
ಕಲ್ಯಾಣ್ಪುರ : ಇಲ್ಲಿಯ ಪ್ರಸಿದ್ಧ ವಾಟರ್ ಪಾಯಿಂಟ್ ಫೆರ್ನಾಂಡಿಸ್ ನಿಸರ್ಗ ಪಾಯಿಂಟ್ ವತಿಯಿಂದ ‘ಯೇ ರೇ ಯೇ ರೇ ಪಾವ್ಸಾ’ (ಸಾವೊ ಜಾವೊ) ಮಾನ್ಸೂನ್ ಸಂಭ್ರಮವನ್ನು ಜೂನ್ 28 ಆದಿತ್ಯವಾರ ಬೆಳಿಗ್ಗೆ 10 ಗಂಟೆಯಿಂದ ಹಮ್ಮಿಕೊಳ್ಳಲಾಗಿದೆ.
ಸಾವಿರಾರು ಯುವ ಜನರಿಗೆ ಉದ್ಯೋಗದ ಅವಕಾಶವನ್ನು ಬೇರೆಬೇರೆ ಕಂಪನಿಗಳಲ್ಲಿ ನೀಡಿರುವಂತಹ ಫೆರ್ನಾಂಡಿಸ್ ಗ್ರೂಪ್ ನ ಅಂಗ ಸಂಸ್ಥೆಯಾಗಿರುವ ಫೆರ್ನಾoಡೀಸ್ ನಿಸರ್ಗ ಪಾಯಿಂಟ್ ಕಲ್ಯಾಣ್ಪುರ ಮೂಡುತೋನ್ಸೆಯ ನದಿ ತೀರದಲ್ಲಿ ಅದ್ಭುತ ಪ್ರಕೃತಿ ಮತ್ತು ಸಾಹಸಧಾಮವಾಗಿದೆ. ಸಂಘ ಸಂಸ್ಥೆಗಳು, ಕುಟುಂಬಸ್ಥರು ಮತ್ತು ಯುವಜನರು ಸಂಭ್ರಮಿಸುವ ತಾಣ ಇದಾಗಿದ್ದು, ಕಳೆದ ಒಂದು ವರ್ಷಗಳಲ್ಲಿ ಸಾವಿರಾರು ಮಂದಿ ಇಲ್ಲಿ ಬಂದು ಸಂಭ್ರಮಿಸಿದ್ದಾರೆ.
ಹೊಸ ಸಂಭ್ರಮದ ಪ್ರಯತ್ನಕ್ಕೆ ಫರ್ನಾಡಿಸಿದ್ರೂ ತೊಡಗಿಕೊಂಡಿದ್ದು, ಈಗಾಗಲೇ ಬಹಳಷ್ಟು ಮಂದಿ ಹೆಸರು ನೋಂದಾಯಿಸಿದ್ದಾರೆ. ಈ ಸಂದರ್ಭದಲ್ಲಿ ಲೈವ್ ಡಿಜೆ ಮತ್ತು ಮ್ಯೂಸಿಕ್, ಪ್ರತಿಷ್ಠಿತ ಬ್ರಾಸ್ಬಂಡ್, ಸ್ವಿಮ್ಮಿಂಗ್ ಪೂಲ್, ಮಳೆ ಡ್ಯಾನ್ಸ್, ವಿವಿಧ ಲಕ್ಕಿ ಸ್ಪರ್ಧೆಗಳು ಹಾಗೂ ವಿಶೇಷವಾಗಿ ರುಚಿಕರವಾದ ವಿವಿಧ ಬಗೆಯ ಗೋವನ್ ಖಾದ್ಯಗಳು ವಿಶೇಷ ಆಕರ್ಷಣೆಯಾಗಲಿದೆ.
ಸಾವೊ ಜಾವೊ (São João) ಎನ್ನುವುದು ಭಾರತದ ಗೋವಾದಲ್ಲಿ (ಮತ್ತು ಕರಾವಳಿ ಪ್ರದೇಶಗಳಲ್ಲಿ) ವಾರ್ಷಿಕವಾಗಿ ಜೂನ್ 24 ರಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವ ಕ್ರಿಶ್ಚಿಯನ್ ಹಬ್ಬವಾಗಿದ್ದೂ, ಸಂತ ಜೋನ್ ಬ್ಯಾಪ್ಟಿಸ್ಟ್ (St. John the Baptist) ಅವರ ಜನ್ಮದಿನದ ಸಂಭ್ರಮವಾಗಿದೆ. ಬೈಬಲ್ ಕಥೆಯ ಪ್ರಕಾರ, ಮೇರಿ (ಯೇಸುವಿನ ತಾಯಿ) ಗರ್ಭಿಣಿಯಾಗಿದ್ದಾಗ ತನ್ನ ಸೋದರ ಸಂಬಂಧಿ ಎಲಿಜಬೆತ್ ಅವರನ್ನು ಭೇಟಿಯಾಗಲು ಹೋಗುತ್ತಾಳೆ. ಆಗ ಎಲಿಜಬೆತ್ ಅವರ ಗರ್ಭದಲ್ಲಿದ್ದ ಜಾನ್ (ಮುಂದೆ ಜಾನ್ ಬ್ಯಾಪ್ಟಿಸ್ಟ್ ಆಗುವವರು) ಸಂತೋಷದಿಂದ ನೆಗೆಯುತ್ತಾರೆ. ಈ ಸಂತೋಷದ ಸಂಕೇತವಾಗಿ ಜನರು ಬಾವಿಗಳು, ಕೆರೆಗಳು ಮತ್ತು ನದಿಗಳಿಗೆ ಹಾರಿ ಸಂಭ್ರಮಿಸುತ್ತಾರೆ. ಈ ಹಬ್ಬವು ಸಾಮಾನ್ಯವಾಗಿ ಮಾನ್ಸೂನ್ (ಮಳೆಗಾಲ) ಆರಂಭದ ಸಮಯದಲ್ಲಿ ಬರುತ್ತದೆ. ಇದು ಪ್ರಕೃತಿಯ ಹಸಿರು, ಸಮೃದ್ಧಿ ಮತ್ತು ಮಳೆಯ ಆಗಮನಕ್ಕೆ ಕೃತಜ್ಞತೆಯನ್ನು ಸಲ್ಲಿಸುವ ಹಬ್ಬವಾಗಿದೆ. ಯುವಕರು ಹೂವುಗಳು ಮತ್ತು ಹಣ್ಣುಗಳಿಂದ ಮಾಡಿದ ಕಿರೀಟಗಳನ್ನು (ಕೊಪೆಲ್ – Kopel) ಧರಿಸುತ್ತಾರೆ. ದೋಣಿ ಉತ್ಸವಗಳನ್ನು ನಡೆಸಿ, ಸಾಂಪ್ರದಾಯಿಕ ಕೊಂಕಣಿ ಜಾನಪದ ಹಾಡುಗಳನ್ನು ಹಾಡುತ್ತಾರೆ. ಎಲ್ಲಕ್ಕಿಂತ ರೋಚಕವಾಗಿ, ಜನರು ಸಂತೋಷದಿಂದ ಬಾವಿಗಳಿಗೆ ಜಿಗಿಯುತ್ತಾರೆ. ಸಾವೊ ಜಾವೊ ಹಬ್ಬವು ಧಾರ್ಮಿಕ ನಂಬಿಕೆ, ಸಾಂಸ್ಕೃತಿಕ ಪರಂಪರೆ ಮತ್ತು ಪ್ರಕೃತಿಯೊಂದಿಗಿನ ಒಡನಾಟದ ಸುಂದರ ಸಂಗಮವಾಗಿದೆ.
ನಮ್ಮ ವರದಿಗಾರರು
ಸ್ಟೀವನ್ ಕುಲಾಸೊ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now