
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತ್, ಉಡುಪಿ ತಾಲೂಕಿನ ಹಿರಿಯಡ್ಕ ಹಾಗೂ ಪೆರ್ಡೂರು ವಲಯದ ಸಂಬಂಧಪಟ್ಟ ಎಲ್ಲಾ ಭಜನಾ ಮಂಡಳಿಗಳ ಸಮಾಲೋಚನಾ ಸಭೆಯನ್ನು ದಿನಾಂಕ . 22/07/2026ನೇ ಬುಧವಾರ ಸಾಯಂಕಾಲ 4. 30 ಗಂಟೆಗೆ ಸರಿಯಾಗಿ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ, ಹಿರಿಯಡ್ಕದಲ್ಲಿ ನಡೆಸಲಾಯಿತು.
ಈ ಸಭೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತ್, ಉಡುಪಿ ತಾಲೂಕು ಅಧ್ಯಕ್ಷರಾದ ಶ್ರೀ ವಿಜಯ ಶೆಟ್ಟಿ ಕೊಂಡಾಡಿಯವರು ಆಗಸ್ಟ್ ತಿಂಗಳ ದಿನಾಂಕ 2ರಂದು ಅಂಬಲಪಾಡಿಯ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದಲ್ಲಿ ನಡೆಯುವ ತಾಲೂಕು ಭಜನೋತ್ಸವ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ 28ನೇ ಭಜನಾ ಕಮ್ಮಟ, ತಾಲೂಕಿನ ಸಾಧಕ ಪ್ರಶಸ್ತಿ ಹಾಗೂ ಸಮಾರೋಪದಂದು ನಡೆಯುವ ವಿಶೇಷ ಭಜನೋತ್ಸವದ ಸಂಪೂರ್ಣ ಮಾಹಿತಿಯನ್ನು ನೀಡಿದರು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ವಲಯದ ಹೆಚ್ಚಿನ ಭಜನಾ ಮಂಡಳಿಯವರು ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು. ಭಜನಾ ಮಂಡಳಿಯವರಿಂದ ಅಮೂಲ್ಯ ಸಲಹೆ ಸೂಚನೆಗಳನ್ನು ಪಡೆಯಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಭಜನಾ ಕಮ್ಮಟದಲ್ಲಿ ಭಾಗವಹಿಸಿದ್ದ ಚೇತನ್ ತಮ್ಮ ಉತ್ತಮ ಅನಿಸಿಕೆಗಳನ್ನು ಹಂಚಿಕೊಂಡರು. ಹಿರಿಯಡ್ಕ ವಲಯದ ಮೇಲ್ವಿಚಾರಕರಾದ ಶ್ರೀ ರಾಜ್ ರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಹಿರಿಯಡ್ಕ ಹಾಗೂ ಪೆರ್ಡೂರು ವಲಯದ ಹೆಚ್ಚಿನ ಭಜನಾ ಮಂಡಳಿಯ ಪದಾಧಿಕಾರಿಗಳು ಹಾಜರಿದ್ದರು.
ಸಭೆಯ ಕಾರ್ಯಸೂಚಿ :-
1) ಆಗಸ್ಟ್ 2 ರಂದು ಅಂಬಲಪಾಡಿ ದೇವಸ್ಥಾನದ ತಾಲೂಕು ಕಾರ್ಯಕ್ರಮದ ಬಗ್ಗೆ ಮಾಹಿತಿ
2) ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆಪ್ಟಂಬರಿನಲ್ಲಿ ನಡೆಯುವ ಭಜನಾ ಕಮ್ಮಟ, ತಾಲೂಕಿನ ಒಂದು ಮಂಡಳಿಯವರಿಗೆ ನೀಡುವ ಸಾಧಕ ಪ್ರಶಸ್ತಿ ಹಾಗೂ ಸಮಾರೋಪದಂದು ನಡೆಯುವ ವಿಶೇಷ ಭಜನೋತ್ಸವದ ಬಗ್ಗೆ ಮಾಹಿತಿ
3) ಭಜನಾ ಮಂಡಳಿಗಳಿಗೆ ಶ್ರೀ ಕ್ಷೇತ್ರದಿಂದ ದೊರಕುವ ಸೌಲಭ್ಯಗಳ ಮಾಹಿತಿ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now