
ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಸಾಗಿಸಲು ಸರಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.ಅವುಗಳ ಬಗ್ಗೆ ತಿಳಿದುಕೊಂಡು, ಅನುದಾನಗಳನ್ನು ಪಡೆದುಕೊಂಡು , ಅವುಗಳನ್ನು ಸದ್ವಿನಿಯೋಗ ಮಾಡುವುದರ ಮೂಲಕ ಸ್ವಾವಲಂಬಿಗಳಾಗಿ ಜೀವನ ನಡೆಸಲು ಮಹಿಳೆಯರು ಪ್ರಯತ್ನಿಸಬೇಕು.ಎಂಬುದಾಗಿ ಕಾಪು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಶ್ರೀ ವಿಜಯಕುಮಾರ್ ಅವರು ಹೇಳಿದರು.ಕಾಪು ಶ್ರೀ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ ಕಾಪು ಸಂಜೀವಿನಿ ಮಹಿಳಾ ಕಿಸಾನ್ ಉತ್ಪಾದಕಾ ಕಂಪೆನಿ (ನಿ)ಇದರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಂಪೆನಿಯ ಅಧ್ಯಕ್ಷೆ ಶ್ರೀಮತಿ ಉಷಾ ದಯಾನಂದ್ ಅವರು ಅಧ್ಯಕ್ಷತೆಯಲ್ಲಿ ಜರುಗಿದ ಈ ಮಹಾಸಭೆಯಲ್ಲಿ ಕಂಪೆನಿಯ ಕಾರ್ಯನಿರ್ವಹಣಾಧಿಕಾರಿ ರೀನಾ ಹೆಗ್ಡೆ ಅವರು ಸಂಸ್ಥೆಯ ಗತವರ್ಷದ ಚ್ಚವರದಿಯನ್ನು ಮಂಡಿಸುವುದರೊಂದಿಗೆ ವಾರ್ಷಿಕ ಆಯವ್ಯಯಗಳ ಪಟ್ಟಿಯನ್ನೂ ಮಂಡಿಸಿ ಸಭೆಯ ಅನುಮೋದನೆಯನ್ನು ಪಡೆದರು.
ಬ್ರಹ್ಮಾವರದ ರುಢ್ ಸೆಟ್ ತರಬೇತಿ ಸಂಸ್ಥೆಯ ಡಾ.ಬೊಮ್ಮಯ್ಯ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಹಿಳೆಯರಿಗೆ ಉತ್ತಮ ಮಾಹಿತಿಯನ್ನು ನೀಡಿದರು.ಉಡುಪಿ ಜಿಲ್ಲಾ ಪಂಚಾಯತ್ ಎನ್ ಆರ್ ಎಲ್ ಎಮ್ ನ ಸಹಾಯಕ ಪ್ರಬಂಧಕರಾದ ಡಾ.ಸೌಮ್ಯಾ ಕುಮಾರಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಂಪೆನಿಯ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಶುಭಹಾರೈಸಿದರು.ಎನ್ ಆರ್ ಎಲ್ ಎಮ್ ನ ಕಾಪು ತಾಲೂಕು ಸಂಯೋಜಕಿ ಶ್ರೀಮತಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಕಂಪೆನಿಯ ನಿರ್ದೇಶಕರಾದ ಗೀತಾ ವಾಗ್ಳೆ,ಬಂಟಕಲ್ಲು ಅವರು ಸರ್ವರನ್ನೂ ಸ್ವಾಗತಿಸಿ, ಶ್ರೀಮತಿ ಶಾರದೇಶ್ವರಿ ಅವರು ವಂದಿಸಿದರು.ಇನ್ನೋರ್ವ ನಿರ್ದೇಶಕಿ ಪವಿತ್ರಾ ಗಿರೀಶ್ ಅವರು ಕಾರ್ಯಕ್ರಮ ನಿರೂಪಿಸಿದರು.ಪ್ರಜ್ಞಾ ಶಿರ್ವ ಮತ್ತು ಪುಷ್ಪಲತಾ ಅವರು ಪ್ರಾರ್ಥಿಸಿದರು.. ಕಂಪೆನಿಯ ನಿರ್ದೇಶಕರಾದ ಕವಿತಾ ಹಿತೇಂದ್ರ,ಮಮತಾ ವಾಗ್ಳೆ,ಕಸ್ತೂರಿ,ರೇಖಾ ಚಂದ್ರಶೇಖರ್, ಶರ್ಮಿಳಾ,ಶಕುಂತಳಾ, ಹಾಗೂ ಕಂಪೆನಿಯ ಷೇರುದಾರ ಸದಸ್ಯರು,ಎನ್ ಆರ್ ಎಲ್ ಎಮ್ ನ ಕಾಪು ತಾಲೂಕಿನ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಕಂಪೆನಿಯ ಉತ್ಪಾದಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನೂ ಹಮ್ಮಿಕೊಳ್ಳಲಾಗಿತ್ತು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now