಲಿ ಸಾಣೂರು ರಿಕ್ಷಾ ನಿಲ್ದಾಣದಿಂದ ಗಾಡಿದಕೊಟ್ಯದ ವರೆಗೆ ರಸ್ತೆ ಬದಿಯ ವಿದ್ಯುತ್ ಕಂಬ ಹಾಗೂ ತಂತಿಗಳಿಗೆ ತಾಗಿಕೊಂಡ ಮರ-ಗಿಡ-ಬಳ್ಳಿಗಳನ್ನು ಕಡಿದು ತೆರವುಗೊಳಿಸಿ ವಿದ್ಯುತ್ ಪ್ರಸರಣಕ್ಕೆ ಅನುವು ಮಾಡಿಕೊಡುವ ಶ್ರಮದಾನ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಂಡಲದ ಅಧ್ಯಕ್ಷರಾದ ಗುರುಪ್ರಸಾದ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಜಗದೀಶ್ ಕುಮಾರ್, ಕಾರ್ಯದರ್ಶಿ ರಾಜೇಶ್, ಉಪಾಧ್ಯಕ್ಷರಾದ ಮೋಹನ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಮುರಳಿಧರ್ ಸುವರ್ಣ, ಕ್ರೀಡಾಕಾರ್ಯದರ್ಶಿ ವಿದ್ಯಾನಂದ, ಜೊತೆ ಕಾರ್ಯದರ್ಶಿ ಪ್ರಶಾಂತ್ ಆಚಾರ್ಯ ಹಾಗೂ ಪ್ರಮಿತ್ ಸುವರ್ಣ ಸದಸ್ಯರಾದ ಪ್ರಕಾಶ್ ರಾವ್ ರಮೇಶ್, ಸುದರ್ಶನ್ ನಾಯ್ಕ್, ಪ್ರಭಾಕರ್ ಶೆಟ್ಟಿ ದಿನೇಶ್ ಮಡಿವಾಳ್, ಜಯನ್ ಶೆಟ್ಟಿ, ಸೀತಾರಾಮ್ ಜಯಶೆಟ್ಟಿಗಾರ್, ವಿಕ್ಕಿ ಶೆಟ್ಟಿ, ಪ್ರಸನ್ನ ಆಚಾರ್ಯ, ಜೀವನ್ ರಾವ್, ಹರೀಶ್ ರಾವ್, ಸುನಿಲ್ ಕುಲಾಲ್, ಮಾ |ಆರ್ಯನ್, ಮಾ |ಅಲೋಫ್ ಭಾಗವಹಿಸಿದ್ದರು. ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಸೋಮಯ್ಯ ಸುವರ್ಣ ಶಾಖಾಧಿಕಾರಿಗಳು ಮೆಸ್ಕಾಂ ಸಾಣೂರು ಶಾಖೆ ಪವರ್ ಮ್ಯಾನ್ ಗಳು ಕೈಜೋಡಿಸಿದ್ದರು.

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now