
ದಿನಾಂಕ 13 /8/ 26ರಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆಡಳಿತಾಧಿಕಾರಿ ಅಬ್ಬಾಸ್ ಎಂಬವರು ನೀಡಿದ ಪಿರಿಯಾದಿಯ ಸಾರಾಂಶವೇನೆಂದರೆ ಪಿರ್ಯಾದಿದಾರರು ಉಡುಪಿ ಜಿಲ್ಲಾ ನ್ಯಾಯಾಲಯದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸಿಕೊಂಡಿದ್ದು ಅವರ ವ್ಯಾಪ್ತಿಗೆ ಬರುವ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಯ ಸ್ಪೆಷಲ್ ಕೇಸ್ ನಂಬರ್ 31/25( ಸನ್ ಪೊಲೀಸ್ ಸ್ಟೇಷನ್ ಆಕ್ರ ನಂಬರ್ (03/25) ಕ್ರಿಮಿನಲ್ ಮಿಸ್ ನಂಬರ್ 41/26 ರಲ್ಲಿ ಪ್ರಸ್ತುತ ವಿಚಾರಣೆ ನಡೆಯುತ್ತಿದ್ದು ಸದರಿ ಪ್ರಕರಣದಲ್ಲಿ ಆಪಾದಿತ ನೋಮಾನ್ ಎಂಬವನಿಗೆ ಮಾನ್ಯ ನ್ಯಾಯಾಲಯದಲ್ಲಿ ಜಾಮೀನು ನೀಡುವ ಸಮಯ ಫಾರೂಕ್ ಎಂಬಾತನು ಪ್ರಶಾಂತ್ ಎಂಬವರ ಆಧಾರ್ ಕಾರ್ಡ್ ನಂಬರ್ 55 41 78 56 04:51ಕ್ಕೆ ಕೆಟಿ ಮೊಹಮ್ಮದ್ ಎಂಬವರ ಹೆಸರು ಮತ್ತು ವಿಳಾಸವನ್ನು ನಕಲಿಯಾಗಿ ಸೃಷ್ಟಿಸಿ ತನ್ನ ಸ್ವಂತ ಲಾಭಕ್ಕಾಗಿ ಇನ್ನೊಬ್ಬ ವ್ಯಕ್ತಿಯಂತೆ ನಟಿಸಿ ದಿನಾಂಕ 30 ಒಂದು 26ರಂದು ಮಾನ್ಯ ನ್ಯಾಯಾಲಯಕ್ಕೆ ಮೋಸ ಮಾಡುವ ದುರುದ್ದೇಶದಿಂದ ಆಧಾರ್ ಕಾರ್ಡನ್ನು ಭರ್ಜರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಮಾನ್ಯ ನ್ಯಾಯಕ್ಕೆ ಮತ್ತು ನೈಜ ದಾಖಲೆ ಹೊಂದಿರುವ ಮಹಮ್ಮದ್ ಕೆಟಿ ಮತ್ತು ಪ್ರಶಾಂತ್ ಎಂಬವರಿಗೆ ಮೋಸ ಮಾಡಿದ ಆರೋಪಿತನ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿದ ವರದಿ ಎಂಬಿತ್ಯಾದಿ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಆಕ್ರ 110 /2026 ಕಲಂ 319(2)336(3)318(4)229(1)340(2)ಬನ್ಸ್ 2023& ಕಲಂ 35 20 16 ರಂತೆ ಪ್ರಕರಣ ದಾಖಲಾಗಿರುತ್ತದೆ.
ಸದ್ರಿ ಪ್ರಕರಣದ ಆರೋಪಿಗಳಾದ ಉಮ್ಮರ್ ಫಾರೂಕ್ ಬಂಟ್ವಾಳ ಹಾಗೂ ನಿಶಾಂತ್ ಕುಮಾರ್ ನಿಶಾಂತ್ ಕುಮಾರ್ ಮಂಗಳೂರು ಇವರನ್ನು ಉಡುಪಿ ನಗರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳು ನ್ಯಾಯಾಂಗ ಬಂದನದಲ್ಲಿ ಇರುತ್ತಾರೆ.
ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆಯ ಬಗ್ಗೆ ಮೇಲಾಧಿಕಾರಿಗಳ ಆದೇಶದಂತೆ ಉಡುಪಿ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರು ಮಹೇಶ್ ಪ್ರಸಾದ್ ಪಿ ರವರ ಮಾರ್ಗದರ್ಶನದಲ್ಲಿ ಠಾಣೆಯ ಪೊಲೀಸ್ ಉಪನಿರೀಕ್ಷಕ ತನಿಖೆ 2 ರತ್ನಾಕರ ಕೆ ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು ತಂಡದಲ್ಲಿ ಠಾಣೆಯ ಎಎಸ್ಐ ಲೋಕೇಶ್, ಹೆಚ್ ಸಿ ಸಂತೋಷ್, ಹೆಚ್ ಸಿ ಜಗನ್ನಾಥ್ ನಾಯ್ಕ್, ಪಿಸಿ ಆನಂದ್, ಆನಂದಯ್ಯ, ಹಾಗೂ ಮಣಿಪಾಲ ಠಾಣೆಯ ಮಲ್ಲಯ್ಯ ಹಿರೇಮಠ ಮತ್ತು ಹೇಮಂತ್ ಹಾಗೂ ಉಡುಪಿ ನಗರ ಠಾಣೆಯ ಸಿಬ್ಬಂದಿಯವರು ಸಹಕರಿಸಿ ರುತ್ತಾರೆ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now