ಹಾವಂಜೆ: ವೈಭವದ 8ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ — ಸತೀಶ್ ಪೂಜಾರಿ ಕೀಳಿಂಜೆ ಅವರಿಗೆ ‘ಸೇವಾ ರತ್ನ ಪ್ರಶಸ್ತಿ 2026’ ಪ್ರಧಾನ

ಹಾವಂಜೆ: ವೈಭವದ 8ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ — ಸತೀಶ್ ಪೂಜಾರಿ ಕೀಳಿಂಜೆ ಅವರಿಗೆ ‘ಸೇವಾ ರತ್ನ ಪ್ರಶಸ್ತಿ 2026’ ಪ್ರಧಾನ
0Shares

ಶ್ರೀ ದುರ್ಗಾ ಸಾರ್ವಜನಿಕ ಶಾರದೋತ್ಸವ ಸಮಿತಿ, ಹಾವಂಜೆ ಇವರ ಆಶ್ರಯದಲ್ಲಿ. ದಿನಾಂಕ 06/09/2026.

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 8ನೇ ವರ್ಷದ ಮುದ್ದುಕೃಷ್ಣ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆ ಮತ್ತು ಹಗ್ಗ ಜಗ್ಗಾಟ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು

ಹಾವಂಜೆ: ಶ್ರೀ ದುರ್ಗಾ ಸಾರ್ವಜನಿಕ ಶಾರದೋತ್ಸವ ಸಮಿತಿ, ಹಾವಂಜೆ ಇವರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 8ನೇ ವರ್ಷದ ಮುದ್ದು ಕೃಷ್ಣ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆ ಮತ್ತು ತಂಡಗಳ ಹಗ್ಗ ಜಗ್ಗಾಟ ಕಾರ್ಯಕ್ರಮ ಅತ್ಯಂತ ಸಂಭ್ರಮದಿಂದ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಹರೀಶ್ ಎಸ್. ಪೂಜಾರಿ, ಒಳಮಡಿ.ಉದ್ಯಮಿಗಳು, ಉಡುಪಿ ಇವರು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಅಶೋಕ್ ಕುಮಾರ್ ಶೆಟ್ಟಿ, ಮೈರ್ಮಾಡಿ ಕರ್ಜೆ, ಅಧ್ಯಕ್ಷರು TAPCMS ಉಡುಪಿ, ಶ್ರೀ ಪ್ರಮೋದ್ ಶೆಟ್ಟಿ, ಅಧ್ಯಕ್ಷರು ಪ್ರಕೃತಿ ಲಯನ್ಸ್ ಕ್ಲಬ್ ಉಡುಪಿ, ಶ್ರೀ ರೋಷನ್ ಬಂಗೇರ, ಉದ್ಯಮಿಗಳು, ಡಾ. ಸಂದೇಶ್ ಕುಮಾರ್ ಶೆಟ್ಟಿ, ವಿಭಾಗ ಮುಖ್ಯಸ್ಥರು, ಮಂಜುನಾಥೇಶ್ವರ ಆಯುರ್ವೇದ ಕಾಲೇಜು,ಉದ್ಯಾವರ, ಶ್ರೀ ನಾರಾಯಣ ಶೆಟ್ಟಿ, ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ, ಧೂಮಾವತಿ ದೇವಸ್ಥಾನ, ಕಂಬಳಬೆಟ್ಟು ಇವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ಸಾಮಾಜಿಕ ಚಟುವಟಿಕೆಯಲ್ಲಿ ಹಲವಾರು 20 ವರ್ಷಗಳಿಂದ ಗುರುತಿಸಿಕೊಂಡ, ಉಡುಪಿ ಜಿಲ್ಲೆಯಲ್ಲಿ ಧ್ವನಿ ಇಲ್ಲದವರ ಧ್ವನಿಯಾಗಿ ಗಟ್ಟಿ. ಸಾರ್ವಜನಿಕರ ಧ್ವನಿಯಾಗಿರುವ ಜನನಾಯಕ ಶ್ರೀ ಸತೀಶ್ ಪೂಜಾರಿ ಕೀಳಿಂಜೆ, ಸಾಮಾಜಿಕ ಹೋರಾಟಗಾರರು ಇವರಿಗೆ ಸೇವಾ ರತ್ನ ಪ್ರಶಸ್ತಿ 2026ಅನ್ನು ವೇದಿಕೆಯಲ್ಲಿ ನೀಡಿ ಗೌರವಿಸಲಾಯಿತು.

ನಂತರ ಪುಟಾಣಿ ಮಕ್ಕಳ 3 ವಿಭಾಗಗಳಲ್ಲಿ ಮುದ್ದು ಕೃಷ್ಣ ಸ್ಪರ್ಧೆ ಜರುಗಿತು. ಬಳಿಕ ಹಗ್ಗ ಜಗ್ಗಾಟ, ಕಣ್ಣಿಗೆ ಬಟ್ಟೆ ಕಟ್ಟಿ ಮೊಸರು ಕುಡಿಕೆ ಒಡೆಯುವ ಭವ್ಯ ಕ್ಷಣಗಳಿಗೆ ಸಾಕ್ಷಿಯಾಯಿತು.

ಸಂಜೆ ಬಹುಮಾನ ವಿತರಣಾ ಸಮಾರೋಪ ಸಮಾರಂಭ ಜರುಗಿತು. ಮುಖ್ಯ ಅತಿಥಿಗಳಾಗಿ *ಶ್ರೀ ಭಾಸ್ಕರ್ ಶೆಟ್ಟಿ, ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್, ಹಾವಂಜೆ,ಶ್ರೀ ರಾಮಮೂರ್ತಿ ಗುಂಡಿಬೈಲು, ಉದ್ಯಮಿಗಳು ಉಡುಪಿ, ಶ್ರೀ ರಮೇಶ್ ಆಚಾರ್ಯ, ಉದ್ಯಮಿಗಳು,ಶಶಿಧರ್ ಮೊಗವೀರ ಉದ್ಯಮಿಗಳು ,ದಾನಿಗಳು , ಸತೀಶ್ ಪೂಜಾರಿ ಕೀಳಂಜೆ ಸಮಾಜಸೇವಕರು ಅತಿಥಿಗಳ ಉಪಸ್ಥಿತಿ ಯಲ್ಲಿ ವಿಜೇತರಿಗೆ ನಗದು ಪುರಸ್ಕಾರ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕರಾದ ಶ್ರೀ ಪ್ರಶಾಂತ್ ಶೆಟ್ಟಿಹಾವಂಜೆ ಕಾರ್ಯಕ್ರಮವನ್ನು ಸ್ವಾಗತಿಸಿ, ಎಲ್ಲಾ ಅತಿಥಿಗಳನ್ನು ಆದರಪೂರ್ವಕವಾಗಿ ಬರಮಾಡಿಕೊಂಡರು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶ್ರೀ ಶಂಕರ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಸುಗುಣ ಶೆಟ್ಟಿ, ಕಾರ್ಯದರ್ಶಿ ಯಕ್ಷೀತ್ ಪೂಜಾರಿ, ಕೋಶಾಧಿಕಾರಿ ಧನುಷ್ ಶೆಟ್ಟಿ, ಸದಸ್ಯರಾದ ಧೀರಜ್, ನೀರಜ್,ದರ್ಶನ್ ಶೆಟ್ಟಿ ,ಸೂರಜ್ , ಕನಿಷ್ಠ, ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಅಂಗನವಾಡಿ ಶಿಕ್ಷಕಿಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು *ಸೂರಜ್ ಶೆಟ್ಟಿ ಹಾವಂಜೆ * ನಿರೂಪಿಸಿದರು

ಐವತ್ತು ಪುಟಾಣಿ ಮಕ್ಕಳು ಭಾಗವಹಿಸಿದ್ದರು. ಮತ್ತು ಯುವಕರಿಗೆ ಮತ್ತು ಮಹಿಳೆಯರಿಗೆ ಹಗ್ಗ ಜಗ್ಗಾಟ ಹಾಗೂ ಮೊಸರು ಕುಡಿಕೆ ಬಹಳಷ್ಟು ಜನ ಭಾಗವಹಿಸಿದರು . 600 750ಕ್ಕೂ ಮಿಕ್ಕಿ. ಜನರ ಸೇರಿದ್ದರು ಈ ಕಾರ್ಯಕ್ರಮದಲ್ಲಿ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now