ಹೆಬ್ರಿಯಲ್ಲಿ ತಾಲೂಕು ಮಟ್ಟದ “ಬೇಡ ಬ್ರೋ” ಮಾದಕ ವ್ಯಸನ ವಿರೋಧಿ ಜಾಗೃತಿ ಕಾರ್ಯಾಗಾರ

ಹೆಬ್ರಿಯಲ್ಲಿ ತಾಲೂಕು ಮಟ್ಟದ “ಬೇಡ ಬ್ರೋ” ಮಾದಕ ವ್ಯಸನ ವಿರೋಧಿ ಜಾಗೃತಿ ಕಾರ್ಯಾಗಾರ
0Shares

ದಿನಾಂಕ 27/07/2026 ರಂದು ಹೆಬ್ರಿ ಪೊಲೀಸ್‌ ಠಾಣಾ ಸರಹದ್ದಿನ ಶ್ರೀ ಅನಂತ ಪದ್ಮನಾಭ ಸಭಾಭವನದಲ್ಲಿ ತಾಲೂಕು ಮಟ್ಟದ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವ್ಯಸನ ವಿರೋಧ ಮತ್ತು ಜಾಗೃತ ಸಮಿತಿಗಳ ಕಾರ್ಯಾಗಾರ “ಬೇಡ ಬ್ರೋ” ಕಾರ್ಯಕ್ರಮವನ್ನು ಆಯೋಜಿಸಿದ್ದು ಸದ್ರಿ ಕಾಯಕ್ರಮದಲ್ಲಿ ಶ್ರೀ ವಿ. ಸುನೀಲ್‌ ಕುಮಾರ್‌ ಶಾಸಕರು ಕಾರ್ಕಳ ವಿಧಾನ ಸಭಾ ಕ್ಷೇತ್ರ, ಶ್ರೀ ರಾಕೇಶ್‌ ಪ್ರಾನ್ಸಿಸ್‌ ಬ್ರಿಟ್ಟೋ ತಹಶೀಲ್ದಾರರು ಮತ್ತು ತಾಲೂಕು ದಂಡಾಧಿಕಾರಿಯವರು ಹೆಬ್ರಿ ತಾಲೂಕು, ಶ್ರೀ ಸುಧಾಕರ ನಾಯ್ಕ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು ಉಡುಪಿ ಜಿಲ್ಲೆ, ಶ್ರೀ ವಿಜಯಪ್ರಸಾದ್‌ ಎಸ್‌. ಪೊಲೀಸ್‌ ಉಪಾಧೀಕ್ಷಕರು ಕಾರ್ಕಳ ಉಪವಿಭಾಗ, ಶ್ರೀ ಸಂತೋಷ್‌ ಕುಮಾರ್‌ ಬೈಲೂರು ಆಡಳಿತ ವೈದ್ಯಾಧಿಕಾರಿ ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿ, ಶ್ರೀಮತಿ ಗಿರಿಜಮ್ಮ ಎಸ್‌ . ಆರ್‌ ಕ್ಷೇತ್ರ ಶಿಕ್ಷಣಾಧಿಕಾರಿಯವರು ಕಾರ್ಕಳ, ಶ್ರೀ ಪ್ರಶಾಂತ್‌ ರಾವ್ ಎಂ.ವಿ ಕಾರ್ಯ ನಿರ್ವಹಣಾಧಿಕಾರಿಯವರು ತಾಲೂಕು ಪಂಚಾಯತ್‌ ಹೆಬ್ರಿ, ಶ್ರೀ ಡಾ. ವಿದ್ಯಾಧರ ಹೆಗ್ಡೆ ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ, ಶ್ರೀ ಸುಧಾಕರ ಕೆ ಜಿ ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮುನಿಯಾಲು ರವರು ಭಾಗವಹಿಸಿದ್ದು ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಡಾ. ರವಿಪ್ರಸಾದ್‌ ಹೆಗ್ಡೆ ಅಸೋಸಿಯೇಟೆಡ್‌ ಪ್ರೊಫೆಸರ್‌ ಡಿಪಾರ್ಟ್‌ಮೆಂಟ್‌ ಆಫ್‌ ಪಿಜಿ ಸ್ಟಡೀಸ್‌ ಇನ್‌ ಮನೋವಿಜ್ಞಾನ, ಆಳ್ವಾಸ್‌ ಮೂಡಬಿದಿರೆ ರವರು ವಿದ್ಯಾರ್ಥಿಗಳಿಗೆ ಮಾದಕ ವ್ಯಸದಿಂದಾಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿರುತ್ತಾರೆ, ಹಾಗೂ ಎಸ್‌ ಆರ್‌ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಮತ್ತು ಅಮೃತ ಭಾರತಿ ಶಾಲೆ ವಿದ್ಯಾರ್ಥಿಗಳಿಂದ ಮಾದಕ ವ್ಯಸನ ಜಾಗೃತಿ ಕುರಿತು ಕಿರು ಪ್ರಹಸನ ಮಾಡಿರುತ್ತಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now