. ಕಾಪು ಪೊಲೀಸರ ಭರ್ಜರಿ ಬೇಟೆ: ಹೆಜಮಾಡಿಯಲ್ಲಿ 14.35 ಲಕ್ಷ ಮೌಲ್ಯದ ಅಕ್ರಮ ಮದ್ಯ, 2 ವಾಹನ ವಶ*

. ಕಾಪು ಪೊಲೀಸರ ಭರ್ಜರಿ ಬೇಟೆ: ಹೆಜಮಾಡಿಯಲ್ಲಿ 14.35 ಲಕ್ಷ ಮೌಲ್ಯದ ಅಕ್ರಮ ಮದ್ಯ, 2 ವಾಹನ ವಶ*
0Shares

ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಜ್ಮತ್ ಆಲಿ ಇವರಿಗೆ ಬಂದ ಖಚಿತ ಮಾಹಿತಿ ಆದಾರದ ಮೇರೆಗೆ ದಿನಾಂಕ 11.11.2026 ರಂದು ಪಡುಬಿದ್ರೆ ಪೊಲೀಸ್ ಠಾಣಾ ಸರದ್ದಿನ ಕಾಪು ತಾಲೂಕು ಹೆಜಮಾಡಿ ಗ್ರಾಮದ ಹೆಜಮಾಡಿ ಟೋಲ್ ಬಳಿ ರಾ.ಹೆ 66 ರಸ್ತೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಗೋವಾ ರಾಜ್ಯದಿಂದ ಮಂಗಳೂರಿಗೆ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯದ ಬಾಟಲಿಗಳನ್ನು ಸಾಗಾಟ ಮಾಡುತ್ತಿದ್ದ ವಾಹನ ಹಾಗೂ ಸದ್ರಿ ವಾಹನಕ್ಕೆ ಎಸ್ಕಾರ್ಟ್ ಮಾಡುತ್ತಿರುವ ವಾಹನವನ್ನು ಹಾಗೂ ಆರೋಪಿ ಗಳಾದ 1. ವಿನಯ್ (47) ಕಿನ್ನಾರ ಗ್ರಾಮ,ಕಾರವಾರ

  1. ಗಜಾನನ ಮಹಾಬಲೇಶ್ವರ ನಾಯ್ಕ್ (45) ಸುಲ್ಕೇರಿ ರಸ್ತೆ, ನಂದಗಡ, ಕಾರವಾರ ತಾಲೂಕು.
  2. ಸುಜಿತ್ ತಾಳೆಕೆರೆ(25), ಅಮದಹಳ್ಳಿ ಅಂಚೆ ಕಾರವಾರ
  3. ಲಾರೆನ್ಸ್ ಥಾಮಸ್ ಮೆಂಡೋನ್ಸ್(49), ಶಿರ್ವಾಡ ಗ್ರಾಮ ಕಾರವಾರ ವಶಕ್ಕೆ ಪಡೆದು, ಆರೋಪಿಗಳ ವಿರುದ್ದ ಪಡುಬಿದ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 138/26 ಕಲಂ. 32,34,38a, KE Act. ಮತ್ತು 336(4) BNSರಂತೆ ಪ್ರಕರಣ ದಾಖಲಿರುತ್ತಾರೆ.

ದಸ್ತಗಿರಿ ಮಾಡಲಾದ ಆರೋಪಿಗಳ ಪೈಕಿ ವಿನಯ್ ಈತನ ಮೇಲೆ ಈಗಾಗಲೇ ಕಾರವಾರ ಜಿಲ್ಲೆಯ ಚಿತ್ತಾಕುಲ ಪೊಲೀಸ್ ಠಾಣೆ, ಕಾರವಾರ ಗ್ರಾಮಾಂತರ ಹಾಗೂ ಅಬಕಾರಿ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸ್ವಾಧೀನಪಡಿಸಿಕೊಂಡ ಸೊತ್ತುಗಳ ವಿವರ:-
1) 2583 ಲೀಟರ್ ಮದ್ಯದ ಬಾಕ್ಸ್ ಮೌಲ್ಯ ಸುಮಾರು 14,35,000/ ರೂ
2) ಮಹೀಂದ್ರಾ ಪಿಕ್ ಇನ್ಸುಲೇಟರ್ ವಾಹನ ಅಂದಾಜು ಮೌಲ್ಯ 5,00,000/-
3) ಮಾರುತಿ ಸ್ವಿಪ್ಟ್ ಕಾರು ಅಂದಾಜು ಮೌಲ್ಯ ರೂ 3,00,000/-, ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ ರೂ: 22,35,000/- ಆಗಬಹುದು.

ಈ ಕಾರ್ಯಾಚರಣೆ ಯನ್ನು ಇಶಿತಾ ಗುಪ್ತಾ ಐಪಿಎಸ್ ಸಹಾಯಕ ಪೊಲೀಸ್ ಅಧೀಕ್ಷಕರು ಕಾರ್ಕಳ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಅಜ್ಮತ್ ಆಲಿ ಜಿ. ಸಿಪಿಐ ಕಾಪುರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಸಕ್ತಿವೇಲು.ಈ ಪಿ.ಎಸ್.ಐ(ಕಾ.ಸು) ಪಡುಬಿದ್ರೆ ,ಅನಿಲ್‌ ಕುಮಾರ್ ಟಿ ನಾಯ್ಕ್ ಪಿ.ಎಸ್.ಐ (ತನಿಖೆ) ಪಡುಬಿದ್ರಿ ಠಾಣೆ , ಅಪರಾಧ ಪತ್ತೆ ತಂಡದ ರಾಜೇಶ್ ಎ.ಎಸ್.ಐ. ಗಿರೀಶ್ ಎಎಸ್.ಐ, ಹೆಡ್ಕಾನ್ಸ್ಟೇಬಲ್ಗಳಾದ ಕೃಷ್ಣಪ್ರಸಾದ್. ಜೀವನ್ ಕಾಪು ವೃತ್ತ ಕಛೇರಿ , ಸತೀಶ್ ಬೆಳ್ಳೆ ಅಜೆಕಾರು ಠಾಣೆ , ಶಿವಾನಂದ ಪೂಜಾರಿ ಸೈಬರ್ ಅಪರಾಧ ಠಾಣೆ , ಪಡುಬಿದ್ರೆ ಠಾಣೆಯ ಅಶ್ವಿನ್ ಕುಮಾರ್, ಕಾನ್ಸ್ಟೇಬಲ್ಗಳಾದ ಶರಣ್, ಯಾಸಿನ್ ಖಾಜಿ, ರೆಹಮಾನ್, ರುಕ್ಮಿಣಿ ಹಾಗೂ ಸಿಡಿಆರ್ ವಿಭಾಗದ ದಿನೇಶ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now